ಸಾರಾಂಶ
ನಾನು ರೈತ ಮನೆತನದಲ್ಲಿ ಹುಟ್ಟಿ, ಬೆಳೆದವಳು. ಮೊದಲಿನಿಂದಲೂ ಮಹಿಳೆಯರಿಗೆ ಮತ್ತು ರೈತರಿಗೆ ಏನಾದರೂ ಮಾಡಬೇಕೆನ್ನುವ ಆಸೆ ಇತ್ತು. ಈಗ ಮಹಿಳೆಯರಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಅವಕಾಶ ಸಿಕ್ಕಿದರೆ ಕೃಷಿ ಸಚಿವೆಯಾಗಿ ರೈತರಿಗೆ ಏನಾದರೂ ಮಾಡಬೇಕೆನ್ನುವ ಆಸೆ ಇದೆ
ಬೆಳಗಾವಿ: ನಾನು ರೈತ ಮನೆತನದಲ್ಲಿ ಹುಟ್ಟಿ, ಬೆಳೆದವಳು. ಮೊದಲಿನಿಂದಲೂ ಮಹಿಳೆಯರಿಗೆ ಮತ್ತು ರೈತರಿಗೆ ಏನಾದರೂ ಮಾಡಬೇಕೆನ್ನುವ ಆಸೆ ಇತ್ತು. ಈಗ ಮಹಿಳೆಯರಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಅವಕಾಶ ಸಿಕ್ಕಿದರೆ ಕೃಷಿ ಸಚಿವೆಯಾಗಿ ರೈತರಿಗೆ ಏನಾದರೂ ಮಾಡಬೇಕೆನ್ನುವ ಆಸೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಹಿರೇಬಾಗೇವಾಡಿಯ ಪಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಬೆಳಗಾವಿ ಕೃಷಿ ಇಲಾಖೆಯ ವತಿಯಿಂದ ವಿವಿಧ ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆಗೆ ಚಾಲನೆ ನೀಡಿ, ಇಲಾಖೆಯ ವಿವಿಧ ಯೋಜನೆಗಳ ಕೃಷಿ ಪರಿಕರಗಳ ವಿತರಣೆ ಮಾಡಿ ಅವರು ಮಾತನಾಡಿ, ನನಗೆ ರೈತರ ಕಷ್ಟ ಗೊತ್ತು. ರೈತರಿಗೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ, ಶನಿವಾರ, ಭಾನುವಾರ ಎಲ್ಲ ಒಂದೇ.
ಎತ್ತುಗಳ ಜೊತೆ, ದನಗಳ ಜೊತೆ ಬೆಳೆದವಳು ನಾನು. ಚಕ್ಕಡಿಯಲ್ಲಿ ಇಡೀ ಊರೆಲ್ಲ ಅಡ್ಡಾಡುತ್ತಿದ್ದೆವು. ರೈತರ ಮನೆಯಲ್ಲಿ, ಕೃಷಿ ವಾತಾವರಣದಲ್ಲಿ ಬೆಳೆದವಳು ನಾನು. ಹಾಗಾಗಿ ರೈತರಿಗಾಗಿ ಏನಾದರೂ ಮಾಡಬೇಕು ಎನ್ನುವ ಆಸೆ ಇದೆ. ಅದಕ್ಕಾಗಿ ಮುಂದೆ ಅವಕಾಶ ಸಿಕ್ಕರೆ ಕೃಷಿ ಸಚಿವೆಯಾಗುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಮಾರು 1500ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))