ಕಾಂಗ್ರೆಸ್‌ ಗೆದ್ದರೆ 25ಕ್ಕೂ ಹೆಚ್ಚು ವಾಗ್ದಾನ ಅನುಷ್ಠಾನ

| Published : Apr 18 2024, 02:20 AM IST / Updated: Apr 18 2024, 04:47 AM IST

ಕಾಂಗ್ರೆಸ್‌ ಗೆದ್ದರೆ 25ಕ್ಕೂ ಹೆಚ್ಚು ವಾಗ್ದಾನ ಅನುಷ್ಠಾನ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ತಂದಿರುವ ಜಿಎಸ್‌ಟಿಯಿಂದ ಬಡಜನರು ತತ್ತರಿಸಿದ್ದಾರೆ, ಪ್ರತಿ ನಿತ್ಯ ನಾವು ಸೇವೆನೆ ಮಾಡುವ ಊಟ ತಿಂಡಿಗಳಿಗೆ ತೆರಿಗೆ ಕಟ್ಟಬೇಕು,ಕಳೆದ ಹತ್ತು ವರ್ಷಗಳ ಮೋದಿ ಅವರ ಅಡಳಿತದಿಂದ ದೇಶದ ಸಾಲ ಮೀತಿ ಮೀರಿದೆ,

 ಗೌರಿಬಿದನೂರು :  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿಗಳನ್ನು ಸುಮಾರು 4 ಕೋಟಿ ಜನರಿಗೆ ತಲುಪಿದೆ. ಇದರಿಂದ ಬಡಜನರು ಅರ್ಥಿಕವಾಗಿ ಮುಂದುವರಿದಿದ್ದಾರೆ, ಕೇಂದ್ರ ಸರ್ಕಾರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 25ಕ್ಕೂ ಹೆಚ್ಚು ವಾಗ್ದಾನಗಳು ಅನುಷ್ಠಾನಗೊಳ್ಳಿಲಿದೆ ಎಂದು ಮಾಜಿ ಶಾಸಕ ಎನ್,ಎಚ್,ಶಿವಶಂಕರರೆಡ್ಡಿ ತಿಳಿಸಿದರು.

ಇಂದು ಅವರು ನಗರದ ಕೆ.ಇ.ಬಿ. ಉಪ್ಪಾರ ಕಾಲೋನಿ, ನೇಹರೂಜಿ ಕಾಲೋನಿಯಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ರಕ್ಷಾರಾಮಯ್ಯ ಪರ ಮತಯಾಚನೆ ಮಾಡಿದ ಅವರು, ಕಾಂಗ್ರೆಸ್ ಎಂದಿಗೂ ಬಡವರ, ದಲಿತರ, ಅಲ್ಪಸಂಖ್ಯಾತರ ಪರವಾದ ಪಕ್ಷವಾಗಿದೆ. ಅದರೆ ಬಿಜೆಪಿ ಶ್ರೀಮಂತರ ಪಕ್ಷ ಎಂದರು.

ಜಿಎಸ್‌ಟಿಯಿಂದ ಬಡವರು ತತ್ತರ

ಕೇಂದ್ರ ಸರ್ಕಾರ ತಂದಿರುವ ಜಿಎಸ್‌ಟಿಯಿಂದ ಬಡಜನರು ತತ್ತರಿಸಿದ್ದಾರೆ, ಪ್ರತಿ ನಿತ್ಯ ನಾವು ಸೇವೆನೆ ಮಾಡುವ ಊಟ ತಿಂಡಿಗಳಿಗೆ ತೆರಿಗೆ ಕಟ್ಟಬೇಕು,ಕಳೆದ ಹತ್ತು ವರ್ಷಗಳ ಮೋದಿ ಅವರ ಅಡಳಿತದಿಂದ ದೇಶದ ಸಾಲ ಮೀತಿ ಮೀರಿದೆ, ಉತ್ತರ ಭಾರತ ರಾಜ್ಯಗಳಿಗೆ ಒಂದು ನ್ಯಾಯ ದಕ್ಷಿಣ ರಾಜ್ಯಗಳಿಗೆ ಒಂದು ನ್ಯಾಯ ಇವರಿಗೆ ಅಧಿಕಾರ ಕೊಟ್ಟರೆ ಬಡಜನರ ಬದುಕು ಇನ್ನಷ್ಟು ಕಷ್ಟಕರವಾಗಲಿದೆ,ಅದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಸಲು ನಾವು ಪಣ ತೊಡಬೇಕು ಎಂದರು,

ಮಹಿಳೆಯರಿಗೆಗೆ ₹1 ನೆರವುಈ ಬಾರಿ ಕಾಂಗ್ರೆಸ್ ವಾಗ್ದನದಲ್ಲಿ ಪ್ರತಿ ಬಡ ಮಹಿಳೆಗೆ ಒಂದು ಲಕ್ಷ ಅವರ ಖಾತೆ ಜಮಾ ಮಾಡಲಾಗುವುದು,ರೈತಗೆ ಕಾರ್ಮಿಕರಿಗೆ ಅಂಗನವಾಡಿ ಕಾರ್ಯಕರ್ತರಿಗೆ ವಿಧ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಧನ ಸಹಾಯ ಹೀಗೆ 25 ವಾಗ್ದಾನ ನೀಡಲಿದೆ ಎಂದರು. 

ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಬಿಜಿಪಿ ಪಕ್ಷದ ಅಭ್ಯರ್ಥಿ ಡಾ,ಸುಧಾಕರ್ ಅವರು ಸ್ಪರ್ಧೆ ಮಾಡಿದ್ದು ಇವರು ಕೋವಿಡ್-19 ವೇಳೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ಅಕ್ರಮ ಎಸೆಗಿದ್ದಾರೆ,ಇದನ್ನು ತನಿಕೆ ಮಾಡುತ್ತಿದ್ದಾರೆ,ಅಕ್ರಮ ಖಂಡಿತ ಹೊರಬೀಳಲಿದೆ ಇದರಿಂದ ಸುಧಾಕರ್ ಜೈಲ್ ಸೇರುವುದು ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದರು.ಪ್ರಚಾರದ ವೇಳೆಯಲ್ಲಿ ನಗರಸಭೆ ಸದಸ್ಯ ರಫೀಕ್ಖ, ಲೀಮ್ ಉಲ್ಲಾ, ಮುಖಂಡರಾದ ಇಂದ್ರ. ಶಿವಣ್ಣ,ಮಂಜುನಾಥ್, ಸುದರ್ಶನ್, ಇಡಗೂರು ಸೋಮಯ್ಯ, ಸೀನಾ, ಮೂರ್ತಿ, ಅಂಜಿ, ಪೂಜಾರಿ ಅಂಜನಪ್ಪ, ರಮೇಶ್,ಮುಂತಾದವರು ಹಾಜರಿದ್ದರು.