ಸಾರಾಂಶ
ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಡಿ.ಕೆ.ರವಿ ಮತ್ತು ಮನೋಜ್ ಕುಮಾರ್ ಮೀನಾ, ಶಾಸಕರಿಂದ ಸುಮಾರು 47 ಎಕರೆ ಒತ್ತುವರಿಯಾದ ಬಗ್ಗೆ ತನಿಖೆ ನಡೆಸಿ ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧವಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದು ವಿಚಾರಣೆ ಹಂತದಲ್ಲಿದೆ.
ಕೋಲಾರ : ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಧಾರ ರಹಿತವಾದ ಸತ್ಯಕ್ಕೆ ದೂರವಾದ ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿರುವುದು ಅವರ ಘನತೆಗೆ ಕ್ಷೆಭೆ ತರುವುದಿಲ್ಲ, ಯಾವೂದಾದರೂ ಅರೋಪಗಳನ್ನು ಮಾಡುವುದಿದ್ದರೆ ದಾಖಲೆಗಳ ಸಮೇತ ಮಾಡಲಿ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊನ್ನೆ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ನನ್ನ ವಿರುದ್ಧ ವಾಗಿ ಬಹಿರಂಗ ಸಭೆಯಲ್ಲಿ, ತಾವು ಯಲಹಂಕ, ಹೆಬ್ಬಾಳದಲ್ಲಿ ನಿವೇಶ, ಮನೆಗಳು ಆಸ್ತಿಪಾಸ್ತಿಗಳನ್ನು ಅಕ್ರಮವಾಗಿ ಮಾಡಿರುವುದಾಗಿ ಸುಳ್ಳು ಅರೋಪಗಳನ್ನು ಮಾಡಿದ್ದಾರೆ. ಇದಕ್ಕೆ ದಾಖಲೆಗಳನ್ನು ನೀಡಿದರೆ ಆ ಆಸ್ತಿಗಳನೆಲ್ಲಾ ದಾನ ಮಾಡಿಬಿಡುತ್ತೇನೆ ಎಂದು ಸವಾಲ್ ಹಾಕಿದರು.
ಭೂ ಒತ್ತುವರಿ ಮಾಡಿದ್ದು ಯಾರು?
ನಾನು ೪ ಬಾರಿ ಶಾಸಕನಾಗಿದ್ದೆ ಯಾವುದೇ ಆಸ್ತಿಪಾಸ್ತಿಗಳನ್ನು ಮಾಡಿಲ್ಲ. ಕಾನ್ಫೆಫೆಡೆಂಟ್ ಗ್ರೂಪ್ ನಿರ್ದೇಶಕರಾಗಿರುವ ಶಾಸಕರು ಸರ್ಕಾರದ ಜಮೀನುಗಳು, ಕೆರೆಗಳು ಗೋಮಾಳ ಜಮೀನುಗಳು ಯಾರು ಒತ್ತುವರಿ ಮಾಡಿಸಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬುವುದು ಜನಜನಿತವಾಗಿರುವ ವಿಷಯ ಎಂದು ಹೇಳಿದರು.
47 ಎಕರೆ ಒತ್ತುವರಿ ಪ್ರಕರಣ
ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಡಿ.ಕೆ.ರವಿ ಮತ್ತು ಮನೋಜ್ ಕುಮಾರ್ ಮೀನಾ, ಶಾಸಕರಿಂದ ಸುಮಾರು 47 ಎಕರೆ ಒತ್ತುವರಿಯಾಗಿರವ ಬಗ್ಗೆ ತನಿಖೆ ನಡೆಸಿ ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧವಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದು ವಿಚಾರಣೆ ಹಂತದಲ್ಲಿದೆ. ಆಗ ತಮ್ಮ ರಾಜಕೀಯ ಪ್ರಭಾವ ಬಳಸಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ಹಬ್ಬ ಮಾಡಿ ಕೊಂಡಿದ್ದು ಯಾರು ಎಂದು ಪ್ರಶ್ನಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಪಿ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಹೆಬ್ಬಟಿ ನಾರಾಯಣಗೌಡ, ಸೀಸಂದ್ರ ರಮೇಶ್, ಹುತ್ತೂರು ರಮೇಶ್ ಇದ್ದರು.