ನನ್ನ ಬೇಡಿಕೆಗೆ ನಾಯಕರು ಒಪ್ಪಿದರೆ ಮತ್ತೆ ಬಿಜೆಪಿಗೆ: ಕೆ.ಎಸ್‌. ಈಶ್ವರಪ್ಪ

| Published : Jul 09 2024, 12:26 PM IST / Updated: Jul 09 2024, 12:27 PM IST

KS Eshwarappa
ನನ್ನ ಬೇಡಿಕೆಗೆ ನಾಯಕರು ಒಪ್ಪಿದರೆ ಮತ್ತೆ ಬಿಜೆಪಿಗೆ: ಕೆ.ಎಸ್‌. ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಮರಳಿ ಬಿಜೆಪಿ ಸೇರಿ ಪಕ್ಷವನ್ನು ಬಲಪಡಿಸುವಂತೆ ಬಿಜೆಪಿ ಮುಖಂಡರಿಂದ ನನಗೆ ಕರೆ ಬಂದಿರುವುದು ನಿಜ. ಆದರೆ, ನನಗೆ ನಾಲ್ಕು ಬಾರಿ ಪಕ್ಷದಿಂದ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ : ನಾನು ಮರಳಿ ಬಿಜೆಪಿ ಸೇರಿ ಪಕ್ಷವನ್ನು ಬಲಪಡಿಸುವಂತೆ ಬಿಜೆಪಿ ಮುಖಂಡರಿಂದ ನನಗೆ ಕರೆ ಬಂದಿರುವುದು ನಿಜ. ಆದರೆ, ನನಗೆ ನಾಲ್ಕು ಬಾರಿ ಪಕ್ಷದಿಂದ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. 

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘ಪಕ್ಷ ನಿಷ್ಟನಾಗಿ ಪಕ್ಷ ಹೇಳಿದ ಎಲ್ಲಾ ಕಾರ್ಯ ನಿಭಾಯಿಸಿದ್ದೇನೆ. ನನ್ನ ಬೇಡಿಕೆಗೆ ನಾಯಕರು ಒಪ್ಪಿದರೆ ನಾನು ಮತ್ತೆ ಪಕ್ಷಕ್ಕೆ ಬರುತ್ತೇನೆ. ಈಗ ಸದ್ಯಕ್ಕೆ ತುರ್ತು ಇಲ್ಲ’ ಎಂದು ಹೇಳಿದರು. ಮುಡಾ ಸೈಟ್ ಹಗರಣದ ಬಗ್ಗೆ ಮಾತನಾಡಿದ ಈಶ್ವರಪ್ಪ,‘ ಹಗರಣದಲ್ಲಿ ಹೆಣ್ಣು ಮಕ್ಕಳನ್ನು ಬೀದಿಗೆ ತರಲಾಗಿದೆ. ಹಗರಣ ನಡೆದೇ ಇಲ್ಲವೆಂದರೆ ತನಿಖೆಗೆ ಒಪ್ಪಿಸಿದ್ದೇಕೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಇರುವುದು ಮಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

 ಕೈ ವಿರುದ್ಧ ಹಿಂದೂಗಳು ತಿರುಗಿ ಬೀಳಲಿದ್ದಾರೆ:

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಬಗ್ಗೆ ಕಿಡಿಕಾರಿದ ಈಶ್ವರಪ್ಪ,‘ವಿರೋಧ ಪಕ್ಷದ ಸ್ಥಾನದಲ್ಲಿರುವ ರಾಹುಲ್‍ ಗಾಂಧಿಯವರು ಗೌರವದಿಂದ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇಡೀ ಹಿಂದೂ ಸಮಾಜ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬೀಳುತ್ತದೆ ಎಂದು ಎಚ್ಚರಿಸಿದರು.