ಚುನಾವಣೆಯಲ್ಲಿ ಸೋತವನ ಕಂಡರೆ ಯಾಕಿಷ್ಟು ಭಯ?

| Published : Apr 23 2024, 12:47 AM IST / Updated: Apr 23 2024, 04:41 AM IST

ಸಾರಾಂಶ

ಇವತ್ತು ಮೋದಿ ಮತ್ತು ಕುಮಾರಸ್ವಾಮಿ ಇಬ್ಬರೂ ಒಂದಾಗಿದ್ದಾರೆ ಮೋದಿಯ ಸುವರ್ಣ ಯುಗದಲ್ಲಿ ನಾವು ಇದ್ದೇವೆ ಎಂಬುದು ಇತಿಹಾಸ. ಕ್ಷೇತ್ರದಲ್ಲಿ ನೀರು ಕೊಟ್ಟ ಭಗೀರಥ ಸೋತಿದ್ದಾನೆ.

 ಶ್ರೀನಿವಾಸಪುರ : ನಾನು ಚುನಾವಣೆಯಲ್ಲಿ ಸೋತು ಮನೆಯಲ್ಲಿ ಇದ್ದು ತೋಟ ನೋಡಿಕೊಂಡು ಇದ್ದೇನೆ. ಆದರೂ ನನ್ನನ್ನು ಕಂಡರೆ ಯಾಕೆ ಅಷ್ಟೊಂದು ಭಯ ಪಡತ್ತೀರಾ, ನನ್ನ ಯೋಗ್ಯತೆ ಎದುರಿಸುವ ಶಕ್ತಿ ಇಲ್ಲದೇ ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದು ವಿರೋಧಿಗಳ ವಿರುದ್ದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸುಗಟೂರು ಮತ್ತು ಹೋಳೂರು ಗ್ರಾಮಗಳಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಟಿಕೆಟ್‌ ಪಡೆದು ದ್ರೋಹ

ಕಾಂಗ್ರೆಸ್ ಟಿಕೆಟ್ ಪಡೆದು ದ್ರೋಹ ಮಾಡಿದವರಿಗೆ ನೀತಿ ನಿಯಮಗಳ ಪ್ರಕಾರ ಅನರ್ಹ ಎನ್ನದೇ ಇನ್ನೂ ಏನು ಅನ್ನಬೇಕು. ಅಂತಹ ಮಹಾನುಭಾವರು ನನ್ನ ಸೋಲಿಸಲು ಬಂಡವಾಳ ಹಾಕಿದ್ದಾರೆ. ಅವರೊಂದಿಗೆ ಈ ಕೊಚ್ಚೇ ನೀರಿನ ಅಪಪ್ರಚಾರ, ಜೆಡಿಎಸ್ ಬಿಜೆಪಿಯವರು, ನಮ್ಮ ಸಮುದಾಯದ ವ್ಯಕ್ತಿಯನ್ನು ಸೋಲಿಸಿದ ಅಂತ ಇವರೊಂದಿಗೆ ಖಾಸಗಿ ನರ್ಸಿಂಗ್ ಆಸ್ಪತ್ರೆಗಳ ಮಾಲೀಕರು ಎಲ್ಲರೂ ಒಗ್ಗಟ್ಟಿನಿಂದ ನನ್ನ ವಿರುದ್ದ ಕೆಲಸ ಮಾಡಿ ಸೋಲಿಸಿದ್ದಾರೆ ಎಂದರು. 

ಭಗೀರಥನಿಗೆ ಸೋಲು

ದೇಶದಲ್ಲಿ ಆದಾಯ ತೆರಿಗೆ ಇಲಾಖೆ, ಇಡಿ, ಐಟಿ ಬಿಜೆಪಿಯ ಕೈಗೊಂಬೆಗಳಾಗಿವೆ. ಅವರು ಮನೆಹಾಳು ಕೆಲಸದಿಂದಾಗಿ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರನ್ನು ಬಂಧಿಸಿ ಜೈಲಿನಲ್ಲಿ ಇಟ್ಟಿದ್ದಾರೆ. ಇವತ್ತು ಮೋದಿ ಮತ್ತು ಕುಮಾರಸ್ವಾಮಿ ಇಬ್ಬರೂ ಒಂದಾಗಿದ್ದಾರೆ ಮೋದಿಯ ಸುವರ್ಣ ಯುಗದಲ್ಲಿ ನಾವು ಇದ್ದೇವೆ ಎಂಬುದು ಇತಿಹಾಸ. ಕ್ಷೇತ್ರದಲ್ಲಿ ನೀರು ಕೊಟ್ಟ ಭಗೀರಥ ಸೋತಿದ್ದಾನೆ. ತಾವು ಒಕ್ಕಲಿಗ ಅಲ್ಲ ಎಂದು ನನ್ನ ಸೋಲಿಸಿದಿರಾದ್ದಾರಾ ಎಂದು ಪ್ರಶ್ನಿಸಿದರು.

ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, ರಮೇಶ್ ಕುಮಾರ್ ಒಕ್ಕಲಿಗರು ಹೆಚ್ಚು ವ್ಯವಸಾಯ ಮಾಡುವ ಜನ ಅವರ ಹೆಸರು ಹೇಳಿಕೊಂಡು ಬಂದವರು ಏನು ಮಾಡಿದ್ದರಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಇವತ್ತು ಅವರ ಮೇಲೆ ಅಪ್ರಚಾರ ನಡೆಯುತ್ತಾ ಇದೆ ಒಕ್ಕಲಿಗರ ಮಧ್ಯೆ ವಿಷಬೀಜ ಬಿತ್ತುವುದು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಕೊಡಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ಜಾತಿಯ ಹೆಸರಿನಲ್ಲಿ ಜೆಡಿಎಸ್ ಅಪವಿತ್ರ ಮೈತ್ರಿಯಾಗಿದ್ದು ಜನ ಎಚ್ಚರಿಕೆಯಿಂದ ಮತ ಹಾಕಬೇಕು ಎಂದರು

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ ಕೃಷ್ಣಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ವೆಲಗಬುರ್ರೆ ಶಶಿಧರ್, ಚಂಜಿಮಲೆ ರಮೇಶ್, ಸುಗಟೂರು ಸೊಸೈಟಿ ಅಧ್ಯಕ್ಷ ಅಂಕತಟ್ಟಿ ಬಾಬು ಇದ್ದರು.