ಸಾರಾಂಶ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ಗಾಂಜಾ ಸರಬರಾಜು ಮಾಡುತಿದ್ದ ರಾಜಾಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗಾಂಜಾ ಸರಬರಾಜು ಮಾಡುತಿದ್ದ ರಾಜಾಸ್ಥಾನ ಮೂಲದ ಭರತ್ ಕುಮಾರ್(22)ಎಂಬಾತನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಚಿಕ್ಕಬಳ್ಳಾಪುರಕ್ಕೆ ಗಾಂಜಾ ಸರಬರಾಜು ಮಾಡುತಿದ್ದ ಮಾಹಿತಿ ಸಂಗ್ರಹಿಸಿದ ನಗರಠಾಣಾ ಪಿಎಸ್ಐ ನಂಜುಂಡಯ್ಯ ಮತ್ತು ಸಿಬ್ಬಂದಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಗಾಂಜಾ ತರುತಿದ್ದ ಭರತ್ ಕುಮಾರ್ ನನ್ನು ನಗರದ ವಾಪಸಂದ್ರ ಬ್ರಿಡ್ಜ್ ಬಳಿ ಬಂಧಿಸಿ, ಆತನಿಂದ ಸುಮಾರು 20 ಸಾವಿರ ರು. ಮೌಲ್ಯದ 920 ಗ್ರಾಂ ಗಾಂಜಾವನ್ನು ಮಾಲು ಸಮೇತ ಹಿಡಿದಿದ್ದಾರೆ. ಈತ ಗೌರಿಬಿದನೂರು ಬಟ್ಟೆಯಂಗಡಿಯೊಂದರಲ್ಲಿ ವ್ಯಾಪಾರ ಮಾಡುತ್ತಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಈ ದಂದೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆಗೆ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.
ಸಿಕೆಬಿ-7 ಗಾಂಜಾ ಮಾರುತ್ತಿದ್ದ ಆರೋಪಿಯೊಂದಿಗೆ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು