ಸಾರಾಂಶ
ಇಂಡಿಯಾ ಮೈತ್ರಿ ಕೂಟವು ಸಂವಿಧಾನವನ್ನು ರಕ್ಷಿಸಲಿದೆ. ನಮ್ಮ ಹೃದಯ, ಆತ್ಮ, ರಕ್ತದೊಂದಿಗೆ ಸಂವಿಧಾನ ರಕ್ಷಣೆಗೆ ಬದ್ಧರಾಗಿರುತ್ತೇವೆ. ಇಂಡಿಯಾ ಕೂಡ ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿಯನ್ನು ಕೊನೆಗೊಳಿಸಿ, ಅದನ್ನು ಹೆಚ್ಚಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಬನ್ಸ್‌ಗಾಂವ್ (ಉ.ಪ್ರದೇಶ): ಇಂಡಿಯಾ ಮೈತ್ರಿ ಕೂಟವು ಸಂವಿಧಾನವನ್ನು ರಕ್ಷಿಸಲಿದೆ. ನಮ್ಮ ಹೃದಯ, ಆತ್ಮ, ರಕ್ತದೊಂದಿಗೆ ಸಂವಿಧಾನ ರಕ್ಷಣೆಗೆ ಬದ್ಧರಾಗಿರುತ್ತೇವೆ. ಇಂಡಿಯಾ ಕೂಡ ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿಯನ್ನು ಕೊನೆಗೊಳಿಸಿ, ಅದನ್ನು ಹೆಚ್ಚಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಮಂಗಳವಾರ ಇಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್, ‘ಒಂದು ಕಡೆಯಲ್ಲಿ ಸಂವಿಧಾನ ಮತ್ತು ಇಂಡಿಯಾ ಮೈತ್ರಿಕೂಟವಿದೆ. ಮತ್ತೊಂದೆಡೆ ಸಂವಿಧಾನವನ್ನು ಮುಗಿಸಬೇಕು ಅಂದು ಕೊಂಡಿರುವರು ಇದ್ದಾರೆ. ಆದರೆ ಇಂಡಿಯಾ ಮಹಾಮೈತ್ರಿ ಹೃದಯ, ಆತ್ಮ, ರಕ್ತದೊಂದಿಗೆ ಸಂವಿಧಾನವನ್ನು ರಕ್ಷಿಸುತ್ತದೆ’ ಎಂದಿದ್ದಾರೆ.ಇದೇ ಸಂದರ್ಭದಲ್ಲಿ ತನ್ನನ್ನು ದೇವರು ಕಳುಹಿಸಿದ್ದಾನೆ ಎನ್ನುವ ಮೋದಿ ಮಾತಿಗೆ ವ್ಯಂಗ್ಯವಾಡಿದ ರಾಹುಲ್ ಗಾಂಧಿ, ‘ದೇವರು ಮೋದಿಯನ್ನು ಬಡವರಿಗೆ ಸಹಾಯ ಮಾಡಲು ಕಳುಹಿಸಿಲ್ಲ. ಬದಲಿಗೆ ಅದಾನಿಗೆ ಸಹಾಯ ಮಾಡಲು ಕಳುಹಿಸಿದ್ದಾನೆ.’ ಎಂದರು.