ಪ್ರಮುಖರ ಗೈರು ಹಿನ್ನೆಲೆ: ಇಂದಿನ ಇಂಡಿಯಾ ಸಭೆ ಮುಂದೂಡಿಕೆ

| Published : Dec 06 2023, 01:15 AM IST

ಪ್ರಮುಖರ ಗೈರು ಹಿನ್ನೆಲೆ: ಇಂದಿನ ಇಂಡಿಯಾ ಸಭೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಮುಖ ವಿಪಕ್ಷ ನಾಯಕರು ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಡಿ.6ರ ಬುಧವಾರದಂದು ನಡೆಯಬೇಕಿದ್ದ ‘ಇಂಡಿಯಾ’ ಮೈತ್ರಿಕೂಟದ ಸಭೆಯನ್ನು ಮುಂದೂಡಲಾಗಿದೆ.

ನಿತೀಶ್‌, ಮಮತಾ, ಸ್ಟಾಲಿನ್‌ ಸಭೆಗೆ ಹಾಜರಾಗುತ್ತಿಲ್ಲ

ಹೀಗಾಗಿ ಇನ್ನು 2 ವಾರ ಬಿಟ್ಟು ಸಭೆ ನಡೆಸುವ ನಿರೀಕ್ಷೆ

ನವದೆಹಲಿ: ಪ್ರಮುಖ ವಿಪಕ್ಷ ನಾಯಕರು ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಡಿ.6ರ ಬುಧವಾರದಂದು ನಡೆಯಬೇಕಿದ್ದ ‘ಇಂಡಿಯಾ’ ಮೈತ್ರಿಕೂಟದ ಸಭೆಯನ್ನು ಮುಂದೂಡಲಾಗಿದೆ. ಆದರೆ ಮುಂದಿನ ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಇನ್ನು 2 ವಾರ ಬಿಟ್ಟು ಸಭೆ ನಡೆಸುವ ನಿರೀಕ್ಷೆ ಇದೆ.

ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಸಂಜೆ ತಮ್ಮ ನಿವಾಸಲ್ಲಿ ಇಂಡಿಯಾ ಕೂಟದ ಸಭೆಗೆ ನಾಯಕರನ್ನು ಆಹ್ವಾನಿಸಿದ್ದರು. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್‌, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಸೇರಿದಂತೆ ಪ್ರಮುಖ ನಾಯಕರು ಅವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲಎಂದು ತಿಳಿಸಿದ್ದಾರೆ. ಹೀಗಾಗಿ ಸಭೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಅಲ್ಲದೇ ಆಪ್‌ ಪಕ್ಷವು ಸಭೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಗೆಲುವು ಸಾಧಿಸುವ ಬಗ್ಗೆ ಕಾರ್ಯತಂತ್ರ ರೂಪಿಸುವುದು, ಟಿಕೆಟ್‌ ನೀಡುವುದು, ವಿಧಾನಸಭೆ ಚುನಾವಣೆಯಲ್ಲಿನ ಸೋಲು ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು.