ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ಸಂವಿಧಾನದ ಪರಿಚ್ಛೇದ ೧೯ (೧) (ಅ) ಅಡಿಯಲ್ಲಿ ಕಲ್ಪಿಸಲಾಗಿದೆ. ಎಲ್ಲಿಯೂ ಕೂಡ ಇಂತಹ ಸಂಘ, ಸಂಸ್ಥೆ ಮತ್ತು ಒಕ್ಕೂಟಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ಹೇಳಿಲ್ಲ.
ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ಸಂವಿಧಾನದ ಪರಿಚ್ಛೇದ ೧೯ (೧) (ಅ) ಅಡಿಯಲ್ಲಿ ಕಲ್ಪಿಸಲಾಗಿದೆ. ಎಲ್ಲಿಯೂ ಕೂಡ ಇಂತಹ ಸಂಘ, ಸಂಸ್ಥೆ ಮತ್ತು ಒಕ್ಕೂಟಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ಹೇಳಿಲ್ಲ. ನೋಂದಣಿ ಕಡ್ಡಾಯ ಮಾಡುವಂತಹ ಕಾನೂನು ತರಲು ಸಾಧ್ಯವಿಲ್ಲ. ಅದನ್ನು ತಂದರೂ ನ್ಯಾಯಾಲಯಗಳಲ್ಲಿ ಅದರ ಸಿಂಧುತ್ವವನ್ನು ಉಳಿಸಿಕೊಳ್ಳುವುದು ಆಗುವುದಿಲ್ಲ.
ಡಾ।। ಅರುಣ ಶ್ಯಾಮ್.ಎಂ
ಹಿರಿಯ ವಕೀಲರು ಮತ್ತು
ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಭಾರತ. ಇಲ್ಲಿ ಪ್ರಜೆಗಳೇ ಪ್ರಭುಗಳು, ಜನರಿಂದ, ಜನರಿಗೋಸ್ಕರ, ಜನರೇ ನಡೆಸುವ ಸರ್ಕಾರದ ವ್ಯವಸ್ಥೆ ರೂಪಿಸಲಾಗಿದೆ. ಇಡೀ ದೇಶದ ವ್ಯವಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂಬ ಚೌಕಟ್ಟಿನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂವಿಧಾನದ ಆಶೋತ್ತರಕ್ಕೆ ವಿರುದ್ಧವಾಗಿ ಯಾವುದೇ ಸಂಗತಿಗಳು ನಡೆಯುವಂತಿಲ್ಲ. ದೇಶದಲ್ಲಿ ಕಾನೂನು ಕೂಡ ಈ ವ್ಯಾಪ್ತಿಯಲ್ಲಿಯೇ ಇರಬೇಕಾಗುತ್ತದೆ. ವ್ಯಾಪ್ತಿ ಮೀರಿದ ಕಾನೂನು ಕೂಡ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ಅಸಿಂಧು ಅಥವಾ ಸಂವಿಧಾನ ವಿರೋಧಿ ಎಂದೇ ಘೋಷಿಸಲ್ಪಡುವುದು.
ಈ ದೇಶದ ಪ್ರಜೆಗಳಿಗೆ ಸಂವಿಧಾನದತ್ತವಾಗಿ ಬಂದಂತಹ ಮೂಲಭೂತ ಹಕ್ಕುಗಳಲ್ಲಿ ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ಸಂವಿಧಾನದ ಪರಿಚ್ಛೇದ ೧೯ (೧) (ಅ) ಅಡಿಯಲ್ಲಿ ಕಲ್ಪಿಸಲಾಗಿದೆ. ಹಾಗೆಯೇ ಸಂಘ, ಒಕ್ಕೂಟ ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸುವ, ನಡೆಸುವ ಅಥವಾ ಅಂತಹ ಸ್ಥಾಪಿತವಾದ ಸಂಘ-ಸಂಸ್ಥೆ, ಒಕ್ಕೂಟಗಳ ವ್ಯವಹಾರಗಳನ್ನು ಮುಕ್ತಾಯಗೊಳಿಸುವ ಹಕ್ಕುಗಳು ತನ್ನಿಂದ ತಾನೇ ಅಸ್ತಿತ್ವದಲ್ಲಿವೆ. ಸಂವಿಧಾನ ಕೇವಲ ಈ ಹಕ್ಕನ್ನು ನೀಡಿ ಒಕ್ಕೂಟಗಳನ್ನು ಸ್ಥಾಪಿಸುವ ಅಥವಾ ನಡೆಸುವ ಹಕ್ಕನ್ನು ನೀಡಿದೆಯೇ ಹೊರತು, ಎಲ್ಲಿಯೂ ಇಂತಹ ಸಂಘ, ಸಂಸ್ಥೆ ಮತ್ತು ಒಕ್ಕೂಟಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಹಾಗಾಗಿ ನೋಂದಣಿ ಎನ್ನುವುದು ಐಚ್ಛಿಕ ವಿಷಯವಾಗಿಯೇ ಉಳಿದುಕೊಂಡಿದೆ. ನ್ಯಾಯಾಲಯಗಳು ಕೂಡ ಹಲವಾರು ಪ್ರಕರಣಗಳಲ್ಲಿ ನೋಂದಣಿ ಕಡ್ಡಾಯವಲ್ಲ ಎಂದೇ ಹೇಳಿವೆ.
ಅಪೇಕ್ಷೆ ಪಟ್ಟರಷ್ಟೇ ನೋಂದಣಿ
ಸಂವಿಧಾನದ ಪರಿಚ್ಛೇದ ೧೯(4)ರ ಪ್ರಕಾರ ಸಂಘ, ಒಕ್ಕೂಟ, ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲು ಕೊಟ್ಟ ಸ್ವಾತಂತ್ರ್ಯದಲ್ಲಿ ಕೆಲವೊಂದು ಮಿತಿಗಳನ್ನು ಕಾನೂನು ಮುಖಾಂತರ ಹೇರಲು ಸರ್ಕಾರಕ್ಕೆ ಅವಕಾಶ ಕೊಟ್ಟಿದೆ. ಅವುಗಳಲ್ಲಿ ದೇಶದ ಅಖಂಡತೆ, ಸಾರ್ವಭೌಮತ್ವ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಯ ಆಧಾರದಲ್ಲಿ ಕಾನೂನು ಮುಖಾಂತರ ನಿಯಂತ್ರಿಸಲು ಅವಕಾಶವಿದೆ. ಈ ವಿಷಯಕ್ಕೆ ಬರುವ ಕಾನೂನುಗಳೆಲ್ಲಾ ಸಂವಿಧಾನದ ಚೌಕಟ್ಟು ವ್ಯಾಪ್ತಿಯನ್ನು ಮೀರುವಂತಿಲ್ಲ ಮತ್ತು ಕಾನೂನಿನ ಹೊರತಾಗಿ ಈ ಮೂಲಭೂತ ಹಕ್ಕನ್ನು ನಿಯಂತ್ರಿಸುವ ಅವಕಾಶ ಇಲ್ಲ. ಸಂವಿಧಾನದ ಅನುಚ್ಛೇದ-೭ರಲ್ಲಿ ಪಟ್ಟಿ-೧ರ ಸಂಖ್ಯೆ-೪೪ ರಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಸಂಘ-ಸಂಸ್ಥೆಗಳ ವಿಚಾರಗಳ ಕಾನೂನನ್ನು ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಅನುಚ್ಛೇದ ೭ರ ೨ನೇ ಪಟ್ಟಿಯ ಸಂಖ್ಯೆ ೩೨ರ ಪ್ರಕಾರ ರಾಜ್ಯ ಸರ್ಕಾರಗಳು ಕೂಡ ಆ ರಾಜ್ಯಕ್ಕೆ ಸೀಮಿತವಾದ ಸಂಘ-ಸಂಸ್ಥೆಗಳ ಕಾನೂನು ಹೊಂದಲು ಅವಕಾಶವಿದೆ. ಈ ರೀತಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಗೆ ಬರುವ ಸಂಘ-ಸಂಸ್ಥೆಗಳ ವಿಚಾರವಾಗಿ ಈಗಾಗಲೇ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿವೆ. ಈ ಎಲ್ಲಾ ಕಾನೂನುಗಳಲ್ಲಿ ಕೂಡ ಪ್ರಜೆಗಳಿಗೆ ತಮ್ಮದೇ ಆದ ಸಂಘ-ಸಂಸ್ಥೆಗಳನ್ನು ತಾವು ಅಪೇಕ್ಷೆ ಪಟ್ಟರೆ ನೋಂದಣಿ ಮಾಡಿಸಿಕೊಂಡು ಅನ್ವಯವಾಗುವ ಕಾನೂನಿನ ಅಡಿಯಲ್ಲಿ ತಮ್ಮ ಎಲ್ಲಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬಹುದು. ಆದರೆ, ನೋಂದಣಿ ಕೇವಲ ಐಚ್ಛಿಕ ವಿಷಯ ಎನ್ನುವಂಥದ್ದು ಬಹಳ ಮುಖ್ಯವಾದ ಸಂಗತಿ.
ಆದರೆ, ಕಾನೂನಿನ ಅಡಿಯಲ್ಲಿ ಬರುವಂತಹ ಅಥವಾ ಸರ್ಕಾರದ ಕೆಲವೊಂದು ಅನುಕೂಲತೆ ಅಥವಾ ಸವಲತ್ತುಗಳನ್ನು ಪಡೆಯಬೇಕಾದಾಗ ನೋಂದಣಿಯ ಅವಶ್ಯಕತೆ ಬರಬಹುದು. ಹಾಗಾಗಿಯೇ ಅನೇಕ ಖಾಸಗಿ ಸಂಘ-ಸಂಸ್ಥೆಗಳು ನಮ್ಮ ದೇಶದಲ್ಲಿ ಇಂದಿಗೂ ಕೂಡ ನೋಂದಣಿ ಮಾಡಿಸಿಕೊಳ್ಳದೇ ಅಸ್ತಿತ್ವದಲ್ಲಿವೆ. ನೋಂದಣಿಯಾಗದ ಖಾಸಗಿ ಸಂಘ-ಸಂಸ್ಥೆಗಳಿಗೂ ಕೂಡ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಖಾಯಂ ಖಾತೆ ಸಂಖ್ಯೆ (PAN Number) ಹೊಂದಲು ಕೂಡಾ ಅವಕಾಶ ಇದೆ. ಮಾತ್ರವಲ್ಲ, ತಮ್ಮ ವರ್ಷಾವಧಿ ಲೆಕ್ಕ-ಪತ್ರ ಸಲ್ಲಿಸಲೂ ಅವಕಾಶವಿದೆ. ಆದರೆ, ಕಲಂ ೮೦ಉ, ೧೨ಂ ಅಂತಹ ಅಡಿಯಲ್ಲಿ ಬರುವಂತಹ ಮಾನ್ಯತೆ ಅಥವಾ ವಿನಾಯಿತಿ ಪಡೆಯಲು ಬೇಕಾದಲ್ಲಿ ನೋಂದಣಿ ಅವಶ್ಯಕತೆ ಬರುತ್ತದೆ. ವ್ಯಕ್ತಿಗಳ ಸಮೂಹ (Body of Individuals) ಆಗಿ ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ ಎಂದು ದೇಶದ ನ್ಯಾಯಾಲಯಗಳು ಬೇರೆ ಬೇರೆ ಪ್ರಕರಣಗಲ್ಲಿ ಹೇಳಿವೆ. ಲೆಕ್ಕ-ಪತ್ರ, ವ್ಯವಹಾರ ಮಾಡಲು ಅವಕಾಶ (ಇಂಗ್ಲಿಷ್ ಇದೆ)
ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಆರ್‌ಎಸ್ಎಸ್ ಸಂಗ್ರಹಿಸುವ ಗುರುದಕ್ಷಿಣೆ ತೆರಿಗೆ ಮೌಲ್ಯಮಾಪನದಿಂದ ವಿನಾಯಿತಿ ಹೊಂದಿದೆ ಎಂದು ಪಟನಾ ಉಚ್ಚ ನ್ಯಾಯಾಲಯವು ‘February 22, 1994 Commissioner of Income Tax, Bihar Vs. Rashtriya Swayam Sevak Sangh’ ಪ್ರಕರಣದಲ್ಲಿ ತೀರ್ಪು ನೀಡಿರುವುದರಿಂದ ಖಾಸಗಿ ಸಂಘ-ಸಂಸ್ಥೆಗಳಿಗೆ ಸ್ವಯಂ ಪ್ರೇರಿತವಾಗಿ ನೀಡುವಂತಹ ದಕ್ಷಿಣೆ ತೆರಿಗೆಯಿಂದ ವಿನಾಯಿತಿ ಹೊಂದಿದೆ ಎನ್ನುವುದು ಉಲ್ಲೇಖನೀಯ ಸಂಗತಿ. ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸಂಪರ್ಕ, ಸಂವಾದ, ಅಭ್ಯಾಸ, ವರ್ಗ, ಕಾರ್ಯಾಗಾರ, ವಿಕಾಸ ವರ್ಗ ಇತ್ಯಾದಿಗಳನ್ನು ಖಾಸಗಿ ಸಂಘ, ಸಂಸ್ಥೆ, ಒಕ್ಕೂಟ ನಡೆಸಲು ಸ್ವಾತಂತ್ರ್ಯವನ್ನು ಹೊಂದಿದೆ. ಆದರೆ, ಆಸ್ತಿ-ಪಾಸ್ತಿ ಅಥವಾ ಕೆಲವೊಂದು ಕಾನೂನಿನಡಿಯಲ್ಲಿ ವ್ಯವಹಾರ ನಡೆಸಲು ನ್ಯಾಸ ಕಾಯ್ದೆ-೧೮೮೨, ಸಂಘಗಳ ನೋಂದಣಿ ಕಾಯ್ದೆ-೧೮೬೦, ಸಹಕಾರಿ ಸಂಘಗಳ ಕಾಯ್ದೆ, ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ ಇತ್ಯಾದಿ ಕಾನೂನಿನ ಅಡಿಯಲ್ಲಿ ನೋಂದಾಯಿಸಿದ ಸಂಸ್ಥೆಗಳ ಮುಖಾಂತರವೇ ಹೊಂದಬೇಕಾಗುತ್ತದೆ. ಈ ರೀತಿ ಆಸ್ತಿ-ಪಾಸ್ತಿ ಹೊಂದಿದ ಸಂಘ-ಸಂಸ್ಥೆಗಳು ತಮ್ಮ ಸೈದ್ಧಾಂತಿಕ ಅಥವಾ ವೈಚಾರಿಕ ವಿಷಯಗಳ ಪ್ರಚಾರ, ಪ್ರಸಾರ ಇತ್ಯಾದಿಗಳನ್ನು ನೋಂದಣಿ ಇಲ್ಲದಂತಹ ಖಾಸಗಿ ಸಂಘ, ಒಕ್ಕೂಟ, ಸಂಸ್ಥೆಯಾಗಿ ನೋಂದಾವಣಿ ರಹಿತವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಥವಾ ಶಾಖಾ ಮಟ್ಟದಲ್ಲಿ ಶಾಶ್ವತ ಖಾತೆ ಸಂಖ್ಯೆ (PAN Number) ಹೊಂದಿ ವಾರ್ಷಿಕ ಲೆಕ್ಕ-ಪತ್ರ, ವ್ಯವಹಾರ ಮಾಡಲು ಕೂಡ ಅವಕಾಶವಿದೆ.
ಸರ್ಕಾರಿ ಸವಲತ್ತು ಬೇಕಿದ್ದಾಗ ನೋಂದಣಿ ಕಡ್ಡಾಯ (ಇಂಗ್ಲಿಷ್ ಇದೆ) ನೋಂದಾಯಿತ ಅಥವಾ ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಬಗ್ಗೆ ಹೇಳುವುದಾದರೆ, ಒಂದು ಸಂಘ ಅಥವಾ ಸಂಸ್ಥೆ ನೋಂದಣಿ ಆದಾಗ ಅಂತಹ ಸಂಘ ಅಥವಾ ಸಂಸ್ಥೆ ಕಾನೂನಿನ ದೃಷ್ಟಿಯಲ್ಲಿ ಒಂದು ಕಾನೂನಿನ ವ್ಯಕ್ತಿತ್ವವನ್ನು (Legal Entity)) ಪಡೆಯುತ್ತದೆ. ಮಾತ್ರವಲ್ಲ, ಅದರ ಸದಸ್ಯರ ಜವಾಬ್ದಾರಿಗಳು, ನೋಂದಾವಣಿಯಾಗದ ಸಂಘ-ಸಂಸ್ಥೆಗಳ ಸದಸ್ಯರಿಗಿಂತ ಭಿನ್ನವಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜವಾಬ್ದಾರಿ ಕಾನೂನಿನ ಅಡಿಯಲ್ಲಿ ಹೆಚ್ಚಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳು ಕೂಡ ಬ್ಯಾಂಕ್ ಖಾತೆ ಹೊಂದಲು, ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಮತ್ತು ದೇಣಿಗೆ ಸೇರಿದಂತೆ ಆದಾಯ, ಖರ್ಚು-ವೆಚ್ಚ ಇತ್ಯಾದಿಗಳನ್ನು ನಡೆಸಲು ಕೂಡ ಅಧಿಕಾರವನ್ನು ಹೊಂದಿವೆ. ಆದರೆ, ವಿದೇಶಿ ಮೂಲಕ ಹಣಕಾಸು ಲೇವಾದೇವಿ, ಭಾರತೀಯ ಹಣಕಾಸು ಇತ್ಯಾದಿ ಹಣಕಾಸು ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ‘F.C.R.A’ ಅನುಮತಿ ಪಡೆಯಲು ನೋಂದಣಿ ಅವಶ್ಯಕತೆ ಇದೆ. ನೋಂದಣಿಯಾಗದ ಸಂಘ-ಸಂಸ್ಥೆ, ಒಕ್ಕೂಟ, ವ್ಯಕ್ತಿಗಳ ಸಮೂಹ ಸಂವಿಧಾನದತ್ತವಾದ ಇತರೆ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಹಕ್ಕು ಹೊಂದಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಆಯುಧ ರಹಿತವಾಗಿ ಒಂದೆಡೆ ಒಗ್ಗೂಡುವ ಸ್ವಾತಂತ್ರ್ಯ, ದೇಶದಾದ್ಯಂತ ಓಡಾಡುವ ಸ್ವಾತಂತ್ರ್ಯ,ದೇಶದ ಯಾವುದೇ ಭಾಗದಲ್ಲಿ ನೆಲೆಸುವ ಮತ್ತು ವೃತ್ತಿ, ವ್ಯಾಪಾರ, ವಹಿವಾಟು ಇತ್ಯಾದಿಗಳನ್ನು ನಡೆಸುವಾಗ ಕೂಡ ಜೊತೆಯಾಗಿ ನಡೆಸಲು ಅಡ್ಡಿಯಿಲ್ಲ. ಕೇವಲ ಸರ್ಕಾರಿ ಸವಲತ್ತು, ಮಾನ್ಯತೆಗಳು ಬೇಕಾದಾಗ ನೋಂದಣಿ ಕಡ್ಡಾಯ. ಸಾರ್ವಜನಿಕ ಸ್ಥಳಗಳಾದ ಆಟದ ಮೈದಾನ, ಪಾರ್ಕ್ ಇತ್ಯಾದಿಗಳು ಸಾರ್ವಜನಿಕ ಉಪಯೋಗಕ್ಕಾಗಿಯೇ ತೆರೆದಿಟ್ಟಂತಹ ಜಾಗಗಳಲ್ಲಿ ಇಂತಹ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ಚಟುವಟಿಕೆ ನಡೆಸಲು ಕೂಡ ಅವಕಾಶ ಇದೆ. ಆದರೆ, ನಿರ್ಬಂಧಿತ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಚಟುವಟಿಕೆ ನಡೆಸಬೇಕಾಗುತ್ತದೆ. ನೋಂದಣಿ ಕಡ್ಡಾಯ ಮಾಡುವಂತಹ ಕಾನೂನು ತರಲು ಸಾಧ್ಯವಿಲ್ಲ ಮತ್ತು ತಂದರೂ ನ್ಯಾಯಾಲಯಗಳಲ್ಲಿ ಅದರ ಸಿಂಧುತ್ವವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ. [08:16, 18/6/2026] sujathasuji089: ಪ್ರಿಯಾಂಕ್‌ಗೆ ಸಂವಿಧಾನ ಬದಲಿಸುವ ಅಧಿಕಾರವಿಲ್ಲ: ಜೇಠ್ಮಲಾನಿ - ಆರ್‌ಎಸ್‌ಎಸ್ ನೋಂದಣಿ ಕಡ್ಡಾಯ ಅಲ್ಲ । ನೋಂದಣಿ ಬೇಡಿಕೆ ತರ್ಕ ಇಲ್ಲದ್ದು
- ಕುಟುಂಬ ರಾಜಕಾರಣದ ವ್ಯಕ್ತಿಯಿಂದ ಆರ್‌ಎಸ್‌ಎಸ್‌ಗೆ ಪ್ರಮಾಣ ಪತ್ರ ಬೇಕಿಲ್ಲ
ಯಾಂಕ್ ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ ಅಥವಾ ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸುವ ಅಧಿಕಾರವನ್ನಲ್ಲ.
ಮಹೇಶ್ ಜೇಠ್ಮಲಾನಿ
- ಸುಪ್ರೀಂಕೋರ್ಟ್‌ನ ಹಿರಿಯ ವಕೀಲ
ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರ, ಕೇವಲ ಒಂದು ಸಾಂವಿಧಾನಿಕ ವಿಚಾರಣೆ ಅಷ್ಟೇ ಆಗಿಲ್ಲ, ಬದಲಾಗಿ ಅದರ ಹಿಂದೆ ಲೆಕ್ಕಾಚಾರದ ರಾಜಕೀಯ ಪ್ರಚೋದನೆಯ ಉದ್ದೇಶವೂ ಅಡಗಿದೆ. ಆರೆಸ್ಸೆಸ್ ಬಗ್ಗೆ ಅವರು ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಕಾನೂನಿನ ಮಾನ್ಯತೆಯಾಗಲಿ, ಪ್ರಮಾಣವಾಗಲಿ ಇಲ್ಲ. ಕೇವಲ ಊಹೆಗಳ ಮೇಲೆ ಬರೆಯಲಾದ ಈ ಪತ್ರ ಕುಟುಂಬ ರಾಜಕಾರಣದ ಅಹಂಕಾರ ಪ್ರದರ್ಶನವಾಗಿದೆ.
ಸುಮಾರು ನೂರು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಕ್ತವಾಗಿ, ಸಾರ್ವಜನಿಕರ ಕಣ್ಣೆದುರೇ ದೇಶ ಸೇವೆ ಮಾಡಿದೆ. ಸರ್ಕಾರದ ಬೆಂಬಲವಿಲ್ಲದೆ ಚಾರಿತ್ರ್ಯ ನಿರ್ಮಾಣ, ಶಿಸ್ತು ಬೆಳೆಸುವುದು, ಸಾಮಾಜಿಕ ಸಾಮರಸ್ಯ ಬಲಪಡಿಸುವಂಥ ಕಾರ್ಯ ಮಾಡಿಕೊಂಡು ಬಂದಿದೆ. ಆದರೆ ಕೆಲ ಕಾಂಗ್ರೆಸ್ ನಾಯಕರು ಮಾತ್ರ ಇದಕ್ಕೆ ವ್ಯತಿರಿಕ್ತವಾದ ಸಂದೇಹಾಸ್ಪದ ರಾಜತಾಂತ್ರಿಕತೆ ಕಾಯ್ದುಕೊಂಡು ಬಂದಿದ್ದಾರೆ. ಅವರು ಚೀನಾದ ಕಮ್ಯುನಿಸ್ಟ್ ಪಕ್ಷದ ಜತೆಗೆ ತಿಳಿವಳಿಕೆಯ ಜ್ಞಾಪನಾ ಪತ್ರಕ್ಕೆ ಸಹಿಹಾಕಲು ಚೀನಾಗೆ ತೆರಳುತ್ತಾರೆ. ರಾಜಕೀಯ ಟೀಕೆಗಳಿಗೆ ಹೆದರಿ ಈ ವಿಚಾರದಲ್ಲಿ ರಹಸ್ಯ ಕಾಯ್ದುಕೊಳ್ಳುತ್ತಾರೆ. ಆರೆಸ್ಸೆಸ್ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಒಬ್ಬರು ಭಾರತದ ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ 100 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರೆ, ಮತ್ತೊಬ್ಬರು ವಿದೇಶಿ ನೆರಳಿನಲ್ಲಿ ಕೂತಿದ್ದಾರೆ. ಸಂಘ ರಚಿಸುವ ಅಧಿಕಾರ ಸರ್ಕಾರ ನೀಡಿದ್ದಲ್ಲ:
ಸಂವಿಧಾನದ 19(1)(ಸಿ)ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಸಂಘ, ಒಕ್ಕೂಟ ಅಥವಾ ಸಹಕಾರಿ ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕು ಖಾತರಿಪಡಿಸುತ್ತದೆ. ಇದು ಸಂವಿಧಾನದತ್ತ ಸ್ವಾತಂತ್ರ್ಯವೇ ಹೊರತು ಸರ್ಕಾರ ನೀಡಿದ ಅಧಿಕಾರವಲ್ಲ. ಇನ್ನು 19(4)ನೇ ವಿಧಿಯು ಈ ಸ್ವಾತಂತ್ರ್ಯಗಳಿಗೆ ನಿರ್ದಿಷ್ಟ ಸಾಂವಿಧಾನಿಕ ಹಾಗೂ ಕಾನೂನು ಆಧಾರದ ಮೇಲೆ ಮಾತ್ರ ನ್ಯಾಯಯುತ ನಿರ್ಬಂಧಗಳನ್ನು ಹೇರಲು ಅವಕಾಶ ನೀಡುತ್ತದೆ. ಪ್ರತಿಯೊಂದು ಸ್ವಯಂಸೇವಾ ಸಂಘಟನೆಗಳು ಅಸ್ತಿತ್ವಕ್ಕೆ ಬರುವ ಅಥವಾ ಕಾರ್ಯಾಚರಣೆ ಆರಂಭಿಸುವ ಮೊದಲು ನೋಂದಣಿ ಆಗುವುದು ಕಡ್ಡಾಯ ಎಂದು ಸಂವಿಧಾನದಲ್ಲೆಲ್ಲೂ ಹೇಳಿಲ್ಲ. ಆರೆಸ್ಸೆಸ್ ಒಂದು ಸಮಾನ ಸೈದ್ಧಾಂತಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಆಲೋಚನೆಯ ನಾಗರಿಕರ ಸ್ವಯಂಸೇವಾ ಸಂಘಟನೆಯಾಗಿದೆ. ಈ ಸಂಘಟನೆಗೆ ಯಾವುದೇ ಸಚಿವನ ಅಸ್ವಿತ್ವದ ಪ್ರಮಾಣ ಪತ್ರವಾಗಲಿ, ಕುಟುಂಬ ರಾಜಕಾರಣದ ನಾಯಕನ ರಾಜಕೀಯ ಅನುಮತಿ ಪತ್ರವಾಗಲಿ ಬೇಕಿಲ್ಲ. ಕಾಂಗ್ರೆಸ್ ನಾಯಕನೊಬ್ಬ ವಿವಾದ ಸೃಷ್ಟಿಗೆ ಹೊರಟಿದ್ದಾನೆಂಬ ಮಾತ್ರಕ್ಕೆ ಈ ಸಂಘಟನೆಗೆ ಯಾವುದೇ ನೋಂದಣಿಯ ಅಗತ್ಯವೂ ಇಲ್ಲ.
ಆರೆಸ್ಸೆಸ್ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ಅದರ ಅಸ್ತಿತ್ವ ಸಾಬೀತುಪಡಿಸಬೇಕೆಂಬ ಪ್ರಿಯಾಂಕ್ ಖರ್ಗೆ ಅವರ ಬೇಡಿಕೆಗೆ ಸಾಂವಿಧಾನಿಕ ಪಠ್ಯದಲ್ಲಾಗಲಿ, ಕಾನೂನು ಬಾಧ್ಯತೆ ಅಥವಾ ಒಪ್ಪಿತ ತತ್ವಗಳಲ್ಲಾಗಲಿ ಮಾನ್ಯತೆ ಇಲ್ಲ. ಪ್ರಿಯಾಂಕ್ ಖರ್ಗೆ ಅವರದ್ದು ಕಾನೂನು ಮಾನ್ಯತೆಯಿಲ್ಲದ ತರ್ಕಕ್ಕೆ ನಿಲುಕದ ಬೇಡಿಕೆ. ಸಂವಿಧಾನಕ್ಕಿಂತ ಪ್ರಿಯಾಂಕ್ ಖರ್ಗೆ ದೊಡ್ಡವರಲ್ಲ:
ಕಾನೂನು ಮೂಲಕ ನಡೆಸಲ್ಪಡುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ, ಆತ ಎಷ್ಟೇ ಉನ್ನತ ಸ್ಥಾನಮಾನದಲ್ಲಿದ್ದರೂ ಸರಿ, ಕೇವಲ ತಾನು ಸಾರ್ವಜನಿಕ ಹುದ್ದೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಯಾವುದೇ ಆದೇಶಗಳನ್ನು ನೀಡುವುದಾಗಲಿ ಮತ್ತು ಅದನ್ನು ಪಾಲನೆ ಮಾಡಬೇಕೆಂದು ಬಯಸುವುದಾಗಲಿ ಮಾಡುವಂತಿಲ್ಲ. ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ ಅಥವಾ ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸುವ ಅಧಿಕಾರವನ್ನಲ್ಲ. ಪ್ರಿಯಾಂಕ್ ಖರ್ಗೆ ಅವರ ಕಾನೂನುಬದ್ಧವಲ್ಲದ ಇಂಥ ಯಾವುದೇ ಬೇಡಿಕೆಗಳಿಗೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮಾನ್ಯತೆ ಇಲ್ಲ. ಕುಟುಂಬ ರಾಜಕಾರಣದ ಮೂಲಕ ಅಧಿಕಾರ ಪಡೆದಿರುವ ವ್ಯಕ್ತಿಯು ಸಚಿವ ಸ್ಥಾನದಲ್ಲಿದ್ದಾನೆ ಎಂಬ ಮಾತ್ರಕ್ಕೆ ಆತ ಸಂವಿಧಾನಕ್ಕಿಂತ ದೊಡ್ಡವನಾಗುವುದೂ ಇಲ್ಲ.
ಅಧಿಕಾರವೆಂಬುದು ಶಾಶ್ವತವಲ್ಲ. ಇದನ್ನು ಮನಗಾಣಿಯೇ ಥೋಮಸ್ ಫುಲ್ಲರ್ ಅವರು, ‘ನೀವು ಎಷ್ಟೇ ಎತ್ತರದಲ್ಲಿದ್ದರೂ ಕಾನೂನು ನಿಮಗಿಂತ ಮೇಲೆಯೇ ಇರುತ್ತದೆ’ ಎಂದಿದ್ದಾರೆ. ಈ ಮಾತುಗಳನ್ನು ನಂತರ ಲಾರ್ಡ್ ಡೆನ್ನಿಂಗ್ ಅವರು ‘ದಿ ಡ್ಯು ಪ್ರೊಸೆಸ್ ಆಫ್ ಲಾ’ದಲ್ಲಿ ಶಾಶ್ವತಗೊಳಿಸಿದ್ದಾರೆ. ಈ ಮಾತು ಪ್ರಿಯಾಂಕ್ ಖರ್ಗೆ ಅವರ ಬೇಡಿಕೆ ವಿಚಾರದಲ್ಲೂ ಅನ್ವಯ ಆಗುತ್ತದೆ. ಕೋರ್ಟ್ ತೀರ್ಪುಗಳ ಉದ್ದೇಶಪೂರ್ವಕ ನಿರ್ಲಕ್ಷ್ಯ:
ಆರೆಸ್ಸೆಸ್ ತನ್ನ ದೇಣಿಗೆಯ ಮೂಲ, ಖರ್ಚು-ವೆಚ್ಚ, ಆಸ್ತಿಗಳು ಮತ್ತು ತೆರಿಗೆಯ ಮಾಹಿತಿ ಬಹಿರಂಗಪಡಿಸಬೇಕೆನ್ನುವ ಪ್ರಿಯಾಂಕ್ ಖರ್ಗೆ ಅವರ ಒತ್ತಾಯವು ಈಗಾಗಲೇ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತದೆ. ಇನ್ನು ಗುರುದಕ್ಷಿಣೆ ಮೇಲಿನ ತೆರಿಗೆಯ ವಿಚಾರಕ್ಕೆ ಬಂದರೆ, ಆರೆಸ್ಸೆಸ್ ತನ್ನ ಸದಸ್ಯರಿಂದ ಸ್ವಯಂಪ್ರೇರಿತವಾಗಿ ಪಡೆಯುವ ದೇಣಿಗೆಯು ಸಾಂವಿಧಾನಿಕ ನ್ಯಾಯಾಲಯದಿಂದ ಈಗಾಗಲೇ ಪರಿಶೀಲನೆಗೂ ಒಳಪಟ್ಟಿದೆ. ಆದಾಯ ತೆರಿಗೆ ಕಮಿಷನರ್ ಮತ್ತು ಆರೆಸ್ಸೆಸ್ ನಡುವಿನ ಪ್ರಕರಣದಲ್ಲಿ ಪಟ್ನಾ ಹೈಕೋರ್ಟ್ ‘ಪರಸ್ಪರ ಸಹಕಾರ’ದ ತತ್ವವನ್ನು ಎತ್ತಿಹಿಡಿದಿದ್ದು, ಗುರುದಕ್ಷಿಣೆಯು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ. ಆರೆಸ್ಸೆಸ್ ಯಾವತ್ತೂ ಕಾನೂನಿನ ವಿನಾಯ್ತಿಯನ್ನು ಕೇಳಿಯೇ ಇಲ್ಲ ಆದರೆ, ಕಾನೂನು ಹೇರದ ಬಾಧ್ಯತೆಗಳ ಒತ್ತಾಯಪೂರ್ವಕ ಹೇರಿಕೆಯನ್ನು ವಿರೋಧಿಸಿದೆ ಅಷ್ಟೆ.
ನೂರು ವರ್ಷಗಳ ಕಾಲ ಸಂಘವು ಮುಕ್ತವಾಗಿ ಕಾರ್ಯನಿರ್ವಹಿಸಿದೆ, ತನ್ನ ಕಾರ್ಯ ಚಟುವಟಿಕೆಗಳನ್ನು ಪ್ರಕಟಿಸುತ್ತಾ ಬಂದಿದೆ. ನಿರ್ಬಂಧಗಳು, ರಾಜಕೀಯ ವಿರೋಧ ಮತ್ತು ಮಾನ್ಯತೆ ರದ್ದು ಮಾಡುವ ಸಂಬಂಧ ಕಾಂಗ್ರೆಸ್ ಸರ್ಕಾರಗಳು ಮಾಡಿದ ಹಲವು ಪ್ರಯತ್ನಗಳನ್ನು ಎದುರಿಸಿ ನಿಂತಿದೆ. ಇದನ್ನೆಲ್ಲ ತೆರಿಗೆದಾರರ ಹಣದಿಂದಾಗಲಿ ಹಾಗೂ ವಿದೇಶಿ ದೇಣಿಗೆಯ ನೆರವಿಲ್ಲದೆ ಸಾಧಿಸಿದೆ. ಜೂನಿಯರ್ ಖರ್ಗೆ ಅವರು ಭಾಗವತ್ ಅವರನ್ನುದ್ದೇಶಿಸಿ ಉತ್ತರದಾಯಿತ್ವದ ಹೆಸರಿನಲ್ಲಿ ಬರೆದ ಪತ್ರವು ಕಾನೂನಿನ ತಪ್ಪುಗ್ರಹಿಕೆ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ರೀತಿಯ ಬೇಡಿಕೆ ಪತ್ರವು ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಗೂ ಮತ್ತು ತಾವು ರಕ್ಷಿಸುತ್ತಿದ್ದೇನೆಂದು ಹೇಳಿಕೊಳ್ಳುತ್ತಿರುವ ಪ್ರಜಾತಾಂತ್ರದ ಸಂಪ್ರದಾಯ ಎರಡಕ್ಕೂ ಸರಿಹೊಂದುವುದಿಲ್ಲ.
ಕುಟುಂಬ ರಾಜಕಾರಣಕ್ಕೆ ಸೇರಿದ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿಯೇ ಇರಲಿ, ಅಂಥ ವ್ಯಕ್ತಿಯಿಂದ ಆರೆಸ್ಸೆಸ್‌ಗೆ ಉತ್ತಮ ನಡತೆಯ ಪ್ರಮಾಣ ಪತ್ರ ಬೇಕಿಲ್ಲ. ಕಾನೂನು ಎಲ್ಲರಿಗಿಂತಲೂ ದೊಡ್ಡದು. ಅದೇ ರೀತಿ ಜೂನಿಯರ್ ಖರ್ಗೆ ಅವರ ಅಹಂಕಾರದ ಹಾಗೂ ಅನಗತ್ಯ ಬೇಡಿಕೆಗಳು ಕಾನೂನಿನ ಮುಂದೆ ಯಾವುದೇ ಮೌಲ್ಯ ಇಲ್ಲ.

