ಅಮೆರಿಕದ ಅವಳಿ ಗೋಪುರಗಳ 9/11 ದಾಳಿ ರೀತಿಯಲ್ಲೇ ಇಸ್ರೇಲ್‌ ಮೇಲೆ ದಾಳಿಗೆ ಸಜ್ಜಾಗಿದ್ದ ಹಮಾಸ್‌

| Published : Oct 14 2024, 01:23 AM IST / Updated: Oct 14 2024, 05:03 AM IST

ಸಾರಾಂಶ

2023ರ ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಮೂಲಕ ಮಧ್ಯಪ್ರಾಚ್ಯದಲ್ಲಿ ಯುದ್ಧಕ್ಕೆ ಕಾರಣವಾಗಿರುವ ಹಮಾಸ್‌ ಬಂಡುಕೋರರ ಮೂಲ ಯೋಜನೆ ಬೇರೆಯದೇ ಆಗಿತ್ತು.

ಜೆರುಸಲೇಂ: 2023ರ ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಮೂಲಕ ಮಧ್ಯಪ್ರಾಚ್ಯದಲ್ಲಿ ಯುದ್ಧಕ್ಕೆ ಕಾರಣವಾಗಿರುವ ಹಮಾಸ್‌ ಬಂಡುಕೋರರ ಮೂಲ ಯೋಜನೆ ಬೇರೆಯದೇ ಆಗಿತ್ತು. 2001ರ ಸೆ.11ರಂದು ಅಲ್‌ಖೈದಾ ಉಗ್ರರು ಅಮೆರಿಕದ ಅವಳಿ ಗೋಪುರಗಳ ಮೇಲೆ ನಡೆಸಿದ (9/11) ದಾಳಿ ರೀತಿಯಲ್ಲೇ ಇಸ್ರೇಲ್‌ ಮೇಲೆ ದಾಳಿ ನಡೆಸಲು ಅವರು ಸಜ್ಜಾಗಿದ್ದರು. ಸುಮಾರು 2 ವರ್ಷಗಳ ಚರ್ಚೆಗಳ ಬಳಿಕ ಅಷ್ಟು ಸಾಮರ್ಥ್ಯವಿಲ್ಲ ಎಂಬ ಕಾರಣ ಕೈಬಿಟ್ಟಿದ್ದರು ಎಂಬ ಕುತೂಹಲಕರ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಉದ್ದೇಶಿತ ದಾಳಿಗಾಗಿ ಹಮಾಸ್‌ ಉಗ್ರರು ಇರಾನ್‌ ಹಾಗೂ ಹಿಜ್ಬುಲ್ಲಾ ಜತೆ ಪತ್ರ ವ್ಯವಹಾರ ನಡೆಸಿ ಮಿಲಿಟರಿ ಸಾಮರ್ಥ್ಯ ಹಾಗೂ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದ ಪತ್ರಗಳನ್ನು ಆಧರಿಸಿ ಅಮರಿಕದ ಮಾದ್ಯಮಗಳು ವರದಿ ಮಾಡಿವೆ.

9/11 ರೀತಿ ಇಸ್ರೇಲ್‌ನ ಟೆಲ್‌ ಅವಿವ್‌ನಲ್ಲಿರುವ ಅಜ್ರೇಲಿ ಗೋಪುರ ಮೇಲೆ ದಾಳಿ ನಡೆಸಲು ಹಮಾಸ್‌ ಚಿಂತನೆ ನಡೆಸಿತ್ತು. ಈ ಗೋಪುರದಲ್ಲಿ ಶಾಪಿಂಗ್‌ ಮಾಲ್‌, ಸರ್ಕಾರಿ ಕಚೇರಿಗಳು ಹಾಗೂ ಕೇಂದ್ರ ರೈಲು ನಿಲ್ದಾಣವಿದೆ. ಅದರ ಮೇಲೆ 9/11ರ ರೀತಿ ದಾಳಿ ನಡೆಸಿದರೆ ಗೋಪುರಗಳು ಉರುಳಿ ಬೀಳುತ್ತವೆ. ಅಪಾರ ಜೀವ ಹಾನಿಯಾಗುತ್ತದೆ ಎಂಬುದು ಹಮಾಸ್‌ ಎಣಿಕೆಯಾಗಿತ್ತು ಎಂದು ವರದಿಗಳು ವಿವರಿಸಿವೆ.