ರಾಜ್ಯದಲ್ಲಿ ಲವ್‌ ಜಿಹಾದ್‌ ಆಯ್ತು, ಈಗ ಲ್ಯಾಂಡ್ ಜಿಹಾದ್

| Published : Nov 05 2024, 12:38 AM IST

ಸಾರಾಂಶ

ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ, ಸಿಎಂ ಸಿದ್ದರಾಮಯ್ಯ ಇದರ ಪ್ರಯೋಜಕರು. ಮಹಾರಾಷ್ಟ್ರ ಚುನಾವಣೆ, ಮೂರು ಬೈ ಎಲೆಕ್ಷನ್ ಬಳಿಕ ಮತ್ತೆ ಹಳೆ ಸಿದ್ದರಾಮಯ್ಯ ಆಗುತ್ತಾರೆ. ಜನರು ಸಿದ್ದರಾಮಯ್ಯರನ್ನು ನಂಬೋದಿಲ್ಲ. ಕರ್ನಾಟಕ ರಾಜ್ಯವನ್ನು ಸ್ಲೀಪಿಂಗ್ ಸೆಲ್ ಮಾಡಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಸ್ಲೀಪ್ ಲೈಕ್ ಏ ಬೇಬಿ ಅಂತ ಮಾಡಿಕೊಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ ರಾಜ್ಯದಲ್ಲಿ ಲವ್ ಜಿಹಾದ್ ಆಯ್ತು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಲ್ಯಾಂಡ್ ಜಿಹಾದ್ ನಡೆಯುತ್ತಿದೆ, ರೈತರ ಹಾಗೂ ಮಠ ಮಾನ್ಯಗಳ ಜಮೀನುಗಳನ್ನು ರಾತ್ರೋ ರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಒಂದು ಸಮುದಾಯದ ಒಲೈಕೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ, ಇದು ಹೀಗೆ ಮುಂದುವರೆದರೆ ಕನ್ನಡ ರಾಜ್ಯ ಮುಂದಿನ ದಿನಗಳಲ್ಲಿ ಮಿನಿ ಪಾಕಿಸ್ತಾನವಾಗಿ ಬದಲಾವಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್‌ ಹೆಸರು ದಾಖಲಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅ‍ವರು ಮಾತನಾಡಿದರು.

ರಾಜ್ಯದಲ್ಲಿ ಭೂ ಜಿಹಾದ್‌

ಈಗ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ, ಸಿಎಂ ಸಿದ್ದರಾಮಯ್ಯ ಇದರ ಪ್ರಯೋಜಕರು. ಮಹಾರಾಷ್ಟ್ರ ಚುನಾವಣೆ, ಮೂರು ಬೈ ಎಲೆಕ್ಷನ್ ಬಳಿಕ ಮತ್ತೆ ಹಳೆ ಸಿದ್ದರಾಮಯ್ಯ ಆಗುತ್ತಾರೆ. ಜನರು ಸಿದ್ದರಾಮಯ್ಯರನ್ನು ನಂಬೋದಿಲ್ಲ. ಕರ್ನಾಟಕ ರಾಜ್ಯವನ್ನು ಸ್ಲೀಪಿಂಗ್ ಸೆಲ್ ಮಾಡಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಸ್ಲೀಪ್ ಲೈಕ್ ಏ ಬೇಬಿ ಅಂತ ಮಾಡಿಕೊಟ್ಟಿದ್ದಾರೆ. ಮತಾಂದ ಮುಸ್ಲಿಮರ ಪಾಲಿಗೆ ಕರ್ನಾಟಕ ಸ್ಲೀಪ್ ಲೈಕ್ ಏ ಬೇಬಿ ಆಗಿದೆ. ಪಾಕಿಸ್ತಾನ ಕ್ಕಿಂತ ಕರ್ನಾಟಕ ಸೇಫ್ ಆಗಿದೆ ಎಂದು ಆಶೋಕ್‌ ಹೇಳಿದರು.

ಜಿಲ್ಲೆಯಲ್ಲೂ ವಕ್ಫ್‌ ವಿವಾದ

ತಾತ ಮುತ್ತಾತನ ಕಾಲದಿಂದ ಉಳುಮೆ ಮಾಡಿದ ಜಮೀನುಗಳ ಪಹಣಿಯ ಕಾಲಂ ನಂ.೧೧ರಲ್ಲಿ ವರ್ಕ್ ಆಸ್ತಿಯೆಂದು ಸೇರಿಸುತ್ತಿದ್ದಾರೆ, ಇದಕ್ಕೆ ಕೋಲಾರವೂ ಹೊರತಾಗಿಲ್ಲ. ಮುದುವಾಡಿ ಕೆರೆ, ಕುಡಿಯನೂರು ಹಿಂದೂ ಸ್ಮಶಾನ, ಶ್ರೀನಿವಾಸಪುರದಲ್ಲೂ ಹಲವು ಮಠ ಮಾನ್ಯಗಳ ಜಮೀನುಗಳು, ಮುಳಬಾಗಿಲುನಲ್ಲಿ ಐದು ಎಕರೆ ಹಿಂದು ಸ್ಮಶಾನ, ಕೋಲಾರದ ಬಿಂದುಮಾಳ್ಯಂ ಪಕ್ಕದ ಜಮೀನು ಸಂಗೊಂಡ್ಲಹಳ್ಳಿ ಗಣೇಶ ದೇವಸ್ಥಾನ ಜಾಗಗಳನ್ನು ಈಗಾಗಲೇ ವರ್ಕ್ ಆಸ್ತಿಯೆಂದು ಮಾಡಿದ್ದಾರೆ ಎಂದರು. ವರ್ಕ್ ಬೋರ್ಡ್ ಹೆಸರು ಸೇರಿಸಿ ನಂತರ ರೈತರಿಗೆ ನೀಡಲಾಗುತ್ತಿರುವ ನೋಟೀಸ್‌ಗಳನ್ನು ವಾಪಸ್ ಪಡೆದುಕೊಂಡರೆ ಸಾಲದು ಪಹಣಿಯಲ್ಲಿ ನಮೂದಾಗಿರುವ ವರ್ಕ್ ಬೋರ್ಡ್ ಆಸ್ತಿ ತೆಗೆಯುವವರೆಗೂ ಬಿಜೆಪಿ ಹೋರಾಟ ನಡೆಸುವುದು ನಿಲ್ಲಿಸುವುದಿಲ್ಲ ಎಷ್ಟೇ ಕೇಸುಗಳನ್ನು ದಾಖಲು ಮಾಡಿದರೂ ಹೋರಾಟ ನಿಲ್ಲದು ಎಂದು ಹೇಳಿದರು.

ಚುನಾವಣೆ ಬಳಿಕ ಮತ್ತೆ ನೋಟಿಸ್‌

ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ನೀಡಲಾಗುತ್ತಿರುವ ನೋಟಿಸ್‌ಗಳನ್ನು ಸರ್ಕಾರ ವಾಪಸ್ ಪಡೆಯುತ್ತಿದೆ. ಆದರೆ ಚುನಾವಣೆ ಮುಗಿದ ನಂತರ ಹತ್ತು ನೋಟಿಸ್ ಬರುತ್ತೆ, ದಯವಿಟ್ಡು ನಿಮ್ಮ ನಿಮ್ಮ ಜಮೀನುಗಳ ಫಹಣಿಗಳನ್ನು ಚೆಕ್ ಮಾಡಿಕೊಳ್ಳಿ ನಮ್ಮ ಧರ್ಮ, ದೇವಸ್ಥಾನ ರೈತರ ಜಮೀನು ಕಾಲಂ ನಂಬರ್ ಹನ್ನೊಂದರಲ್ಲಿ ಸಾಬರ ಬೋರ್ಡ್ ಹಾಕಿರುವುದನ್ನು ತೆಗಿಯುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪಾಕಿಸ್ಥಾನಕ್ಕೆ ಕಳುಹಿಸಬೇಕು, ವಿಧಾನಸೌಧ ಬಳಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ವಹಿಸಲಿಲ್ಲ. ಹೀಗಿದ್ದಾಗ ಅವರು ಅಧಿಕಾರದಲ್ಲಿ ಇರಲು ಯೋಗ್ಯರಲ್ಲ, ಸಿದ್ದರಾಮಯ್ಯ ಇರೋವರೆಗೂ ರಾಜ್ಯ ಉದ್ದಾರ ಹಾಗೋದಿಲ್ಲ, ಅಲ್ಪಸಂಖ್ಯಾಂತರನ್ನು ಓಲೈಸಿಕೊಂಡು ಓಟ್ ಬ್ಯಾಂಕ್‌ಗಾಗಿ ಬಳಸಿಕೊಂಡು ಕರ್ನಾಟಕವನ್ನು ಮಿನಿ ಪಾಕಿಸ್ಥಾನ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮುಸ್ಲಿಂ ವರ್ಕ್ ಬೋರ್ಡ್ ವಿವಾದವನ್ನು ಸಿಬಿಐ ತನಿಖೆ, ಒಳಪಡಿಸಬೇಕು ಕಾಯ್ದೆ ಬದಲಾವಣೆ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ರಾತ್ರೋ ರಾತ್ರಿ ರೈತರ ಜಮೀನು ಮಠ ಮಂದಿರ ಜಾಗಗಳನ್ನು ವರ್ಕ್ ಬೋರ್ಡ್‌ಗೆ ಸೇರಿಸುತ್ತಿದ್ದಿರಾ ಒಗ್ಗಟ್ಟಾಗಿ ಇದ್ದೀವಿ ಡಿಸಿ ಅಕ್ರಂ ಪಾಷಾ ಮತ್ತು ಸಚಿವ ಜಮೀರ್ ಪಾಕಿಸ್ತಾನದ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಮಂಜುನಾಥಗೌಡ, ವರ್ತೂರ್ ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಯಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಪಿ.ಎಸ್.ಸತ್ಯನಾರಾಯಣರಾವ್, ಶಿಳ್ಳಂಗೆರೆ ಮಹೇಶ್, ಅಪ್ಪಿನಾರಾಯಣಸ್ವಾಮಿ, ಹಾರೋಹಳ್ಳಿ ವೆಂಕಟೇಶ್, ಬೆಗ್ಲಿಸೂರ್ಯಪ್ರಕಾಶ್, ವಾಸುದೇವರಾವ್ ಇದ್ದರು.