ಬಂಡೀದಾರಿಗಾಗಿ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಚ ಪ್ರತಿಭಟನೆ
KannadaprabhaNewsNetwork | Published : Oct 14 2023, 01:00 AM IST
ಬಂಡೀದಾರಿಗಾಗಿ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಚ ಪ್ರತಿಭಟನೆ
ಸಾರಾಂಶ
ತಾಲೂಕಿನ ಹಿರೀಕಾಟಿ ಗ್ರಾಮದ ರೈತರ ಜಮೀನಿಗೆ ತೆರಳುತ್ತಿದ್ದ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮದ ರೈತಬಮಡಿದಾರಿಒಗಾಗಿರ ಜಮೀನಿಗೆ ತೆರಳುತ್ತಿದ್ದ ಬಂಡಿ ದಾರಿ ಬಿಡಿಸಿಕೊಡಬೇಕು ಎಂದು ಆಗ್ರಹಿಸಿ ರೈತಸಂಘ ಕಾರ್ಯಕರ್ತರ ಪ್ರತಿಭಟನೆ ೨ ನೇ ದಿನಕ್ಕೆ ಕಾಲಿಟ್ಟಿದೆ.
 ಬಂಡಿದಾರಿಗಾಗಿ ಆಗ್ರಹಿಸಿ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದ ರೈತರು ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ  ತಾಲೂಕಿನ ಹಿರೀಕಾಟಿ ಗ್ರಾಮದ ರೈತರ ಜಮೀನಿಗೆ ತೆರಳುತ್ತಿದ್ದ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮದ ರೈತಬಮಡಿದಾರಿಒಗಾಗಿರ ಜಮೀನಿಗೆ ತೆರಳುತ್ತಿದ್ದ ಬಂಡಿ ದಾರಿ ಬಿಡಿಸಿಕೊಡಬೇಕು ಎಂದು ಆಗ್ರಹಿಸಿ ರೈತಸಂಘ ಕಾರ್ಯಕರ್ತರ ಪ್ರತಿಭಟನೆ ೨ ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂದೆ ಕೆಲ ಜಾನುವಾರುಗಳನ್ನುಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದರು.೨ ನೇ ದಿನವಾದ ಶುಕ್ರವಾರ ಕೂಡ ಆರೇಳು ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ರೈತಸಂಘದ ಉಪಾಧ್ಯಕ್ಷರೂ ಆದ ಶಿವಪುರ ಗ್ರಾಪಂ ಅಧ್ಯಕ್ಷ ಮಹದೇವಪ್ಪ ಮಾತನಾಡಿ ಹಿರೀಕಾಟಿ ಗ್ರಾಮದ ರೈತ ರೇವಣ್ಣನ ಜಮೀನಿಗೆ ತೆರಳಲು 7 ಗುಂಟೆ ಬಂಡಿ ದಾರಿ ಬಿಡುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಟಿ.ಎಸ್.ಶಾಂತಮಲ್ಲಪ್ಪ,ತಾಲೂಕು ಅಧ್ಯಕ್ಷ ಹಂಗಳ ದೀಲೀಪ್,ಮುಖಂಡರಾದ ಮಳವಳ್ಳಿ ಮಹೇಂದ್ರ,ನಾಗರಾಜಪ್ಪ, ಪಾಪಣ್ಣ,ಶಿವಣ್ಣ,ಹಿರೀಕಾಟಿ ಅಶೋಕ್,ರೇವಣ್ಣ,ಮಹದೇವಸ್ವಾಮಿ ಸೇರಿದಂತೆ ಹಲವರಿದ್ದರು.  13ಜಿಪಿಟಿ5    ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂದೆ  ೨ ನೇ ದಿನವಾದ ಶುಕ್ರವಾರ ಕೂಡ  ರೈತರು ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.       -      13ಜಿಪಿಟಿ5      ಗುಂಡ್ಲುಪೇಟೆ ತಾಲೂಕು ಕಚೇರಿ ಮುಂದೆ ೨ ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಜಾನುವಾರುಗಳನ್ನು ಕಟ್ಟಿರುವುದು.