ಎಲ್ಲ ಪಕ್ಷಗಳಿಗೂ ಕಗ್ಗಂಟಾಗಿರುವ ಕೋಲಾರ ಎಂಪಿ ಕ್ಷೇತ್ರ

| Published : Mar 20 2024, 01:22 AM IST / Updated: Mar 20 2024, 09:15 AM IST

Karnataka election 2023 asianet news opinion poll May BJP leads Congress JDS  in vote sharing BSM
ಎಲ್ಲ ಪಕ್ಷಗಳಿಗೂ ಕಗ್ಗಂಟಾಗಿರುವ ಕೋಲಾರ ಎಂಪಿ ಕ್ಷೇತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮೈತ್ರಿ ಕೂಟದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವ ಲೆಕ್ಕಾಚಾರ ಇತ್ತಾದರೂ ಬದಲಾದ ಬೆಳವಣಿಗೆಯಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ಗೆ ಒಳ ಏಟಿನ ಚಿಂತೆ

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷವೂ ತಮ್ಮ ಅಭ್ಯರ್ಥಿಯನ್ನು ಇನ್ನೂ ಫೈನಲ್ ಮಾಡಿಲ್ಲ. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಸೇರಿದಂತೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತಾಗಿ ಪಕ್ಷಗಳ ಹೈಕಮಾಂಡ್‌ನಲ್ಲಿ ಕಸರತ್ತು ಮುಂದುವರೆದಿದೆ.

ನಿನ್ನೆ ಮೊನ್ನೆಯವರಿಗೂ ಮೈತ್ರಿ ಕೂಟದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವ ಲೆಕ್ಕಾಚಾರ ಇತ್ತಾದರೂ ಬದಲಾದ ಬೆಳವಣಿಗೆಯಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನ ಭದ್ರಕೋಟೆ

ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಅರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತ ಬಂದಿರುವ ಕ್ಷೇತ್ರ ಎರಡು ಬಾರಿ ಹೊರತುಪಡಿಸಿದರೆ ಉಳಿದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರವಾಗಿ ಚುನಾವಣೆ ಗೆದ್ದಿರುತ್ತಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನ್ನಬಹುದು. ಆಗೊಮ್ಮೆ ೧೯೮೪ರಲ್ಲಿ ನೇಗಿಲು ಹೊತ್ತ ಗುರುತಿನ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ಹಾಗೂ ಹೀಗೊಮ್ಮೆ ೨೦೧೯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದಿದ್ದು ಹೊರತುಪಡಿಸಿದರೆ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿರುವುದು ಇಲ್ಲಿ ಇತಿಹಾಸವಾಗಿದೆ.

೧೯೫೨ರಲ್ಲಿ ದೊಡ್ಡತಿಮ್ಮಯ್ಯ ಎನ್ನುವ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಿಂದ ಆರಂಭವಾದ ಕಾಂಗ್ರೆಸ್ ವಿಜಯ ೧೯೫೭,೧೯೬೨ ಮೂರು ಅವಧಿಗೆ ಸಂಸದರಾಗಿದ್ದರು, ನಂತರ ೧೯೬೭ರಲ್ಲಿ ಗೆಲುವು ಸಾಧಿಸಿದ ಜಿ.ವೈ.ಕೃಷ್ಣನ್ ೧೯೭೧,೧೯೭೭,೧೯೮೦ ನಾಲ್ಕು ಬಾರಿ ಸಂಸದರಾಗಿದ್ದರು, ನಂತರದಲ್ಲಿ ೧೯೮೪ರಲ್ಲಿ ಚುನಾವಣೆಯಲ್ಲಿ ಜಿ.ವೈ.ಕೃಷ್ಣನ್ ವಿರುದ್ದ ಸ್ಚಪಕ್ಷೀಯರೆ ಅಸಮಾಧಾನಗೊಂಡ ಪರಿಣಾಮ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ವಿಜಯದ ಪತಾಕೆ ಹಾರಿಸಿದ್ದರು.

ಸೋಲಿಲ್ಲದ ಸರದಾನಿಗೆ ಸೋಲು

ನಂತರ ೧೯೮೯ ಕಾಂಗ್ರೆಸ್ ಅನೇಕಲ್‌ನ ವೈ.ರಾಮಕೃಷ್ಣ ಗೆಲುವು ಸಾಧಿಸಿದ್ದರೆ ೧೯೯೧ ರಿಂದ ೧೯೯೬, ೧೯೯೮, ೧೯೯೯, ೨೦೦೪, ೨೦೦೯, ೨೦೧೪ ಡಬಲ್ ಹ್ಯಾಟ್ರಿಕ್ ಬಾರಿಸಿ ಏಳು ಬಾರಿ ಕೋಲಾರದ ಸಂಸದರಾಗಿ ಸೋಲಿಲ್ಲದ ಸರದಾರರಾಗಿದ್ದ ಕೆ.ಎಚ್.ಮುನಿಯಪ್ಪ ೨೦೧೯ ಚುನಾವಣೆಯಲ್ಲಿ ಸ್ವಪಕ್ಷೀಯರ ಪ್ರಬಲ ವಿರೋಧದಿಂದ ಬಾರಿ ಅಂತರದಲ್ಲಿ ಸೋಲುಂಡರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಸ್ಥಳೀಯ ರಾಜಕೀಯ ಪಂಡಿತರು ಹೇಳುವುದೇನೆಂದರೆ ಹಿಂದೆಲ್ಲಾ ಕೂಡಿ ಕಳೆಯುವ ಅಂಕ ಗಣಿತದ ಸಿಂಪಲ್ ರಾಜಕೀಯ ಸ್ಥಳೀಯತೆ, ವ್ಯಕ್ತಿ ಪ್ರಾಬಲ್ಯತೆ, ಇವುಗಳನ್ನಿಟ್ಟುಕೊಂಡು ರಾಜಕೀಯ ಅಭ್ಯರ್ಥಿ ಆಯ್ಕೆ ಮಾಡಬಹುದಿತ್ತು, ಕಾಲ ಬದಲಾಗಿದೆ ಹಿಂದಿನ ಅಂಕ ಗಣಿತದಂತೆ ಅಭ್ಯರ್ಥಿ ಅಯ್ಕೆ ಮಾಡುವುದು ಕಷ್ಟ ವಾಗುತ್ತದೆ, ಹೀಗೆನಿದ್ದರು ಜಾತಿ-ಒಳಜಾತಿಗಳ ಜೊತೆಗೆ ಸ್ವಪಕ್ಷೀಯರ ಒಳ ಏಟುಗಳ ಲೆಕ್ಕಾಚಾರದಲ್ಲಿ ಎಲ್ಲರೂ ಒಪ್ಪುವಂತ ಅಭ್ಯರ್ಥಿಯನ್ನು ಗುಣಾಕಾರದ ಲೆಕ್ಕದಲ್ಲಿ ಆಯ್ಕೆ ಮಾಡಿದರಷ್ಟೇ ರಾಜಕೀಯ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಕಾದು ನೋಡುವ ತಂತ್ರ

ಹೀಗಾಗಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಮಾಡುವವರಿಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಫೈನಲ್ ಮಾಡುವ ಹಾಗೆ ಕಾಣುತ್ತಿಲ್ಲ. ಇದರ ಮಧ್ಯೆ ಬದಲಾಗದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಯಾರೇ ಅಧಿಕಾರದಲ್ಲಿ ಇರಲಿ ಬಿಡಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿ ಮಂತ್ರ.

ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಒಂದು ಬಣದ ಸಿಗ್ನಲ್ ಸಿಗುವ ಆಧಾರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಸೆಡ್ಡು ಹೊಡೆದು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತ ಲೆಕ್ಕಾಚಾರದಲ್ಲಿ ಇದೆಯಂತೆ, ಇದಕ್ಕೆ ಬೆಸೆತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಅವರಿಗೆ ಮೈತ್ರಿ ಧರ್ಮ ಬೇಡವಾದರೆ ನಮಗೂ ಬೇಡ ಕೋಲಾರ ಲೋಕಸಭಾ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ತನ್ನದೇ ಓಟ್ ಬ್ಯಾಂಕ್ ಇದೆ ಎನ್ನುವ ಸಿಂಪಲ್ ಮ್ಯಾತಮೆಟಿಕ್ಸ್ ಧೈರ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತ್ರೀಕೋನ ಸ್ಪರ್ಧೆಗೆ ತಯಾರಿ ನಡೆಸಿರುವುದಾಗಿ ಹೇಳಲಾಗುತ್ತಿದೆ.