ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಒಂದು ತಿಂಗಳು ಮೌನವ್ರತ ತಾಳಿದ್ದೇನೆ. ಒಂದು ತಿಂಗಳ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

 ಮಂಡ್ಯ : ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಒಂದು ತಿಂಗಳು ಮೌನವ್ರತ ತಾಳಿದ್ದೇನೆ. ಒಂದು ತಿಂಗಳ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಮನೆಯಲ್ಲಿ ತುಂಟ ಮಕ್ಕಳು ಇರ್ತಾರೆ, ಒಳ್ಳೆ ಮಕ್ಕಳು ಇರ್ತಾರೆ

ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸಿಎಂ ಪುತ್ರನ ಹೇಳಿಗೆ ಉತ್ತರಿಸಿದ ಅವರು ಮನೆಯಲ್ಲಿ ತುಂಟ ಮಕ್ಕಳು ಇರ್ತಾರೆ, ಒಳ್ಳೆ ಮಕ್ಕಳು ಇರ್ತಾರೆ. ನಾನು ಮನೆಗೆ ಒಳ್ಳೆ ಮಗ ಯತೀಂದ್ರ ಕುರಿತು ಹಾಸ್ಯಚಟಾಕಿ ಹಾಸಿರಿಸಿದರು.

ಅಧಿಕಾರದಲ್ಲಿದ್ದವರು ಶಾಂತ ಸ್ವಭಾವದಿಂದ ಹೋಗಬೇಕು. ನಮ್ಮೆಲ್ಲರಿಗಿಂತ ಹೆಚ್ಚು ಜವಾಬ್ದಾರಿ ಇರುತ್ತದೆ. ಮತ್ತೊಬ್ಬರನ್ನು ರೊಚ್ಚಿಗೇಳಿಸಲು ಹೋಗಬಾರದು. ಸಹೋದರನಾಗಿ ಯತೀಂದ್ರ ಅವರಿಗೆ ಈ ಮಾತು ಹೇಳುತ್ತಿದ್ದೇನೆ ಎಂದರು.

ಊಟಕ್ಕೆ ಸೇರಿದ ತಕ್ಷಣ ನಾಯಕತ್ವ ಬದಲಾವಣೆಗೆ ಆಗಲ್ಲ

ಕೆಲ ಶಾಸಕರು ಫಾರಂ ಹೌಸ್‌ನಲ್ಲಿ ಊಟಕ್ಕೆ ಸೇರಿದ್ದಾರೆ. ದೊಡ್ಡಣ್ಣ ಎಂಬುವರು ಊಟಕ್ಕೆ ಕರೆದಿದ್ದರು. ಊಟಕ್ಕೆ ಸೇರಿದ ತಕ್ಷಣ ನಾಯಕತ್ವ ಬದಲಾವಣೆಗೆ ಆಗಲ್ಲ. ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆಗೂ ಊಟಕ್ಕೆ ಬರುತ್ತಾರೆ. ಹಾಗಂದ ಮಾತ್ರಕ್ಕೆ ನಾಯಕತ್ವ ಬದಲಾವಣೆ ಅಂತ ಹೇಳಲು ಆಗಲ್ಲ. ಹೈಕಮಾಂಡ್‌ ಹೇಳಿದರೆ ಮಾತ್ರ ಬದಲಾವಣೆ ಸಾಧ್ಯ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೊದಲು ಯಾವ ಫ್ಯಾಕ್ಟರಿ ತರ್ತೀರೇ ಹೇಳಬೇಕು. ಅದಕ್ಕೆ ತಕ್ಕಂತೆ ಸೂಕ್ತ ಜಾಗ ನೀಡುತ್ತೇವೆ. ಜವಾಬ್ದಾರಿ ಸ್ಥಾನದಲ್ಲಿ ಕುಳಿತು ಮಂಗ ಮಾಡುವುದು ಬೇಡ. ಕಾನೂನಾತ್ಮಕವಾಗಿ ಜಾಗ ಕೇಳಿ ಕಾನೂನಾತ್ಮಕವಾಗಿ ಜಾಗ ಕೊಡ್ತೀವಿ‌. ಜಾಗ ಕೊಟ್ಟಿಲ್ಲ ಅಂದಾಗ ಆರೋಪಿಸಲಿ ಎಂದರು.

ನಾನು ಆಕಾಶದಿಂದ ಇಳಿದಿಲ್ಲ, ಅವರು ಆಕಾಶದಿಂದ ಇಳಿದಿಲ್ಲ. ಮೈಷುಗರ್ ಶಾಲೆಗೆ 25 ಕೋಟಿ ಡೆಪಾಸಿಟ್ ಇಡುವುದಾಗಿ ಹೇಳಿದ್ದರು. ಈಗ 19 ಲಕ್ಷ ಸಂಬಳ ಕೊಟ್ಟು ನುಡಿದಂತೆ ನಡೆದುದ್ದಲ್ಲ. 25 ಕೋಟಿ ಕೊಟ್ಟಾಗ ನುಡಿದಂತೆ ನಡೆದಂತೆ ಎಚ್ಡಿಕೆ ವಿರುದ್ಧ ವ್ಯಂಗ್ಯವಾಡಿದರು.