ಸಾರಾಂಶ
ನಗರಸಭೆಯ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆ ನಡೆಯದಂತೆ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಅಮೂಲ್ಯ ಸಮಯವನ್ನು ಹಾಳು ಮಾಡಲು ಹೊರಟರಾದರೂ, ನಮಗೆ ಬಹುಮತವಿದ್ದುದರಿಂದ ಅವರ ಯತ್ನ ಸಫಲವಾಗಲಿಲ್ಲ ಎಂದು ಚಿಂತಾಮಣಿ ನಗರಸಭಾ ಅಧ್ಯಕ್ಷ ಆರ್.ಜಗನ್ನಾಥ್ ಹೇಳಿದರು
ಚಿಂತಾಮಣಿ : ನಗರಸಭೆಯ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆ ನಡೆಯದಂತೆ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಅಮೂಲ್ಯ ಸಮಯವನ್ನು ಹಾಳು ಮಾಡಲು ಹೊರಟರಾದರೂ, ನಮಗೆ ಬಹುಮತವಿದ್ದುದರಿಂದ ಅವರ ಯತ್ನ ಸಫಲವಾಗಲಿಲ್ಲ ಎಂದು ಚಿಂತಾಮಣಿ ನಗರಸಭಾ ಅಧ್ಯಕ್ಷ ಆರ್.ಜಗನ್ನಾಥ್ ಹೇಳಿದರು.
ನಗರಸಭಾ ಅಧ್ಯಕ್ಷರ ಕೊಠಡಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಸೇರಿದಂತೆ ನಗರದ ವಿವಿಧ ಕಾಮಗಾರಿಗಳಿಗೆ ಕೋಟ್ಯಾಂತರ ರೂಗಳನ್ನು ಅನುದಾನದ ಮೂಲಕ ತಂದು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದ್ದು ಇಂತಹ ಅಭಿವೃದ್ಧಿ ಕಾರ್ಯಗಳಿಗೆ ವಿಪಕ್ಷದ ಸದಸ್ಯರ ಸಹಕಾರ ನೀಡಬೇಕು ಎಂದರು.
ಪೊಲೀಸ್ ಬಂದೋಬಸ್ತ್
ಸಾಮಾನ್ಯ ಸಭೆಯಲ್ಲಿ ಗದ್ದಲವನ್ನು ಉಂಟು ಮಾಡುವ ಉದ್ದೇಶದಿಂದ ಇಲ್ಲಸಲ್ಲದ ವಿಚಾರಗಳನ್ನು ಪ್ರಸ್ತಾಪಿಸಿ ಕೇವಲ ನಾಲ್ಕೈದು ಸದಸ್ಯರ ವಾಗ್ವಾದಕ್ಕೆ ಕಾರಣವಾಯಿತು. ಸಾಮಾನ್ಯ ಸಭೆಯ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸರು ಬಂದೋಬಸ್ ಕಲ್ಪಿಸಿರಬಹುದು ಹೆಚ್ಚಿನ ಸಂಖ್ಯೆಯಲ್ಲಿ ಅವರು ಬಂದಿರುವುದನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ ಎಂದ ಅವರು, ಇ-ಖಾತೆಯು ಮಾಡಲಾಗುತ್ತಿದ್ದು ಇದರಲ್ಲಿ ದಲ್ಲಾಳಿಗಳ ಪಾತ್ರವಿಲ್ಲವೆಂದು ಹಾಗೂ ನಗರಸಭಾ ಸ್ವತ್ತುಗಳ ಸಂರಕ್ಷಣೆಗೂ ಒತ್ತು ನೀಡುತ್ತಿರುವುದಾಗಿ ತಿಳಿಸಿದರು.
ನಗರಸಭಾ ಸದಸ್ಯ ಜಗದೀಶ್ ಮಾತನಾಡಿ ವಿಪಕ್ಷ ಸದಸ್ಯರ ಆರೋಪದಲ್ಲಿ ಸತ್ಯಾಂಶವಿಲ್ಲ. ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಸಭೆಯನ್ನು ವಿಫಲಗೊಳಿಸುವ ಕಡೆ ಹೆಚ್ಚಿನ ಗಮನ ಕೊಟ್ಟರೆ ಹೊರತು ಅಭಿವೃದ್ಧಿಯ ಅಂಶಗಳು ಹಾಗೂ ನಗರದ ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಾಗಲಿಲ್ಲ ಎಂದು ಟೀಕಿಸಿದರು.
ಸಚಿವರಿಂದ ಕ್ಷೇತ್ರದ ಅಭಿವೃದ್ಧಿ
ಸಚಿವ ಡಾ.ಎಂ.ಸಿ.ಸುಧಾಕರ್ ಕೆರೆ, ಕಾಲೇಜು, ರಸ್ತೆ, ನೀರಾವರಿ, ಕುಡಿಯುವ ನೀರು, ಕಸದ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ ನಗರ ಇತ್ಯಾದಿಗಳಿಗೆ ಬಗೆಹರಿಸಿ ಅಭಿವೃದ್ಧಿಗೆ ಕೋಟ್ಯತರ ರುಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿಗೆ ಗಮನ ನೀಡುತ್ತಿದ್ದರೆ ಇದನ್ನು ಸಹಿಸದ ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಸುಖಾಸುಮ್ಮನೆ ಆರೋಪ ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ತಲ್ಲಿನರಾಗಿದ್ದಾರೆಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರೆಡ್ಡಪ್ಪ ಮತ್ತು ರೇಖಾಉಮೇಶ್ ಉಪಸ್ಥಿತರಿದ್ದರು.