ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಹತ್ತು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಬರೀ ಭ್ರಷ್ಟಾಚಾರದ್ದೆ ಸುದ್ದಿ ಪ್ರಕಟವಾಗುತ್ತಿದ್ದವು. ಆದರೆ ಈಗ ಹತ್ತು ವರ್ಷಗಳಿಂದ ಬರೀ ಅಭಿವೃದ್ದಿಯದ್ದೇ ಸುದ್ದಿ ಪ್ರಸಾರವಾಗುತ್ತಿರುವುದನ್ನು ನೋಡಿದರೆ ಅಭಿವೃದ್ದಿ ಎಂದರೆ ಪ್ರಧಾನಿ ಮೋದಿ ಮೋದಿ ಎನ್ನುವಂತಾಗಿದೆ. ದೇಶಕ್ಕೆ ಮೋದಿ ಕಾಮಧೇನು ಇದ್ದಂತೆ, ಕೇಳಿದ್ದಕ್ಕೆಲ್ಲ ಅಸ್ತು ಎನ್ನುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಹಾಗೂ ಜನೌಷಧಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ೬೦ವರ್ಷಗಳಿಂದ ರೈಲ್ವೆ ನಿಲ್ದಾಣಗಳನ್ನು ಆಡಳಿತ ನಡೆಸಿದ ಸರ್ಕಾರಗಳು ಅಭಿವೃದ್ದಿಗೊಳಿಸದೆ ಕಡೆಗಣಿಸಿದ್ದರು, ಆದರೆ ಪ್ರಧಾನಿ ಮೋದಿ ಹತ್ತೇ ವರ್ಷಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ಹೀಗೂ ಅಭಿವೃದ್ದಿಗೊಳಿಸಬಹುದೇ ಎಂದು ಅಭಿವೃದ್ದಿಗೊಳಿಸಿ ತೋರಿಸಿದ್ದಾರೆ ಎಂದರು.ರೈಲುಗಳಿಗೆ ಹೈಟೆಕ್ ಸ್ಪರ್ಶ
ಜನರ ಬೇಡಿಕೆಯಂತೆ ಹೊಸ ರೈಲುಗಳನ್ನು ಹಾಗೂ ಪ್ರಯಾಣಿಕರಿಗೆ ತಕ್ಕಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ರೈಲುಗಳಿಗೆ ಹೈಟೆಕ್ ಸ್ಪರ್ಶ ನೀಡಿ ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಿದ್ದಾರೆಂದರು.ಆಲ್ಲದೆ ಆಡಳಿತದಲ್ಲಿ ಪಾರದರ್ಶಕ ಮಾಡಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯವಾಗುವಂತೆ ಮಾಡಿದ್ದಾರೆ.ಪ್ರಪಂಚದಲ್ಲೆ ಅತ್ಯಂತ ವ್ಯವಸ್ಥಿತವಾದ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸಲು ಮೋದಿ ಸಂಕಲ್ಪ ಮಾಡಿದ್ದು ಮುಂದಿನ ೫ ವರ್ಷಗಳಲ್ಲಿ ಯಾರೂ ಕಲ್ಪನೆ ಮಾಡದ ರೀತಿಯಲ್ಲಿ ಅಭಿವೃದ್ದಿಗೊಳಿಸುವರು. ಈ ಹಿಂದೆ ಜಿಲ್ಲೆಯ ಸಂಸದರೇ ರೈಲ್ವೆ ಸಚಿವರಾಗಿದ್ದರೂ ಜಿಲ್ಲೆಗೆ ಅವರ ಕೊಡುವೆ ಶೂನ್ಯ, ಆದರೆ ಪ್ರಧಾನಿ ಮೋಡಿ ಆಡಳಿತ ಪ್ರಪಂಚ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಪ್ರಧಾನಿ ಮೋದಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಮೂರನೇ ಬಾರಿಯೂ ಮೋದಿರವರೇ ಪ್ರಧಾನಿ ಆಗುವುದು ಖಚಿತ. ಬಿಜೆಪಿ ಟಿಕೆಟ್ ಯಾರಿಗೆ ನೀಡಿದರೂ ಜಿಲ್ಲೆಯ ಜನರು ಗೊಂದಲವಿಲ್ಲದೆ ಬೆಂಬಲಿಸಬೇಕು. ಕ್ಷೇತ್ರದಲ್ಲಿ ಕೆಲಸ ಮಾಡಿರುವವರನ್ನು ಮೋದಿ ಎಂದಿಗೂ ಕೈಬಿಡಲ್ಲ ಎನ್ನುವ ಮೂಲಕ ಮೈತ್ರಿ ಅಭ್ಯರ್ಥಿ ತಾವೇ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು. ಮೋದಿ ಕೈಬಲಪಡಿಸಲು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕೆಂದರು.
ಕೆಲವರು ವೈಯಕ್ತಿಕ ಬೆಳವಣಿಗೆಗಾಗಿ ಹಗಲು ರಾತ್ರಿ ಶ್ರಮಿಸುವರು, ಆದರೆ ಮೋದಿ ದೇಶಕ್ಕಾಗಿ ವಿಶ್ರಾಂತಿ ಇಲ್ಲದೆ ದುಡಿಯುವ ಏಕೈಕ ವ್ಯಕ್ತಿ,ಸ್ವಾವಲಂಬಿ ಜೀವನಕ್ಕೆ ಮೋದಿ ಯೋಜನೆಗಳು ಪೂರಕವಾಗಿದೆ ಎಂದರು.ಈ ವೇಳೆ ಎಂಎಲ್‌ಸಿ ಇಂಚರ ಗೋವಿಂದರಾಜು, ಪಕ್ಷದ ಮುಖಂಡರಾದ ಕೆ.ಚಂದ್ರಾರೆಡ್ಡಿ,ಮಾಜಿ ಶಾಸಕ ಎಂ.ನಾರಾಯಣಸ್ವಾಮಿ,ಬಿ.ವಿ,ಮಹೇಶ್,ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಪುರಸಭೆ ಸದಸ್ಯ ಕಪಾಲಿಶಂಕರ್, ವಿ.ಶೇಷು, ನಿವೃತ್ತ ಡಿವೈಎಸ್‌ಪಿ ಶಿವಕುಮಾರ್, ಹೊಸರಾಯಪ್ಪ, ಅಮರೇಶ್, ಶ್ರೀನಿವಾಸಗೌಡ ಮತ್ತಿತರರು ಇದ್ದರು.