ಯರಗೋಳ್ ಜಲಾಶಯದಿಂದ ಕೋಲಾರ ನಗರದ ವಾರ್ಡ್‌ಗಳಿಗೆ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ : ಅಧಿಕಾರಿಗಳಿಗೆ ಮನವಿ

| Published : Aug 03 2024, 12:33 AM IST / Updated: Aug 03 2024, 04:59 AM IST

ಸಾರಾಂಶ

ಕೋಲಾರ ನಗರದಲ್ಲಿ 9 ಓವರ್ ಹೆಡ್ ಟ್ಯಾಂಕ್ ಅಳವಡಿಸಲಾಗಿದೆ. ಆದರೆ, ಹಲವು ವಾರ್ಡ್‌ಗಳಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ

 ಕೋಲಾರ : ಯರಗೋಳ್ ಜಲಾಶಯದಿಂದ ಕೋಲಾರ ನಗರದ ವಾರ್ಡ್‌ಗಳಿಗೆ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಆಗುತ್ತಿರುವುದನ್ನು ಖಂಡಿಸಿ, ಇಲ್ಲಿನ ಹೊರ ವಲಯದ ಟಮಕದಲ್ಲಿ ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಚೇರಿ ಮುಂದೆ ನಗರಸಭೆ ಸದಸ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಗರಸಭೆ ಸದಸ್ಯ ಎನ್.ಎಸ್.ಪ್ರವೀಣ್ ಗೌಡ ಮಾತನಾಡಿ, ಯರಗೋಳ್ ಜಲಾಶಯದಲ್ಲಿ ಯಥೇಚ್ಛ ನೀರಿದ್ದರೂ ನಗರದ ಶೇ50ವಾರ್ಡ್‌ಗಳಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಮಾಡುತ್ತಿಲ್ಲ. ನೂರಾರು ಕೋಟಿ ರುಪಾಯಿ ಅನುದಾನದಲ್ಲಿ ಯೋಜನೆ ರೂಪಿಸಿ ಉದ್ಘಾಟಿಸಲಾಗಿದೆ ಎಂದರು. ಎಲ್ಲ ಕಡೆ ಪೈಪ್‌ಲೈನ್‌ ಕಲ್ಪಿಸಿಲ್ಲ

ನಗರದಲ್ಲಿ ೯ ಓವರ್ ಹೆಡ್ ಟ್ಯಾಂಕ್ ಅಳವಡಿಸಲಾಗಿದೆ. ಆದರೆ, ಹಲವು ವಾರ್ಡ್‌ಗಳಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪಂಪ್‌ಹೌಸ್‌ಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದು ಬೆಸ್ಕಾಂ ಮೇಲೆ ಅಧಿಕಾರಿಗಳು ದೂರುತ್ತಾರೆ. ಒಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ. ಜನರ ಪಾಡೇನು ಎಂದು ಪ್ರಶ್ನಿಸಿದರು.

ಸಮರ್ಪಕ ವಿದ್ಯುತ್‌ ಕಲ್ಪಿಸಿ

ಯರಗೋಳ್ ಜಲಾಶಯದ ಪಂಪ್ ಹೌಸ್, ಬಂಗಾರಪೇಟೆ ಪಂಪ್‌ಹೌಸ್ ಹಾಗೂ ಕೋಲಾರದ ಸ್ಯಾನಿಟೋರಿಯಂ ಬಳಿಯ ಪಂಪ್‌ಹೌಸ್‌ಗೆ ದಿನದ ೨೪ ಗಂಟೆಯೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಬೇಕು, ಬಿಟ್ಟು ಹೋಗಿರುವ ಪೈಪ್‌ಲೈನ್ ಸಂಪರ್ಕ ಕಲ್ಪಿಸಬೇಕು, ಕಾಮಗಾರಿ ಪೂರ್ಣಗೊಂಡಿರುವ ೪ ಓವರ್ ಹೆಡ್ ಟ್ಯಾಂಕ್‌ಗಳನ್ನು ಉದ್ಘಾಟಿಸಿ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿದರು.ಕೋಲಾರದ ೩೫ ವಾರ್ಡ್‌ಗಳಲ್ಲೂ ನೀರು ಪೂರೈಕೆ ಅಸ್ತವ್ಯಸ್ತವಾಗಿದೆ. ಕೆಲ ವಾರ್ಡ್‌ಗಳಿಗೆ ಯರಗೋಳ್ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಕೆಲ ವಾರ್ಡ್‌ಗಳಿಗೆ ಸ್ವಲ್ಪವೂ ಬರುತ್ತಿಲ್ಲ. ನೀರು ಪೂರೈಕೆ ವ್ಯವಸ್ಥೆ ಸರಿಪಡಿಸುವಂತೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ, ಕರ್ನಾಟಕ ನಗರ ಕುಡಿಯುವ ನೀರು ಸಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದೇವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಯರಗೋಳ್ ಸಮನ್ವಯ ಸಭೆ ನಡೆಸಿ ಬೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.

ನಗರಸಭೆ ಸದಸ್ಯರಾದ ಮುರಳಿಗೌಡ, ನಾಜೀಯಾ ಬಾಬಜಾನ್, ರಾಕೇಶ್, ಗುಣಶೇಖರ್, ಮಂಜುನಾಥ್, ಸಂಗೀತ ಜಗದೀಶ್ ಇದ್ದರು.ಬಾಕ್ಸ್ ಪೈಪ್‌ಲೈನ್ ಸಮಸ್ಯೆಯರಗೋಳ್ ಜಲಾಶಯದಿಂದ ಕೋಲಾರ ನಗರ, ಬಂಗಾರಪೇಟೆ, ಮಾಲೂರು ಪಟ್ಟಣ ಹಾಗೂ ಮಾರ್ಗಮಧ್ಯದ ೪೫ ಹಳ್ಳಿಗಳ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ೨೦೨೩ರ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಜಲಾಶಯ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ಸುಮಾರು ೩೦೮.೪೬ ಕೋಟಿ ರು.ಗಳ ವೆಚ್ಚವಾಗಿದೆ. ಆದರೆ, ಕೋಲಾರ ನಗರದಲ್ಲಿ ಇನ್ನೂ ಕೆಲವೆಡೆ ನೀರು ಪೂರೈಕೆ ಆಗುತ್ತಿಲ್ಲ. ಅದಕ್ಕೆ ಅಧಿಕಾರಿಗಳು ಪೈಪ್‌ಲೈನ್ ಸಮಸ್ಯೆಯ ಕಾರಣ ನೀಡುತ್ತಿದ್ದಾರೆ. ಹಲವು ವಾರ್ಡ್‌ಗಳಿಗೆ ಪೈಪ್‌ಲೈನ್ ವ್ಯವಸ್ಥೆಯೇ ಇಲ್ಲ, ಇನ್ನು ಕೆಲವೆಡೆ ಹಳತ್ತಾಗಿ ಸಮಸ್ಯೆಯಾಗಿದೆ.

ಕೋಲಾರದ ೩೫ ವಾರ್ಡ್‌ಗಳಲ್ಲೂ ನೀರು ಪೂರೈಕೆ ಅಸ್ತವ್ಯಸ್ತವಾಗಿದೆ. ಕೆಲ ವಾರ್ಡ್‌ಗಳಿಗೆ ಯರಗೋಳ್ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಕೆಲ ವಾರ್ಡ್‌ಗಳಿಗೆ ಸ್ವಲ್ಪವೂ ಬರುತ್ತಿಲ್ಲ. ನೀರು ಪೂರೈಕೆ ವ್ಯವಸ್ಥೆ ಸರಿಪಡಿಸುವಂತೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ, ಕರ್ನಾಟಕ ನಗರ ಕುಡಿಯುವ ನೀರು ಸಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದೇವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಯರಗೋಳ್ ಸಮನ್ವಯ ಸಭೆ ನಡೆಸಿ ಬೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.