ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧದ ಆರ್ಥಿಕ ಅಶಿಸ್ತು ಹಾಗೂ ಲೆಕ್ಕಪತ್ರ ಲೋಪ, ಅಡಿಟ್ ಆಕ್ಷೇಪಣೆ ವಿಚಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅಗ್ರಹಿಸಿ ಸಾಹಿತಿಗಳ ನಿಯೋಗ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧದ ಆರ್ಥಿಕ ಅಶಿಸ್ತು ಹಾಗೂ ಲೆಕ್ಕಪತ್ರ ಲೋಪ, ಅಡಿಟ್ ಆಕ್ಷೇಪಣೆ ವಿಚಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅಗ್ರಹಿಸಿ ಸಾಹಿತಿಗಳ ನಿಯೋಗ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಅಭ್ಯಂತರವಿಲ್ಲ. ಕಸಾಪ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಮೂಲ ಸೌಕರ್ಯಗಳಿಲ್ಲದ ಸಂಡೂರಿನಲ್ಲಿ ಮಾಡಲು ಉದ್ದೇಶಿಸಿದೆ. ಅದನ್ನು ತಡೆದು ಬಳ್ಳಾರಿ ಅಥವಾ ಬೆಂಗಳೂರಿನಲ್ಲಿ ಸಭೆ ಮಾಡಲಿ. ಹಾಗೆಯೇ ಈ ಹಿಂದೆ ನಡೆದಿರುವ ಮಂಡ್ಯ ಮತ್ತು ಹಾವೇರಿ ಸಾಹಿತ್ಯ ಸಮ್ಮೇಳನದ ಹಣಕಾಸು ಲೆಕ್ಕದ ಆಡಿಟ್ ವರದಿಯನ್ನು ಇನ್ನೂ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮಂಡಿಸಿಲ್ಲ. ಅದನ್ನು ಮಂಡಿಸಿದ ನಂತರವೇ 88ನೇ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಜೊತೆಗೆ ಆರ್ಥಿಕ ವಹಿವಾಟುಗಳಲ್ಲಿ ಕೆಲವು ಅಕ್ರಮ ನಡೆದಿದೆ ಎಂಬ ಮಾಹಿತಿ ಮೂಲಗಳು ಹೇಳುತ್ತಿವೆ. ಅದಕ್ಕೋಸ್ಕರ ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಿ ಆ ನಂತರವೇ ಹಣಕಾಸು ಒದಗಿಸಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.
ನಿಯೋಗದಲ್ಲಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಯಪ್ರಕಾಶ್ ಗೌಡ, ವಸುಂಧರಾ ಭೂಪತಿ, ಸುನಂದಾ ಜಯರಾಮ್, ಆರ್. ಜಿ. ಹಳ್ಳಿ ನಾಗರಾಜ್, ಡಿ.ಪಿ. ಸ್ವಾಮಿ, ಮೀರಾ ಶಿವಲಿಂಗಯ್ಯ, ಸಿ.ಕೆ ರಾಮೇಗೌಡ, ಪ್ರಕಾಶಮೂರ್ತಿ ಉಪಸ್ಥಿತರಿದ್ದರು.