ಸಾರಾಂಶ
ಯತ್ನಾಳ್ ಯಾವಾಗ ಏನು ಮಾತಾಡುತ್ತಾರೆ ಎಂಬುದನ್ನು ಆ ಭಗವಂತನೇ ಬಲ್ಲ. ಬಿಎಸ್‌ವೈ, ಅನಂತಕುಮಾರ್ ಪಕ್ಷ ಕಟ್ಟಿದ್ದಾರೆ. ಅವರು ಪಕ್ಷ ಕಟ್ಟದಿದ್ದರೆ ವೇದಿಕೆ ಹತ್ತುವ ಯೋಗ್ಯತೆಯೂ ಕೆಲವರಿಗಿರುತ್ತಿರಲಿಲ್ಲ. ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಯತ್ನಾಳ್‌ಗೆ ಕುಟುಕಿದ್ದಾರೆ.
ಚಿತ್ರದುರ್ಗ : ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ದಶಕಗಳಿಂದ ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಧೀಮಂತ ನಾಯಕ. ಬಿಎಸ್‌ವೈ ಪಕ್ಷ ಕಟ್ಟದಿದ್ದರೆ ಕೆಲವರಿಗೆ ವೇದಿಕೆ ಹತ್ತುವ ಯೋಗ್ಯತೆ ಎಲ್ಲಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಯತ್ನಾಳ್‌ಗೆ ಕುಟುಕಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಎಸ್‌ವೈ ಬಿಜೆಪಿ ವೇದಿಕೆ ಹತ್ತಬಾರದು ಎಂಬ ಯತ್ನಾಳ್ ಹೇಳಿಕೆಗೆ ಕಿಡಿ ಕಾರಿದ ವಿಜಯೇಂದ್ರ, ಯತ್ನಾಳ್ ಯಾವಾಗ ಏನು ಮಾತಾಡುತ್ತಾರೆ ಎಂಬುದನ್ನು ಆ ಭಗವಂತನೇ ಬಲ್ಲ. ಬಿಎಸ್‌ವೈ, ಅನಂತಕುಮಾರ್ ಪಕ್ಷ ಕಟ್ಟಿದ್ದಾರೆ.
ಅವರು ಪಕ್ಷ ಕಟ್ಟದಿದ್ದರೆ ವೇದಿಕೆ ಹತ್ತುವ ಯೋಗ್ಯತೆಯೂ ಕೆಲವರಿಗಿರುತ್ತಿರಲಿಲ್ಲ. ಬಿಎಸ್‌ವೈ ಕೊಡುಗೆ ಮರೆತಿದ್ದರೆ ಯತ್ನಾಳ್ ನೆನಪಿಸಿಕೊಳ್ಳಲಿ. ಯತ್ನಾಳ್ ಮನಬಂದಂತೆ ಮಾತಾಡುವುದನ್ನು ಬಿಡಲಿ. ಹಗುರವಾಗಿ ಮಾತಾಡಿದರೆ ಮುಂದೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.