ಸಾರಾಂಶ
ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಡಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆಗೊಳಿಸುವಂತೆ ನೈತಿಕ ಸಮಿತಿಯು ಶಿಫಾರಸು ಮಾಡಿರುವ ನಡುವೆಯೇ ಟಿಎಂಸಿಯು ಮಹುವಾಗೆ ಪಕ್ಷ ಸಂಘಟನೆಯ ಹೊಸ ಹೊಣೆ ನೀಡಲಾಗಿದೆ
ಕೋಲ್ಕತಾ: ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಡಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆಗೊಳಿಸುವಂತೆ ನೈತಿಕ ಸಮಿತಿಯು ಶಿಫಾರಸು ಮಾಡಿರುವ ನಡುವೆಯೇ ಟಿಎಂಸಿಯು ಮಹುವಾಗೆ ಪಕ್ಷ ಸಂಘಟನೆಯ ಹೊಸ ಹೊಣೆ ನೀಡಲಾಗಿದೆ. ಮಹುವಾ ಅವರನ್ನು ಕೃಷ್ಣನಗರದ ಟಿಎಂಸಿ ಅಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ. ಈ ಮೂಲಕ ಮಹುವಾ ಅವರು ತಪ್ಪು ಮಾಡಿದ್ದಾರೆ ಹಾಗೂ ಅವರ ವಿರುದ್ಧ ಟಿಎಂಸಿ ಕ್ರಮ ಕೈಗೊಳ್ಳಬೇಕು ಎಂಬ ವಿಪಕ್ಷಗಳ ಆರೋಪದ ನಡುವೆಯೇ ತನ್ನ ಸಂಸದೆಗೆ ಟಿಎಂಸಿ ಸ್ಪಷ್ಟ ಬೆಂಬಲ ನೀಡಿದೆ.