‘ಇಂಡಿಯಾ’ ಮೈತ್ರಿ ಕೂಟಕ್ಕೆ ಬಹುಮತ: ನಿರೀಕ್ಷೆ

| Published : Apr 16 2024, 01:08 AM IST / Updated: Apr 16 2024, 04:50 AM IST

‘ಇಂಡಿಯಾ’ ಮೈತ್ರಿ ಕೂಟಕ್ಕೆ ಬಹುಮತ: ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ವಿರೋಧ ಪಕ್ಷದ ನಾಯಕರು ಮತದಾರರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ರವರು ನೆರೆಯ ಆಂಧ್ರಪ್ರದೇಶದ ಮೂಲದವರು ಎಂದು ಪ್ರತಿಬಿಂಬಿಸಲು ಹೊರಟಿದ್ದಾರೆ, ವಾಸ್ತವಿಕವಾಗಿ ಗೌತಮ್ ರವರ ತಂದೆ ಬೆಂಗಳೂರಿನವರು ಎಂಬುದು ಕಾಂಗ್ರೆಸ್‌ ವಾದ

 ಬಂಗಾರಪೇಟೆ :  ಪ್ರಧಾನಿ ನರೇಂದ್ರ ಮೋದಿ ರವರು ಕಳೆದ 10 ವರ್ಷಗಳಲ್ಲಿ ಕೊಟ್ಟ ಯಾವುದೇ ಭರವಸೆಗಳನ್ನು ಇಡೇರಿಸಲಿಲ್ಲ ಮತ್ತು ಜನಪರ ಯೋಚನೆಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಕಾರಣ ದೇಶಾದ್ಯಂತ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ,ಆದ್ದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಐಎನ್‌ಡಿ ಐಎ ಮೈತ್ರಿ ಕೂಟ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ತೊಪ್ಪನಹಳ್ಳಿ, ದೋಣಿ ಮಡಗು ಮತ್ತು ಕಾಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಶ್ರೀಮಂತರ ಪರ

ಪ್ರಧಾನಿ ಮೋದಿ ಅವರು ಹುಸಿ ಭರವಸೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದ್ದಾರೆ,ಬಡವರ ಮತ್ತು ಮಧ್ಯಮ ವರ್ಗ ಮತ್ತು ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ, ಶ್ರೀಮಂತ ವರ್ಗದ ಪರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಗೌತಮ್‌ ಆಂಧ್ರದವರಲ್ಲ

ವಿರೋಧ ಪಕ್ಷದ ನಾಯಕರು ಮತದಾರರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ರವರು ನೆರೆಯ ಆಂಧ್ರಪ್ರದೇಶದ ಮೂಲದವರು ಎಂದು ಪ್ರತಿಬಿಂಬಿಸಲು ಹೊರಟಿದ್ದಾರೆ, ವಾಸ್ತವಿಕವಾಗಿ ಗೌತಮ್ ರವರ ತಂದೆ ಬೆಂಗಳೂರಿನವರು ಹಾಗೂ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಗೌತಮ್ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು, ಅಲ್ಲದೆ ಇವರ ತಾಯಿ ಮೂಲತಃ ಚಿಂತಾಮಣಿ ಕ್ಷೇತ್ರದವರಾಗಿದ್ದು ಇವರ ಸಹೋದರಿಯರನ್ನು ಕೋಲಾರ ಮೂಲದವರಿಗೆ ವಿವಾಹ ಮಾಡಿಕೊಳ್ಳಲಾಗಿದೆ ಎಂದರು.

ಅದರಂತೆಯೇ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುರವರೂ ಸಹ ಕೋಲಾರದ ನಿವಾಸಿ ಅಲ್ಲ. ಅವರು ಬೆಂಗಳೂರಿನ ವಾಸಿಯಾಗಿದ್ದು ಅವರ ತಾಯಿ ಕೋಲಾರದ ನಿವಾಸಿ ಎಂದರು.

ಚುನಾವಣೆ ಬಳಿಕ ಸೋಲಾರ್‌ ಬೇಲಿ

ತಾಲೂಕಿನ ಪೊಲೇನಹಳ್ಳಿ ಗ್ರಾಮದಲ್ಲಿ ಆನೆ ದಾಳಿಗೆ ನಾರಾಯಣಪ್ಪ ಎಂಬುವರು ಮೃತಪಟ್ಟದು, ಅಧಿಕಾರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ಪರಿಹಾರ ಕಲ್ಪಿಸಲಾಗುವುದು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೋಲಾರ್ ಬೇಲಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಶೇಕಡ 70ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು, ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನುದಾನ ನೀಡಲಿಲ್ಲ, ಈ ಕೂಡಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರೊಂದಿಗೆ ಚರ್ಚಿಸಿ ಚುನಾವಣೆಯ ನಂತರ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಧಿನಾರಾಯಣ ಕುಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜು, ಮುಖಂಡರಾದ ಪಿಚ್ಚಹಳ್ಳಿ ಗೋವಿಂದರಾಜು, ಸಮಾಜ ಸೇವಕ ಮುನಿರಾಜು, ರಂಗಾಚಾರಿ, ಜಿ.ಎಂ.ಶ್ರೀನಿವಾಸ್, ಬಾಬು, ಮುನೀರ್, ಸೀತಾರಾಮಪ್ಪ, ಇತರರುದಿದ್ದರು.