ಎಎಪಿಯಿಂದ ಅರೋಪಿಗಳ ರಕ್ಷಣೆ: ಬಿಜೆಪಿ ಕಿಡಿ

| Published : May 19 2024, 01:49 AM IST

ಸಾರಾಂಶ

‘ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಮಾಡಿದ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತನನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಆಮ್‌ ಆದ್ಮಿ,ಈ ಪ್ರಕರಣದಲ್ಲಿ ಬಲಿಪಶು ಆಗಿರುವವರನ್ನು ಅವಮಾನಿಸುತ್ತಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.

ನವದೆಹಲಿ: ‘ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಮಾಡಿದ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತನನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಆಮ್‌ ಆದ್ಮಿ,ಈ ಪ್ರಕರಣದಲ್ಲಿ ಬಲಿಪಶು ಆಗಿರುವವರನ್ನು ಅವಮಾನಿಸುತ್ತಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.

ಇದೇ ವೇಳೆ ‘ತಮ್ಮ ರಹಸ್ಯ ವಿಷಯಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರು ಬಿಭವ್‌ ಕುಮಾರ್‌ ರಕ್ಷಣೆಗೆ ಮುಂದಾಗಿದ್ದಾರೆ’ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಆರೋಪಿದ್ದಾರೆ. ಸ್ವಾತಿ ವರ್ತನೆ ಬಿಜೆಪಿಯವರ ಇಚ್ಛೆಯಂತಿದೆ ಎಂದು ಆರೋಪಿಸಿದ್ದ ಆಪ್‌ಗೆ ತಿರುಗೇಟು ನೀಡಿರುವ ಪೂನವಾಲಾ ‘ಆಮ್ ಆದ್ಮಿ ಭ್ರಷ್ಟಚಾರ ಮತ್ತು ದುಷ್ಕ್ರತ್ಯಗಳನ್ನು ಅನುಸರಿಸುತ್ತಿದೆ. ಇದು ಆಪ್‌ನ ಕಾರ್ಯವಿಧಾನವಾಗಿದೆ. ಆಪ್ ಸದ್ಯ ಮಲಿವಾಲ್ ವ್ಯಕ್ತಿತ್ವ ಹರಣದಲ್ಲಿ ತೊಡಗಿಕೊಂಡಿದೆ. ಆಮ್ ಆದ್ಮಿ ಮಹಿಳಾ ವಿರೋಧಿ ಪಕ್ಷ.’ ಎಂದಿದ್ದಾರೆ.