ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ವಿದೇಯಕವನ್ನು ಮಂಡಿಸಲು ಸರ್ವ ಪಕ್ಷಗಳಿಂದಲೂ ಮತಯಾಚಿಸಿದ್ದರು ಕಾಂಗ್ರೆಸ್‌ನ ಸಂಸದರು ಇದಕ್ಕೆ ಸಹಮತ ತೋರಿಸದೆ ಇರುವುದು ದುರದೃಷ್ಟಕರ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿವಿಧ ವ್ಯಕ್ತಪಡಿಸಿದರು.ದೇವನಹಳ್ಳಿ ತಾಲೂಕು ಆಡಳಿತ ಸೌಧದ ಮುಂದೆ ಜೆಡಿಎಸ್ ಮಹಿಳಾ ಅಧ್ಯಕ್ಷ ಶ್ರೀಮತಿ ಮೀನಾಕ್ಷಿ ಮುನಿಕೃಷ್ಣಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಮಹಿಳೆಯರ ವಿರುದ್ಧ ಕೆಲಸ ಮಾಡುತ್ತಿದ್ದು, ಮಹಿಳಾ ಮೀಸಲಾತಿ ವಿರೋಧಿಗಳಾಗಿದ್ದಾರೆ. ದೇಶದ ಪ್ರತಿಯೊಬ್ಬ ಮಹಿಳೆಯರು ಇದನ್ನು ಖಂಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಮಹಿಳಾ ಮೀಸಲಾತಿ ವಿದೇಯಕವು ಒಂದು ಕಾಂಗ್ರೆಸ್ ಸಂಸದರು ಸೇರಿದಂತೆ ಎಲ್ಲ ಮುಖಂಡರು ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ತಿಳಿಸಿದರು.ಜೆಡಿಎಸ್ ಮಹಿಳಾ ಅಧ್ಯಕ್ಷ ಶ್ರೀಮತಿ ಮೀನಾಕ್ಷಿ ಮುನಿಕೃಷ್ಣಪ್ಪ ಮಾತನಾಡಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಶಯದಂತೆ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33%ರಷ್ಟು ಮಿಸಲಾತಿ ನೀಡುವ ಐತಿಹಾಸಿಕ ವಿಧೇಯಕ. ಇದು ಕೊಟ್ಯಂತರ ಮಹಿಳೆಯರ ಆಶಾಕಿರಣವಾಗಿದ್ದು, ಕಾಂಗ್ರೆಸ್ ಮುಖಂಡರುಗಳು ಮಹಿಳಾ ಸಬಲೀಕರಣದ ಬಗ್ಗೆ ಉದ್ದುದ್ದ ಭಾಷಣ ಬಿಗಿದು ಲೋಕಸಭೆಯಲ್ಲಿ ಮಹಿಳಾ ವಿಧೇಯಕ ಹಿನ್ನಡೆ ಅನುಭವಿಸಲು ಕಾರಣರಾಗಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಖಂಡಿಸಿದ ಪ್ರತಿಭಟನಾಕಾರರು, ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ದೇವನಹಳ್ಳಿ ತಾಲೂಕು ತಹಶೀಲ್ದಾರರು ಮುಖಾಂತರ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರವನ್ನು ರವಾನಿಸಲು ತಾಲೂಕು ಕಚೇರಿ ಆವರಣದಲ್ಲಿ ಶಿರಸ್ತೇದಾರ್ ಸಂತೋಷ ಅವರಿಗೆ ಮನವಿ ನೀಡಲಾಯಿತು.

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ವಿ. ಮಂಜುನಾಥ್, ತಾಲೂಕು ಅಧ್ಯಕ್ಷ ಮಹೇಶ್, ಯುವ ಘಟಕದ ಅಧ್ಯಕ್ಷ ಹೊಸಹಳ್ಳಿ ಟಿ. ರವಿ, ಗೌರವಾಧ್ಯಕ್ಷ ಸಂಪಂಗಪ್ಪ, ಕಾರ್ಯಾಧ್ಯಕ್ಷ ಜಿ. ಎ.ರವೀಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಮನೋಹರ್ , ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ತಾಲೂಕು ಸೊಸೈಟಿ ಉಪಾಧ್ಯಕ್ಷೆ ಕಾಂತಮ್ಮ ನಾಗರಾಜ್, ಶ್ವೇತಾ, ಪ್ರಮುಖ ಮುಖಂಡರಾದ ಹನುಮಪ್ಪ, ಸುಬ್ಬಣ್ಣ, ಮುನಿನಂಜಪ್ಪ, ಗಂಗಾಧರ್, ಶಿವಣ್ಣ, ಮಂಜುನಾಥ್, ಮುನಿರಾಜ್, ಬಸವರಾಜ್, ರವಿ, ಲೋಕೇಶ್ ಪ್ರಭಾಕರ್, ಶಿವಾನಂದ್ ಹಾಗೂ ರಂಗಸ್ವಾಮಿ, ರಾಜಾನಂದಗೌಡ, ಯುವ ನಾಯಕರಾದ ಹರ್ಷವರ್ಧನ್, ಗೋಪಿ, ಚೇತನ್, ಅಭಿಷೇಕ್, ಹರೀಶ್, ಗಿರೀಶ್, ಕಿರಣ್, ಮಂಜುನಾಥ್, ವೆಂಕಟೇಗೌಡ ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಹಾಜರಿದ್ದರು.