ಸಾರಾಂಶ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಯಾರೇ ಹಲೋ ಎಂದರೂ ಅವರು ಹಲೋ ಎನ್ನುವುದಿಲ್ಲ. ಬದಲಿಗೆ ವಾಟ್ (ಏನು) ಎನ್ನುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಬೆಂಗಳೂರು : ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಯಾರೇ ಹಲೋ ಎಂದರೂ ಅವರು ಹಲೋ ಎನ್ನುವುದಿಲ್ಲ. ಬದಲಿಗೆ ವಾಟ್ (ಏನು) ಎನ್ನುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಹನಿಟ್ರ್ಯಾಪ್ ವಿಚಾರವಾಗಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಎಂ.ಬಿ. ಪಾಟೀಲ್, ರಾಜಣ್ಣ ಅವರಿಗೆ ಯಾರಾದರೂ ಹಾಯ್ ಎಂದರೆ ಹಲೋ ಎನ್ನುವುದಿಲ್ಲ. ಬದಲಿಗೆ ವಾಟ್ ಎಂದು ಕೇಳುತ್ತಾರೆ. ಕೆಲವರಿಗೆ ಸುಮ್ಮನೇ ಟ್ರ್ಯಾಪ್ ಮಾಡೋ ಉದ್ದೇಶ ಇರುತ್ತದೆ. ರಾಜಣ್ಣ ಅವರು ಹಿರಿಯ ಸದಸ್ಯರು. ಅವರ ಸ್ವಭಾವ ನನಗೆ ಗೊತ್ತಿದೆ. ಅವರ ಬಳಿ ಕಮ್, ಬಾ, ಹಲೋ, ಗಿಲೋ ನಡೆಯುವುದಿಲ್ಲ. ಹಂಗೆಲ್ಲ ರಾಜಣ್ಣ ಮಾಡೋಕೆ ಸಾಧ್ಯವಿಲ್ಲ ಎಂದರು.
ಹನಿಟ್ರ್ಯಾಪ್ ಯಾರ ಮೇಲೆಯಾದರೂ ಆದರೂ ಅದು ತಪ್ಪು. ಅದು ಬಿಜೆಪಿಯವರ ಮೇಲೆ ಆದರೂ ಮಾಡಿದವರ ವಿರುದ್ಧ ಕ್ರಮವಾಗಬೇಕು. ಹನಿಟ್ರ್ಯಾಪ್ ವಿಚಾರದಲ್ಲಿ ಯಾರೇ ಓನರ್ ಆಗಿರಲಿ, ಪ್ರೊಡ್ಯೂಸರ್, ಡೈರೆಕ್ಟರ್, ಕ್ಯಾಮೆರಾಮೆನ್, ಆ್ಯಕ್ಟರ್ ಆಗಿರಲಿ ಅವರ ವಿರುದ್ಧ ಕ್ರಮವಾಗಬೇಕು ಎಂದು ತಿಳಿಸಿದರು.