ಸಾರಾಂಶ
ಮುನಿರೆಡ್ಡಿಪಾಳ್ಯದ ಅದ್ಧೂರಿ ದಸರಾ ಮಹೋತ್ಸವಕ್ಕೆ ನಗರಾಭಿವೃದ್ಧಿ ಸಚಿವ, ದಸರಾ ಉತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಬೈರತಿ ಸುರೇಶ್ ಅವರು ತಮ್ಮ ಪತ್ನಿಯೊಂದಿಗೆ ಮುನಿರೆಡ್ಡಿ ಪಾಳ್ಯದ ಮಹೇಶ್ವರಮ್ಮ ದೇವಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಚಾಲನೆ
ಬೆಂಗಳೂರು : ಕರ್ನಾಟಕದ ಎರಡನೇ ಮೈಸೂರು ದಸರಾ ಎಂದೇ ಖ್ಯಾತಿ ಹೊಂದಿರುವ ಜೆ.ಸಿ. ನಗರ ಮುನಿರೆಡ್ಡಿಪಾಳ್ಯದ ಅದ್ಧೂರಿ ದಸರಾ ಮಹೋತ್ಸವಕ್ಕೆ ನಗರಾಭಿವೃದ್ಧಿ ಸಚಿವ, ದಸರಾ ಉತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಬೈರತಿ ಸುರೇಶ್ ಅವರು ತಮ್ಮ ಪತ್ನಿಯೊಂದಿಗೆ ಮುನಿರೆಡ್ಡಿ ಪಾಳ್ಯದ ಮಹೇಶ್ವರಮ್ಮ ದೇವಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸಾವಿರಾರು ಭಕ್ತಾಧಿಗಳು, ಕಳಶ ಹೊತ್ತ ಹೆಣ್ಣುಮಕ್ಕಳು, ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ಜೆ.ಸಿ. ನಗರದ ದಸರಾ ಮೈದಾನಕ್ಕೆ ತೆರಳಿ ದೀಪ ಬೆಳಗುವುದರ ಮೂಲಕ 9 ದಿನಗಳ ಕಾಲ ನಡೆಯುವ ಅದ್ಧೂರಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಬಿಎಂಪಿಯ ಮಾಜಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಪಕ್ಷದ ಮುಖಂಡರು, ದಸರಾ ಮಹೋತ್ಸವ ಸಮಿತಿ ಸದಸ್ಯರು, ವಿವಿಧ ದೇವಸ್ಥಾನ ಟ್ರಸ್ಟ್‌ಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.