ಕರ್ನಾಟಕ ಕಾಂಗ್ರೆಸ್‌ ವಿರುದ್ಧ ಮತ್ತೆ ಮೋದಿ ಕಿಡಿ

| Published : Nov 14 2023, 01:16 AM IST

ಸಾರಾಂಶ

ಬರ್ವಾನಿ: ಚುನಾವಣಾ ಪ್ರಚಾರದ ವೇಳೆ ಸೂರ್ಯ, ಚಂದ್ರರನ್ನು ಭೂಮಿಗೆ ಕರೆತರುವ ಭರ್ಜರಿ ಭರವಸೆ ನೀಡುವ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಬಳಿಕ ಯಾವುದನ್ನೂ ಈಡೇರಿಸದೇ ಜನರಿಗೆ ವಂಚಿಸಿದೆ. ಈ ಹಿಂದೆ ಹಿಮಾಚಲಪ್ರದೇಶ ಮತ್ತು ಇತ್ತೀಚೆಗೆ ಕರ್ನಾಟಕದಲ್ಲೂ ಅದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಭಾರೀ ಭರವಸೆ ನೀಡಿ ಜನರಿಗೆ ಕೈಕೊಟ್ಟ ಕಾಂಗ್ರೆಸ್‌

ಸಂಪದ್ಭರಿತ ಕರ್ನಾಟಕದಲ್ಲಿ ಅಭಿವೃದ್ಧಿ ಈಗ ಸ್ಥಗಿತಬರ್ವಾನಿ: ಚುನಾವಣಾ ಪ್ರಚಾರದ ವೇಳೆ ಸೂರ್ಯ, ಚಂದ್ರರನ್ನು ಭೂಮಿಗೆ ಕರೆತರುವ ಭರ್ಜರಿ ಭರವಸೆ ನೀಡುವ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಬಳಿಕ ಯಾವುದನ್ನೂ ಈಡೇರಿಸದೇ ಜನರಿಗೆ ವಂಚಿಸಿದೆ. ಈ ಹಿಂದೆ ಹಿಮಾಚಲಪ್ರದೇಶ ಮತ್ತು ಇತ್ತೀಚೆಗೆ ಕರ್ನಾಟಕದಲ್ಲೂ ಅದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.ಸೋಮವಾರ ಮಧ್ಯಪ್ರದೇಶದ ಬರ್ವಾನಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ರೈತರು, ಮಹಿಳೆಯರು, ಯುವಕರಿಗೆ, ರಾಜ್ಯ ಸರ್ಕಾರಿ ನೌಕರರಿಗೆ ಸೂರ್ಯ, ಚಂದ್ರರನ್ನು ಭೂಮಿಗೆ ಕರೆತರುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು. ಆದರೆ ಚುನಾವಣೆಯಲ್ಲಿ ಗೆದ್ದ ಮೇಲೆ ಯಾವುದನ್ನೂ ಈಡೇರಿಸದೇ ಜನರನ್ನು ವಂಚಿಸಿತ್ತು.’‘ಇನ್ನು ಇತ್ತೀಚೆಗೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಇದೆ. ದಕ್ಷಿಣದ ಈ ರಾಜ್ಯದಲ್ಲಿ ಅಭಿವೃದ್ಧಿ ಇದೀಗ ಸಂಪೂರ್ಣ ಸ್ತಗಿತಗೊಂಡಿದೆ. ಅತ್ಯಂತ ಸಂಪದ್ಭರಿತ ರಾಜ್ಯವಾದ ಕರ್ನಾಟಕದಲ್ಲೇ ಕಾಂಗ್ರೆಸ್‌ ಹೀಗೆ ಮಾಡುತ್ತದೆ ಎಂದಾದಲ್ಲಿ, ಅವರು ಮಧ್ಯಪ್ರದೇಶದಲ್ಲಿ ಇನ್ನೇನು ಮಾಡಬಲ್ಲರು ಊಹಿಸಿ’ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು.