ಸಾರಾಂಶ
ದಾಮೋಹ್ (ಮ.ಪ್ರ.): ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷಕ್ಕೆ ರಿಮೋಟ್ ಕಂಟ್ರೋಲ್ ಅಧ್ಯಕ್ಷ. ರಿಮೋಟ್ ಕಂಟ್ರೋಲ್ ಸರಿಯಾಗಿದ್ದಾಗ ಸನಾತನ ಧರ್ಮವನ್ನು ವಿರೋಧಿಸುತ್ತಾರೆ. ಕೆಲಸ ಮಾಡದೇ ಇದ್ದಾಗ ನಮ್ಮನ್ನು ಪಾಂಡವರಿಗೆ ಹೋಲಿಸಿ ಸನಾತನ ಧರ್ಮವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಮೋದಿ, ಚೌಹಾಣ್, ಸಿಬಿಐ, ಇಡಿ ಹಾಗೂ ಐಟಿ ಒಟ್ಟಾಗಿ ಪಾಂಡವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮೋದಿ, ‘ನಮ್ಮನ್ನು ಪಾಂಡವರು ಎಂದು ನನ್ನ ಆತ್ಮೀಯ ಗೆಳೆಯ ಕರೆದಿದ್ದಕ್ಕೆ ನನಗೆ ಹೆಮ್ಮೆಯಿದೆ. ಆದರೆ ನಮ್ಮ ಮಾಜಿ ಪ್ರಧಾನಿ (ಮನಮೋಹನ ಸಿಂಗ್) ರೀತಿಯಲ್ಲಿ ಅತ್ಯಂತ ಹಿರಿಯ ನಾಯಕರಾದ ಖರ್ಗೆಯವರೂ ಅಸಹಾಯಕ ಸ್ಥಿತಿಗೆ ತಲುಪಿರುವುದು ನೋಡಿ ಖೇದವುಂಟಾಗಿದೆ’ ಎಂದು ಹೇಳಿದರು.ಇದಕ್ಕೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಟ್ವೀಟ್ ಮಾಡಿ, ಪ್ರಧಾನಿಯವರು ದಲಿತ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.