ಸಾರಾಂಶ
ಬಿಜೆಪಿ ಸಂಸದರು, ಪ್ರಧಾನಿ ಮೋದಿ ಸಭಾಂಗಣವನ್ನು ಪ್ರವೇಶಿಸಿದಾಗ ಅವರ ಪರ ಘೋಷಣೆಗಳನ್ನು ಕೂಗಿದರು.
ಮೋದಿಯ ಗುಣಗಾನ ಮಾಡಿದ ಬಿಜೆಪಿ ಸಂಸದರುನವದೆಹಲಿ: ಭಾನುವಾರವಷ್ಟೇ ಪ್ರಕಟವಾದ ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಮೂರು ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದೇ ಹುರುಪಿನಲ್ಲಿ ಹೊಸ ಸಂಸತ್ ಭವನದಲ್ಲಿ ಸೋಮವಾರದಿಂದ ಆರಂಭವಾದ ಚಳಿಗಾಲದ ಅಧಿವೇಶನಕ್ಕೆ ಬಂದ ಬಿಜೆಪಿ ಸಂಸದರು, ಪ್ರಧಾನಿ ಮೋದಿ ಸಭಾಂಗಣವನ್ನು ಪ್ರವೇಶಿಸಿದಾಗ ಅವರ ಪರ ಘೋಷಣೆಗಳನ್ನು ಕೂಗಿದರು. ‘ಮೂರನೇ ಬಾರಿ ಮೋದಿ ಸರ್ಕಾರ ಬರಲಿದೆ’, ‘ಪ್ರತಿಬಾರಿ ಮೋದಿ ಸರ್ಕಾರ ಅಧಿಕಾರ ಹಿಡಿಯಲಿದೆ’, ‘ಮೋದಿ ಸರ್ಕಾರ ಹ್ಯಾಟ್ರಿಕ್ ಸಾಧಿಸಲಿದೆ’ ಎಂದು ಮುಂತಾದ ಘೋಷಣೆಗಳನ್ನು ಕೂಗಿ ಮೋದಿಯನ್ನು ಬರಮಾಡಿಕೊಂಡರು.