ಜೂ.4ರ ಬಳಿಕ ಮೋದಿ ಪ್ರಧಾನಿಆಗಿರಲ್ಲ, ಇದು ಗ್ಯಾರಂಟಿ: ರಾಹುಲ್‌

| Published : May 29 2024, 12:48 AM IST

ಜೂ.4ರ ಬಳಿಕ ಮೋದಿ ಪ್ರಧಾನಿಆಗಿರಲ್ಲ, ಇದು ಗ್ಯಾರಂಟಿ: ರಾಹುಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜೂ.4 ನಂತರ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ, ಇದು ಗ್ಯಾರಂಟಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭವಿಷ್ಯ ನುಡಿದ್ದಾರೆ.

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಜೂ.4 ನಂತರ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ, ಇದು ಗ್ಯಾರಂಟಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭವಿಷ್ಯ ನುಡಿದ್ದಾರೆ. ಪ್ರಧಾನಿ ಮೋದಿ ಅವರ ಕ್ಷೇತ್ರವಾದ ವಾರಾಣಸಿಯಲ್ಲಿ ಮಂಗಳವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ವಾರಾಣಸಿಯಿಂದ ಸ್ಫರ್ಧೆ ಮಾಡುತ್ತಿರುವ ಪ್ರಧಾನಿ ಮೋದಿ ಗೆಲ್ಲುವುದೇ ಇಲ್ಲ. ನಮ್ಮ ಅಭ್ಯರ್ಥಿ ಅಜಯ್‌ ರೈ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಆದ್ದರಿಂದ ಜೂ. 4ರ ನಂತರ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ ಎಂದು ನುಡಿದರು. ವಾರಾಣಸಿ ಕ್ಷೇತ್ರದಲ್ಲಿ ಕೊನೆಯ ಹಂತದಲ್ಲಿ ಜೂ.1 ರಂದು ಚುನಾವಣೆ ನಡೆಯಲಿದೆ.

ಬಿಸಿಲು: ವೇದಿಕೆಯಲ್ಲೇ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್!ರುದ್ರಪುರ: ದೇಶದಲ್ಲಿ ಲೋಕಸಭಾ ಚುನಾವಣೆ ಕಾವೇರಿರುವ ಹೊತ್ತಲ್ಲಿಯೇ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ರುದ್ರಪುರದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಸಿಲಿನ ಝಳ ತಡೆಯಲಾಗದೇ ಸಾವರ್ಜನಿಕರ ಮುಂದೆಯೇ ತಲೆಯ ಮೇಲೆ ನೀರು ಸುರಿದುಕೊಂಡಿರುವ ಘಟನೆ ನಡೆದಿದೆ. ವೇದಿಕೆ ಮುಂಭಾಗದಲ್ಲಿ ನಿಂತು ಮಾತನಾಡುತ್ತಿದ್ದ ರಾಹುಲ್‌ ಗಾಂಧಿ, ಬಾಟಲಿಯಿಂದ ನೀರು ಕುಡಿದಿದ್ದಾರೆ. ತಾಪಮಾನದಿಂದ ಕೊಂಚ ಸುಧಾರಿಸಿಕೊಳ್ಳಲು ಪ್ರಯತ್ನಿಸಿದರು. ಆ ಬಳಿಕ ‘ಗರ್ಮಿ ಹೈ ಕಾಫಿ’( ಸಾಕಷ್ಟು ಬಿಸಿಯಾಗಿದೆ) ಎನ್ನುತ್ತಲೇ ಅದೇ ಬಾಟಲಿ ನೀರನ್ನು ತಲೆಮೇಲೆ ಸುರಿದುಕೊಂಡಿದ್ದಾರೆ.