ಮಂಡ್ಯಕ್ಕೆ ಹೊಸ ಗಂಡು ರೆಡಿ: ಡಿಸಿಎಂ ಡಿ.ಕೆ.ಶಿವಕುಮಾರ್‌

| Published : Mar 11 2024, 01:19 AM IST / Updated: Mar 11 2024, 07:07 AM IST

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಷಣ ಮಾಡುವಾಗ, ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ. ಯಾರು ಅಂತಾ ನಿಮಗೆಲ್ಲ ಗೊತ್ತಲ್ವಾ..? ಸ್ಟಾರ್ ಚಂದ್ರು ಅವರು ಪರಿಚಯಿಸಿದರು. ಡಿಕೆಶಿ ಪರಿಚಯಿಸುತ್ತಿದ್ದಂತೆ ಎದ್ದು ನಿಂತು ಕೈ ಮುಗಿದು ನಮಸ್ಕರಿಸಿದ ಸ್ಟಾರ್ ಚಂದ್ರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭೆ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಆಯ್ಕೆ ಆಗುತ್ತಿದ್ದಂತೆ ಕಾಂಗ್ರೆಸ್‌ ಸರ್ಕಾರ ಅವರಿಗೆ ಹೊಸದೊಂದು ಜವಾಬ್ದಾರಿಯನ್ನು ಕೊಟ್ಟಿದೆ. 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾಗಿ ಸ್ಟಾರ್ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ. ಸಚಿವ ಎನ್‌.ಚಲುವರಾಯಸ್ವಾಮಿ ಅವರು ಭಾಷಣದ ಆರಂಭದಲ್ಲೇ ಸ್ಟಾರ್‌ ಚಂದ್ರು ಹುದ್ದೆಯನ್ನು ಪ್ರಸ್ತಾಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಿಇಟಿ ಹೆಲಿಪ್ಯಾಡ್‌ಗೆ ಬಂದ ವೇಳೆ ಅವರನ್ನು ಸ್ವಾಗತಿಸಲು ಬಂದಿದ್ದ ಸ್ಟಾರ್‌ ಚಂದ್ರು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. 

ಸಿಎಂ, ಡಿಸಿಎಂಗೆ ಪುಷ್ಪಮಾಲೆ ಹಾಕಿ ಅಭಿನಂದಿಸಿದರು. ಮುಖ್ಯಮಂತ್ರಿ ಭಾಷಣ ಸಮಯದಲ್ಲೂ ಅವರ ಪಕ್ಕದಲ್ಲಿ ಕೆಲಸಮಯ ಸ್ಟಾರ್‌ ಚಂದ್ರು ನಿಂತಿದ್ದರು.

ಇನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಷಣ ಮಾಡುವಾಗ, ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ. ಯಾರು ಅಂತಾ ನಿಮಗೆಲ್ಲ ಗೊತ್ತಲ್ವಾ..? ಸ್ಟಾರ್ ಚಂದ್ರು ಅವರು ಪರಿಚಯಿಸಿದರು. ಡಿಕೆಶಿ ಪರಿಚಯಿಸುತ್ತಿದ್ದಂತೆ ಎದ್ದು ನಿಂತು ಕೈ ಮುಗಿದು ನಮಸ್ಕರಿಸಿದ ಸ್ಟಾರ್ ಚಂದ್ರು.

ನರೇಂದ್ರಸ್ವಾಮಿ ಬೆಂಬಲಿಗರಿಂದ ಮಂತ್ರಿಗಿರಿ ಬೇಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಷಣಕ್ಕೆ ಎದ್ದು ನಿಂತ ಸಮಯದಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಮಂತ್ರಿಗಿರಿ ನೀಡುವಂತೆ ಬೆಂಬಲಿಗರು ಬೇಡಿಕೆ ಇಟ್ಟ ಘಟನೆ ನಡೆಯಿತು.

ವೇದಿಕೆ ಮುಂಭಾಗದಲ್ಲೇ ಪೋಸ್ಟರ್‌ ಹಿಡಿದು ಸಾಲಾಗಿ ಕುಳಿತಿದ್ದ ಬೆಂಬಲಿಗರು ಸಿಎಂ ಭಾಷಣ ಮಾಡುವುದಕ್ಕೆ ಮೈಕ್ ಬಳಿ ಬರುತ್ತಿದ್ದಂತೆ ಪೋಸ್ಟರ್‌ ಹಿಡಿದು ನರೇಂದ್ರಸ್ವಾಮಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಘೋಷಣೆ ಕೂಗಿದರು. 

ಸಿದ್ದರಾಮಯ್ಯನವರು ಇದನ್ನು ನೋಡಿ. ಆಯ್ತಾಯ್ತು.. ನರೇಂದ್ರಸ್ವಾಮಿ ಫೋಟೋ ನೋಡಿದ್ದೇನೆ. ಕುಳಿತುಕೊಳ್ಳಿ ಎಂದು ಹೇಳಿ ಮಾತು ಮುಂದುವರೆಸಿದರು.