ಸಹಕಾರ ಸಂಘದಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ - ರೈತರ ಏಳಿಗೆಗೆ ಶ್ರಮಿಸಿ : ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ

| N/A | Published : Feb 02 2025, 11:45 PM IST / Updated: Feb 03 2025, 07:51 AM IST

ಸಹಕಾರ ಸಂಘದಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ - ರೈತರ ಏಳಿಗೆಗೆ ಶ್ರಮಿಸಿ : ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಆರ್ಥಿಕಾಭಿವೃದ್ದಿಗೆಂದಿರುವ ಏಕೈಕ ಸಂಸ್ಥೆ ವ್ಯವಸಾಯ ಸೇವಾ ಸಹಕಾರ ಸಂಘ ಇಂತಹ ಸಂಘಗಳಲ್ಲಿ ಯಾರೂ ಸಹ ರಾಜಕೀಯ ಹಸ್ತಕ್ಷೇಪ ಮಾಡದೆ ರೈತರ ಏಳಿಗೆಗೆ ಶ್ರಮಿಸಬೇಕೆಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.

  ಬಂಗಾರಪೇಟೆ : ರೈತರ ಆರ್ಥಿಕಾಭಿವೃದ್ದಿಗೆಂದಿರುವ ಏಕೈಕ ಸಂಸ್ಥೆ ವ್ಯವಸಾಯ ಸೇವಾ ಸಹಕಾರ ಸಂಘ ಇಂತಹ ಸಂಘಗಳಲ್ಲಿ ಯಾರೂ ಸಹ ರಾಜಕೀಯ ಹಸ್ತಕ್ಷೇಪ ಮಾಡದೆ ರೈತರ ಏಳಿಗೆಗೆ ಶ್ರಮಿಸಬೇಕೆಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.

ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿರುವ ಹುಣಸನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಾದೇಶಗೌಡ ಹಾಗೂ ಉಪಾಧ್ಯಕ್ಷರಾಗಿ ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದು ಅವರನ್ನು ಅಭಿನಂಧಿಸಿ ಮಾತನಾಡಿದರು.

ಪಕ್ಷಾತೀತ ಸಾಲ ಸೌಲಭ್ಯ

ನಿರ್ದೇಶಕರ ಚುನಾವಣೆಯಲ್ಲಿ ಎಲ್ಲ ಸ್ಥಾನಗಳೂ ನಮ್ಮ ಬೆಂಬಲಿಗರೇ ಆಯ್ಕೆಯಾಗಿದ್ದು ಸಂಘದ ವ್ಯಾಪ್ತಿಯ ಎಲ್ಲಾ ರೈತರಿಗೆ ಪಕ್ಷಾತೀತವಾಗಿ ಸಾಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದರಿಂದಲೇ ಸತತವಾಗಿ ಹಲವು ದಶಕಗಳಿಂದ ಸಂಘ ಬಿಜೆಪಿ ಬೆಂಬಲಿತರ ವಶದಲ್ಲೆ ಇದೆ ಎಂದರು. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತೋರಿಸಿ ಮತ ಪಡೆದು ಅಧಿಕಾರಕ್ಕೆ ಬಂದು ಈಗ ಗ್ಯಾರಂಟಿಗಳನ್ನು ಮುಂದುವರೆಸಲು ಅನುದಾನದ ಕೊರತೆ ಎದುರಿಸುವಂತ ಸ್ಥತಿಗೆ ಬಂದಿದೆ, ರೈತರಿಗೆ, ಮಹಿಳೆಯರಿಗೆ ಡಿಸಿಸಿ ಬ್ಯಾಂಕಿನಂದ ದೊರೆಯುತ್ತಿದ್ದ ಬಡ್ಡಿರಹಿತ ಸಾಲ ಸಹ ಈಗ ದೊರೆಯದೆ ರೈತರು ಮೈಕ್ರೋ ಫೈನಾನ್ಸ್ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ ಎಂದರು.

ಬಿಜೆಪಿ-ಜೆಡಿಎಸ್‌ಗೆ ವರ

ಇದರ ಪರಿಣಾಮ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ತಿರಸ್ಕರಿಸಿ ಮೈತ್ರಿ ಪಕ್ಷಗಳನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ, ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಅದು ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ವರವಾಗಲಿದೆ ಎಂದರು.ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್,ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಮುಖಂಡರಾದ ಹೆಚ್.ಆರ್.ಶ್ರೀನಿವಾಸ್, ನಾರಾಯಣಸ್ವಾಮಿ ಇದ್ದರು.