ನಾನು ಮಾಡಿದ ಕೆಲಸವನ್ನು ದೊಡ್ಡದಾಗಿ ಹೇಳಿಕೊಳ್ಳಲ್ಲ. ಕೆಲಸ ಮಾಡದಿರುವುದನ್ನು ಮಾಡಿದ್ದೇನೆ ಅಂತ ಹೇಳಿಲ್ಲ. ಈ ಚಲುವರಾಯಸ್ವಾಮಿಯನ್ನು ಸುಲಭವಾಗಿ ಗೆಲ್ಲಿಸಬೇಡಿ. ನನ್ನ ಕೆಲಸ ನೋಡಿ ಮತ ಹಾಕಬೇಕು. ಏನು ಮಾತನಾಡಕ್ಕೆ ಬರದವನು ನನ್ನ ಸರಿ ಸಟಿ ನಿಲ್ತಾರೆ.

ಮದ್ದೂರು:

ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ನಿರೀಕ್ಷೂ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ, ಇಷ್ಟೊಂದು ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಗೆಲ್ಲೋದಕ್ಕೆ ಸಾಕಷ್ಟು ಹೋರಾಟ ಮಾಡಬೇಕಾಗಿರುವುದು ದುರಂತ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮಾಡಿದ ಕೆಲಸವನ್ನು ದೊಡ್ಡದಾಗಿ ಹೇಳಿಕೊಳ್ಳಲ್ಲ. ಕೆಲಸ ಮಾಡದಿರುವುದನ್ನು ಮಾಡಿದ್ದೇನೆ ಅಂತ ಹೇಳಿಲ್ಲ. ಈ ಚಲುವರಾಯಸ್ವಾಮಿಯನ್ನು ಸುಲಭವಾಗಿ ಗೆಲ್ಲಿಸಬೇಡಿ. ನನ್ನ ಕೆಲಸ ನೋಡಿ ಮತ ಹಾಕಬೇಕು. ಏನು ಮಾತನಾಡಕ್ಕೆ ಬರದವನು ನನ್ನ ಸರಿ ಸಟಿ ನಿಲ್ತಾರೆ ಎಂದು ಪರೋಕ್ಷವಾಗಿ ಸುರೇಶ್ ಗೌಡರ ವಿರುದ್ಧ ಕಿಡಿಕಾರಿದರು.

ಬೆಳಗ್ಗೆ ಇಲ್ಲಿಗೆ ಬಂದವನು ಸೋಂಟ, ಬೆನ್ನು ಬಿದ್ದೋಗಿದೆ. ಅಷ್ಟು ಕೆಲಸ ಮಾಡಿ ಬಂದು ಇಲ್ಲಿ ನಿಂತಿದ್ದಿನಿ. ನೀವು ಮನೆಗೆ ಹೋಗಿ ಮಲ್ಕೋತ್ತಿರಾ. ನನಗೆ ಇನ್ನು ಕೆಲ್ಸಾ ಇದೆ. ನಾನು ದಿನ ಬಂದು ಭಾಷಣ ಮಾಡ್ತಿನಾ? ನನ್ನ ನೋವು ಯಾರತ್ರ ಹೇಳಿಕೊಳ್ಳಲಿ ಎಂದರು.

ನೀವು ನನ್ನ ಕಷ್ಟ ಕೇಳೋರು. ಜೊತೆ ನಿಲ್ಲೋರು. ನಿಮ್ಮ ಅಕ್ಕಪಕ್ಕದ ಜನರ ಒಂದೊಂದು ವೋಟ್ ವಿಶ್ವಾಸಕ್ಕೆ ತೆಗೆದುಕೊಂಡರೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನಾನು ಯಾಕೆ ಇಲ್ಲಿಗೆ ಬರಬೇಕು, ಭಾಷಣ ಮಾಡಬೇಕು.? ನೀವೇ ರಾಜ್ಯ ಸುತ್ತಿ ಕೆಲಸ ಮಾಡಿ ಅಣ್ಣ ಅಂತ ಹೇಳಿದರೆ ಸಚಿನಾಗಿ ಹಾಸನಕ್ಕೊ, ತುಮಕೂರಿಗೋ ಹೋಗಿ ಕೆಲಸ ಮಾಡುವೆ. ನಾನು ಮದುವೆಗೆ ಬಂದಿಲ್ಲ, ಹಬ್ಬಕ್ಕೆ ಬಂದಿಲ್ಲ ಅನ್ನೋದನ್ನು ಕಾರ್ಯಕರ್ತರು, ಮುಖಂಡರು ಬಿಡಬೇಕು ಎಂದು ಮನವಿ ಮಾಡಿದರು.

ಸಿಎಂ ಡಿ.ಕೆ.ಶಿವಕುಮಾರ್, ನಮ್ಮನ್ನು ಬೈಯೋದಕ್ಕೆ ಅಂತ ಒಂದು ರಾಜಕೀಯ ಪಕ್ಷ, ಮಾಜಿ ಸಿಎಂ ಎಚ್ಡಿಕೆ ಸೇರಿದಂತೆ ದೊಡ್ಡ ನಾಯಕತ್ವ ಇದೆ. ಕುಮಾರಸ್ವಾಮಿ ಮಂಡ್ಯಕ್ಕೆ ಬಂದಾಗ ಏನೋ ಹೇಳ್ಬಿಟ್ಟು ಹೊರಟು ಹೋಗ್ತಾರೆ. ಅದನ್ನೇ ಹಿಡಿದುಕೊಂಡು ಕಾರ್ಯಕರ್ತರು ಮಾತನಾಡುತ್ತಾರೆ. ಬಿಜೆಪಿ-ಜೆಡಿಎಸ್‌ನ ಯಾವುದಾದರೂ ಒಂದು ಕೆಲಸ ನಿಲ್ಲಿಸಿದ್ದೀವಾ ಎಂದು ಪ್ರಶ್ನೆ ಮಾಡಿದರು.