ದೇಶದಲ್ಲಿ ಕಾಂಗ್ರೆಸ್‌ಗೆ 40-50 ಸ್ಥಾನ ಮಾತ್ರ: ಶಾಸಕ ಜಿ.ಟಿ.ದೇವೇಗೌಡ

| Published : Apr 17 2024, 01:15 AM IST

ದೇಶದಲ್ಲಿ ಕಾಂಗ್ರೆಸ್‌ಗೆ 40-50 ಸ್ಥಾನ ಮಾತ್ರ: ಶಾಸಕ ಜಿ.ಟಿ.ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನವರು ಇಡೀ ದೇಶದಲ್ಲಿ‌ ಗೆಲ್ಲೋದು 50-40 ಅಷ್ಟೇ. ಇವರು ಗ್ಯಾರಂಟಿ ಘೋಷಣೆ ಮಾಡಿರೋದು ಬರಿ ಬೋಗಸ್. ರಾಹುಲ್ ಗಾಂಧಿ‌ ಪ್ರಧಾನಿ ಮಂತ್ರಿ ಆಗೋಲ್ಲ. ದೇಶದಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ಜನರು ಯಾವ ಗ್ಯಾರಂಟಿಯನ್ನೂ ನಂಬದೆ ಕುಮಾರಸ್ವಾಮಿಗೆ ಮತ ಹಾಕಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್‌ ಗೆಲ್ಲುವುದು ಕೇವಲ 40 ರಿಂದ 50 ಸ್ಥಾನ ಮಾತ್ರ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಇಡೀ ದೇಶದಲ್ಲಿ‌ ಗೆಲ್ಲೋದು 50-40 ಅಷ್ಟೇ. ಇವರು ಗ್ಯಾರಂಟಿ ಘೋಷಣೆ ಮಾಡಿರೋದು ಬರಿ ಬೋಗಸ್. ರಾಹುಲ್ ಗಾಂಧಿ‌ ಪ್ರಧಾನಿ ಮಂತ್ರಿ ಆಗೋಲ್ಲ. ದೇಶದಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ಜನರು ಯಾವ ಗ್ಯಾರಂಟಿಯನ್ನೂ ನಂಬದೆ ಕುಮಾರಸ್ವಾಮಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಕುಟುಂಬಗಳಿಗೆ ಬೆನ್ನಾಗಿ ನಿಂತಿದ್ದು ಕುಮಾರಸ್ವಾಮಿ. ಆದರೂ ಕಾಂಗ್ರೆಸ್‌ನವರು ಕುಮಾರಸ್ವಾಮಿ ಕೊಡುಗೆ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಮಂಡ್ಯ ಜನರ ಹೃದಯದಲ್ಲಿ ಇದ್ದಾರೆ. ಇದನ್ನು ನೋಡಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಹತಾಶರಾಗಿದ್ದಾರೆ. ಕುಮಾರಸ್ವಾಮಿ ನೇರವಾಗಿ ಮೋದಿ‌ ಜೊತೆ ಮಾತನಾಡುವುದನ್ನು ಕಂಡು ಅವರು ಭಯಗೊಂಡಿದ್ದಾರೆ ಎಂದರು

ಮಾಜಿ ಸಚಿವ ಸಿಎಸ್ ಪುಟ್ಟರಾಜು ಮಾತನಾಡಿ, ನರೇಂದ್ರ ಸ್ವಾಮಿ ಅವರು ಯಡಿಯೂರಪ್ಪನವರಿಗೆ ಬುದ್ದಿ ಹೇಳುವ ಮಟ್ಟಿಗೆ ಬೆಳೆದಿದ್ದಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದವರು ಯಾರೆಂದು ಹೇಳಿ ನರೇಂದ್ರ ಸ್ವಾಮಿ. ಅಂತಹ ಮಹಾಪುರುಷನಿಗೆ ಭಾರತರತ್ನ ಕೊಟ್ಟದ್ದು ಬಿಜೆಪಿ ಬೆಂಬಲಿತ ಎನ್‌ಡಿಎ ಸರ್ಕಾರ. ಇಂದಿರಾಗಾಂಧಿ ಸರ್ಕಾರ ಸಂವಿಧಾನ ತಿದ್ದಿ ಅವಮಾನ ಮಾಡಿದ್ದಾರೆ. ಲಾಟರಿ, ಸಾರಾಯಿ ನಿಷೇಧಿಸಿದ್ದು ಕುಮಾರಸ್ವಾಮಿಯವರು. ಮಹಿಳೆಯರಿಗೆ ಮೀಸಲಾತಿ ಕೊಟ್ಟದ್ದು ದೇವೇಗೌಡರು. ಇಂತಹ ದೇವೇಗೌಡರ ಕುಟುಂಬದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಹೆಣ್ಣುಮಕ್ಕಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು, ಇವರ ಯಾವುದೇ ಮಾತಿಗೆ ಬೆಲೆ ಕೊಡಬೇಡಿ ಎಂದರು.