ಬ್ರಾಹ್ಮಣ ಸಮುದಾಯಕ್ಕೆ ಶೇ. 10 ಮೀಸಲು ಜಾರಿಗೊಳಿಸಲಿ : ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್

| Published : Jul 29 2024, 12:45 AM IST / Updated: Jul 29 2024, 04:18 AM IST

ಸಾರಾಂಶ

ಹುಟ್ಟಿನಿಂದ ಯಾರೂ ಬ್ರಾಹ್ಮಣ ರಾಗಲು ಸಾಧ್ಯವಿಲ್ಲಾ ಎಂದು ಶಂಕರಾಚಾರ್ಯರು ಅಂದಿನ ಕಾಲದಲ್ಲಿ 32 ದಿನಗಳ ಕಾಲ ವಾದ ಮತ್ತು ಚರ್ಚೆ ನಡೆಸಿ ಅದ್ವೈತ ಸಿದ್ಧಾತದಲ್ಲಿ ಪ್ರತಿಪಾದಿಸಿ ಜಗತ್ತಿನ ಎಲ್ಲರೂ ಭಗವಂತನಲ್ಲಿ ಒಂದು ಅಂಶ ಎಂದು ಸಾರಿದ್ದರು.

 ಚಿಕ್ಕಬಳ್ಳಾಪುರ : ಭಾರತದಲ್ಲಿ ರಾಜ ಮಹಾರಾಜರು ಬ್ರಾಹ್ಮಣ ಸಮುದಾಯಕ್ಕೆ ಶ್ರೇಷ್ಠ ಸ್ಥಾನಮಾನ ನೀಡಿ ಗೌರವಿಸುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಎಲ್ಲಾ ಸರ್ಕಾರಗಳು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವನ್ನು ಕಡೆ ಗಣಿಸಿವೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸರ್ವರಿಗೂ ಸಮಪಾಲು -ಸಮಬಾಳು ಎಂಬ ತತ್ವದಡಿ 2-3 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಶೇ 10 ರಷ್ಟು ಮೀಸಲಾತಿ ನೀಡಿದ ಮೋದಲ ಪ್ರಧಾನಿಯಾಗಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬ್ರಾಹ್ಮಣರ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಬ್ರಾಹ್ಮಣ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಶೇ 10 ರಷ್ಟು ಮೀಸಲಾತಿಯನ್ನು ಸಾಕಷ್ಟು ರಾಜ್ಯಗಳು ಇನ್ನೂ ಅನುಷ್ಠಾನ ಮಾಡಿಲ್ಲ ಎಂದರು.

ಪುರೋಹಿತ ವೃತ್ತಿ ಶೇಷ್ಠ

ದಿನ ನಿತ್ಯ ದೇವರ ಪೂಜೆ ಮತ್ತು ಸೇವೆ ಮಾಡುವವರಿಗೆ ಕೆಟ್ಟ ಆಲೋಚನೆಗಳು ಬರುವುದಿಲ್ಲಾ. ಪುರೋಹಿತ ವೃತ್ತಿ ಬಹಳ ಶ್ರೇಷ್ಠ ವೃತ್ತಿ ಎನ್ನುತ್ತಾರೆ . ಆದರೆ ಪುರೋಹಿತರು ತಮ್ಮ ಮಕ್ಕಳು ಪುರೋಹಿತರಾಗುವುದು ಇಷ್ಟವಿಲ್ಲಾ ಎನ್ನುತ್ತಿದ್ದಾರೆ, ಎಕೆಂದರೆ ಪುರೋಹಿತರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲಾ ಎಂದು ತಮಗೆ ಸಾಕಷ್ಟು ಪುರೋಹಿತರು ತಿಳಿಸಿದ್ದಾರೆಂದರು. ಹೋರಾಟ ಆರಂಭಿಸಿದ್ದು ಬ್ರಾಹ್ಮಣರು

ಅಜ್ಞಾನದಲ್ಲಿದ್ದು, ಪರಕೀಯರ ಆಡಳಿತದಲ್ಲಿ ವಿದ್ಯೆ ಇಲ್ಲದೆ ಬಡತನದ ಬೇಗೆಯಲ್ಲಿ ಕಮರಿ ಹೋಗಿದ್ದ ಭಾರತೀಯರನ್ನು ಹುರಿದುಂಬಿಸಿ, ಸ್ವತಂತ್ರ್ಯ ಸಂಗ್ರಾಮದ ಕಹಳೆಯನ್ನು ಮೊಳಗಿಸಿ ದೇಶಭಕ್ತಿಯನ್ನು ಮೂಡಿಸಿದ ರಾಷ್ಟ್ರನಾಯಕರಲ್ಲಿ ಮೊದಲಿಗರು ಬ್ರಾಹ್ಮಣರು ಎಂಬುದು ಚಾರಿತ್ರಿಕ ಸತ್ಯ. ಬ್ರಿಟಿಷರ ಆಳ್ವಿಕೆಯಲ್ಲಿ, ಇಂಗ್ಲಿಷ್ ಭಾಷೆಯನ್ನು ಕಲಿತು ವಿಜ್ಞಾನ ತಂತ್ರಜ್ಞಾನಗಳಲ್ಲಿ ಪರಿಣಿತಿಯನ್ನು ಪಡೆದು, ಉನ್ನತ ಸ್ಥಾನಗಳನ್ನು ಅಲಂಕರಿಸಿದವರೂ ಬ್ರಾಹ್ಮಣರೇ, ಇಂತಹ ಪರ್ವ ಕಾಲದಲ್ಲಿ ಕೇವಲ ವೇದಾಧ್ಯಯನ ಯಜ್ಞ ಯಾಗಗಳಿಂದ ವೈದಿಕ ಪರಂಪರೆಯನ್ನು ಪಾಲಿಸುವುದರ ಜೊತೆಗೆ ಕೆಲ ಬ್ರಾಹ್ಮಣರು ಹಲವು ರೀತಿಯ ಕಸುಬುಗಳನ್ನು ಆರಿಸಿಕೊಂಡು, ಉತ್ತಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಿ, ಉತ್ತಮ ಸ್ಥಾನ ಪಡೆದಿದ್ದಾರೆ ಎಂದರು.. ಹುಟ್ಟಿನಿಂದ ಯಾರೂ ಬ್ರಾಹ್ಮಣ ರಾಗಲು ಸಾಧ್ಯವಿಲ್ಲಾ ಎಂದು ಶಂಕರಾಚಾರ್ಯರು ಅಂದಿನ ಕಾಲದಲ್ಲಿ 32 ದಿನಗಳ ಕಾಲ ವಾದ ಮತ್ತು ಚರ್ಚೆ ನಡೆಸಿ ಅದ್ವೈತ ಸಿದ್ಧಾತದಲ್ಲಿ ಪ್ರತಿಪಾದಿಸಿ ಜಗತ್ತಿನ ಎಲ್ಲರೂ ಭಗವಂತನಲ್ಲಿ ಒಂದು ಅಂಶ ಎಂದು ತಿಳಿಸಿದ್ದಾರೆ.

ಸಂಸದ ಸುಧಾಕರ್‌ಗೆ ಸನ್ಮಾನ

ಹಿರಿಯ ವಿಪ್ರ ಸಾಧಕರ ಹಾದಿಯಲ್ಲಿ ವಿಪ್ರ ಯುವಕರು ನಡೆದು ರಾಷ್ಟ್ರ ನಿರ್ಮಾಣಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು. ಈವೇಳೆ ಸಂಸದ ಡಾ.ಕೆ.ಸುಧಾಕರ್ ರವರನ್ನು ಜಿಲ್ಲಾ ಬ್ರಾಹ್ಮಣರ ಮಹಾಸಭಾದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ಮಹಾ ಸಭಾದ ಜಯಸಿಂಹ,ಸಾಧನಾಕೋಟೆ,ಅಟ್ಟೂರು ವೆಂಕಟೇಶಯ್ಯ, ಮಂಜುನಾಥಸ್ವಾಮಿ, ವಾಸುದೇವರಾವ್, ನಾಗಭೂಷಣ್ , ಪ್ರಕಾಶ್, ರಾಮಸ್ವಾಮಿ, ರಮೇಶ್ ಮತ್ತಿತರರು ಇದ್ದರು.