ಇಸ್ರೇಲ್‌-ಹಮಾಸ್‌ ಸಂಘರ್ಷ ತಗ್ಗಿಸಬೇಕು: ಮೋದಿ, ಇರಾನ್‌ ಅಧ್ಯಕ್ಷ ರೈಸಿ ಅಭಿಮತ

| Published : Nov 07 2023, 01:31 AM IST

ಇಸ್ರೇಲ್‌-ಹಮಾಸ್‌ ಸಂಘರ್ಷ ತಗ್ಗಿಸಬೇಕು: ಮೋದಿ, ಇರಾನ್‌ ಅಧ್ಯಕ್ಷ ರೈಸಿ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್‌ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕಡಿಮೆ ಮಾಡಬೇಕು ಮತ್ತು ಇಲ್ಲಿ ಮಾನವೀಯತೆಯ ಸಹಾಯವನ್ನು ಹೆಚ್ಚಳ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್‌ ಅಧ್ಯಕ್ಷ ಸೈಯದ್‌ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಇಸ್ರೇಲ್‌ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕಡಿಮೆ ಮಾಡಬೇಕು ಮತ್ತು ಇಲ್ಲಿ ಮಾನವೀಯತೆಯ ಸಹಾಯವನ್ನು ಹೆಚ್ಚಳ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್‌ ಅಧ್ಯಕ್ಷ ಸೈಯದ್‌ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌- ಹಮಾಸ್‌ ಸಂಘರ್ಷದ ಕುರಿತಾಗಿ ದೂರವಾಣಿಯಲ್ಲಿ ಚರ್ಚೆ ನಡೆಸಿರುವ ಇಬ್ಬರು ನಾಯಕರು, ಇಲ್ಲಾಗುತ್ತಿರುವ ಉಗ್ರ ದಾಳಿ ಹಾಗೂ ನಾಗರಿಕರ ಸಾವಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಇಸ್ರೇಲ್ ಜೊತೆಗೆ ಹೊಂದಿರುವ ಧೀರ್ಘಕಾಲೀನ ಸಂಬಂಧವನ್ನು ಅದೇ ರೀತಿ ಮುಂದುವರೆಸಲಿದೆ ಎಂದು ಮೋದಿ ಹೇಳಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ. ಇದೇ ವೇಳೆ ಚಬಾಹಾರ್‌ ಬಂದರು ಯೋಜನೆಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.