ಮೊದಲ ದಿನ 3,710 ಮಂದಿ ಹಿರಿಯರಿಂದ ಅಂಚೆ ಮತ

| Published : Apr 14 2024, 01:47 AM IST / Updated: Apr 14 2024, 05:27 AM IST

ಸಾರಾಂಶ

ನಗರದ ಮೂರು ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಒಟ್ಟು 3,710 ಮಂದಿ ಹಿರಿಯ ನಾಗರಿಕರು ಹಾಗೂ ಅಂಗವಿಕರು ಮನೆಯಿಂದ ಅಂಚೆ ಮತದಾನ ಮಾಡಿದ್ದಾರೆ.

 ಬೆಂಗಳೂರು : ನಗರದ ಮೂರು ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಒಟ್ಟು 3,710 ಮಂದಿ ಹಿರಿಯ ನಾಗರಿಕರು ಹಾಗೂ ಅಂಗವಿಕರು ಮನೆಯಿಂದ ಅಂಚೆ ಮತದಾನ ಮಾಡಿದ್ದಾರೆ.

ಮತದಾರರ ಪಟ್ಟಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಏ.13ರಿಂದ 18ರವರೆಗೆ ಮನೆಯಿಂದ ಅಂಚೆ ಮತದಾನಕ್ಕೆ ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಲಿದೆ.

ಅಂಚೆ ಮತದಾನದ ಮೊದಲ ದಿನವಾದ ಶನಿವಾರ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡ ಮನೆ ಮನೆ ಭೇಟಿ ನೀಡಿ ನೋಂದಣಿ ಮಾಡಿಕೊಂಡ 8407 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಪೈಕಿ 3,710 ಮಂದಿಯಿಂದ ಅಂಚೆ ಮತದಾನ ಮಾಡಿಸಿದ್ದಾರೆ. ಮೊದಲ ದಿನವೇ ಶೇ.57.91 ರಷ್ಟು ಮತದಾನವಾಗಿದೆ.

18 ಮಂದಿ ಸಾವು

ನೋಂದಣಿ ಮಾಡಿಕೊಂಡವರ ಪೈಕಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 13 ಮಂದಿ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 5 ಮಂದಿ ಸೇರಿದಂತೆ ಒಟ್ಟು 18 ಮಂದಿ ಮತದಾನ ಮಾಡುವ ಮೊದಲೇ ಮೃತಪಟ್ಟಿದ್ದಾರೆ. 9 ಮಂದಿ ಮತದಾನಕ್ಕೆ ಲಭ್ಯವಾಗಿಲ್ಲ. ಇಬ್ಬರು ಮತದಾನ ಮಾಡುವುದಕ್ಕೆ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮತದಾನದ ವಿವರ:

ಲೋಕಸಭಾ ಕ್ಷೇತ್ರನೋಂದಣಿ ಸಂಖ್ಯೆಶನಿವಾರ ಮತದಾನಶೇಕಡ

ಬೆಂಗಳೂರು ಉತ್ತರ2,06294545.83

ಬೆಂಗಳೂರು ಕೇಂದ್ರ1,8221,27870.14

ಬೆಂಗಳೂರು ದಕ್ಷಿಣ2,5231,48758.94

ಒಟ್ಟು6,407371057.91