ಬಿವೈ ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಬಿಜೆಪಿಗೆ ಚೈತನ್ಯ - ಯುವಕರಿಗೆ ಪ್ರೋತ್ಸಾಹ : ಚವ್ಹಾಣ

| N/A | Published : Feb 01 2025, 07:46 AM IST

BY vijayendraa

ಸಾರಾಂಶ

ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷಕ್ಕೆ ಚೈತನ್ಯ ಬಂದಿದೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್‌ ಹೇಳಿದ್ದಾರೆ.

 ಬೀದರ್ : ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷಕ್ಕೆ ಚೈತನ್ಯ ಬಂದಿದೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್‌ ಹೇಳಿದ್ದಾರೆ.

ಔರಾದ್‌ನ ವಡವಾಂವ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿಜಯೇಂದ್ರ ವಿರುದ್ಧ ಸ್ವಪಕ್ಷೀಯಯರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ವಪಕ್ಷದವರ ನಡೆ ಸರಿಯಲ್ಲ. ಪಕ್ಷ ದೊಡ್ಡದಾಗಿದೆ. ಮನೆಯಲ್ಲಿ ಜಗಳ ಆದಂತೆ ಜಗಳ ಆಗುತ್ತಿದೆ ಎಂಬುದನ್ನು ಒಪ್ಪುತ್ತೇನೆ. ಆದರೆ, ಬಿ.ವೈ.ವಿಜಯೇಂದ್ರ ಅವರು ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಭಯ ಉಂಟಾಗಿದೆ. ವಿಜಯೇಂದ್ರ ಯುವಕರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಆದರೆ ಅಸಮಾಧಾನವನ್ನು ನಮ್ಮ ನಾಯಕರು ಸರಿಪಡಿಸುತ್ತಿಲ್ಲವೆಂಬುದೇ ನಮಗೆ ನೋವಿದೆ ಎಂದರು.

ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಇದು ಅವರಿಗೆ ಗೊತ್ತಿಲ್ಲ. ಎಲ್ಲರೂ ನಮ್ಮ ನಾಯಕರೇ. ಈ ರೀತಿ ಮಾಡಬಾರದು. ನಾನು ಯಾರ ಹೆಸರನ್ನೂ ಹೇಳಲ್ಲ. ನಮ್ಮ ನಾಯಕರನ್ನು ಸರಿಪಡಿಸಬೇಕು. ವಿಜಯೇಂದ್ರ ಒಳ್ಳೆಯ ವ್ಯಕ್ತಿ, ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾವು ತಾಯಿಯಂತೆ ಪಕ್ಷವನ್ನು ಕಾಣುತ್ತೇವೆ. ನಮಗೆ ಸಿಟ್ಟು ಬರುತ್ತಿದೆ ಎಂದು ಭಿನ್ನಮತಿಯರ ವಿರುದ್ಧ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು.

ನಾನು 19 ವರ್ಷದವನಿದ್ದಾಗಲೇ ಪಕ್ಷಕ್ಕೆ ಸೇರಿದ್ದೇನೆ. ಬಿ.ಎಸ್‌.ಯಡಿಯೂರಪ್ಪ, ಅನಂತಕುಮಾರ್, ಪ್ರಲ್ಹಾದ್ ಜೋಶಿ ಅವರು ಪಕ್ಷ ಕಟ್ಟಿದ್ದಾರೆ. ಸುಧಾಕರ್ ಬಂದು 4 ವರ್ಷ ಆಗಿದೆ. ಇಂತಹ ಆರೋಪಗಳನ್ನು ಮಾಡಬಾರದು. ಅದರಲ್ಲಿ ಹುರುಳಿಲ್ಲ. ವಿಜಯೇಂದ್ರ ಅವರಿಂದಲೇ ಸುಧಾಕರ್ ಸಂಸದ ಆಗಿದ್ದಾರೆ. ಸುಧಾಕರ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತರು. ಬಿ.ವೈ. ವಿಜಯೇಂದ್ರ, ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಟಿಕೆಟ್ ಕೊಟ್ಟಿದ್ದಕ್ಕೆ ಸಂಸದ ಆಗಿದ್ದಾರೆ ಎಂದರು.