ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಾಣೆಯಾಗಿದ್ದಾರೆ ಎಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್‌ ಅಭಿಯಾನ ಆರಂಭಿಸಿದ್ದಾರೆ. ಕಾಂಟ್ಯಾಕ್ಟ್‌ 420420420 ಎಂದು ಬರೆದ ಪೋಸ್ಟರ್‌ ಅನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂಟಿಸಲಾಗಿದೆ.

 ಬೆಂಗಳೂರು : ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಾಣೆಯಾಗಿದ್ದಾರೆ ಎಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್‌ ಅಭಿಯಾನ ಆರಂಭಿಸಿದ್ದಾರೆ.

ಮಿಸ್ಸಿಂಗ್‌ ಪರ್ಸನ್‌ ಕೃಷ್ಣ ಬೈರೇಗೌಡ ಎಂಬ ಫೋಸ್ಟರ್‌

ಮಿಸ್ಸಿಂಗ್‌ ಪರ್ಸನ್‌ ಕೃಷ್ಣ ಬೈರೇಗೌಡ ಎಂಬ ಫೋಸ್ಟರ್‌ನಲ್ಲಿ ಕೃಷ್ಣ ಬೈರೇಗೌಡ ಅವರ ಭಾವಚಿತ್ರ ಹಾಕಿ, ಪಾರ್ಟ್‌ ಟೈಮ್‌ ಎಂಎಲ್‌ಎ/ಮಿನಿಸ್ಟರ್‌, ಲಾಸ್ಟ್‌ ಸೀನ್ ಕೋಗಿಲು ಕ್ರಾಸ್‌, ಕಾಂಟ್ಯಾಕ್ಟ್‌ 420420420 ಎಂದು ಬರೆದ ಪೋಸ್ಟರ್‌ ಅನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂಟಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌

ಕ್ಷೇತ್ರದ ಪ್ರಮುಖ ವೃತ್ತಗಳು, ಬಸ್‌ ನಿಲ್ದಾಣಗಳು, ಅಂಗಡಿ-ಮುಂಗಟುಗಳ ಗೋಡೆಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ ಅಂಟಿಸಿರುವ ಬಿಜೆಪಿ ಕಾರ್ಯಕರ್ತರು, ಕಾಣೆಯಾಗಿದ್ದಾರೆ, ಕಾಣೆಯಾಗಿದ್ದಾರೆ, ಕೃಷ್ಣ ಬೈರೇಗೌಡ ಕಾಣೆಯಾಗಿದ್ದಾರೆ, ಹುಡುಕಿ ಕೊಡಿ, ಹುಡುಕಿ ಕೊಡಿ, ಕೃಷ್ಣ ಬೈರೇಗೌಡರ ಹುಡುಕಿ ಕೊಡಿ ಎಂದು ಘೋಷಣೆ ಕೂಗಿದ್ದಾರೆ.