ಕಾಂಗ್ರೆಸ್ ಸೋಲಿಗೆ ಪ್ರದೀಪ್‌ ಈಶ್ವರ್‌ ಮಾತು ಕಾರಣ

| Published : Jun 06 2024, 12:31 AM IST

ಕಾಂಗ್ರೆಸ್ ಸೋಲಿಗೆ ಪ್ರದೀಪ್‌ ಈಶ್ವರ್‌ ಮಾತು ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಹಲವು ಯೋಜನೆಗಳು, ನಾನಾ ಗ್ಯಾರಂಟಿಗಳನ್ನು ಜಾರಿ ಮಾಡಿದ್ದರೂ ಪಕ್ಷ ಸೋತಿದೆ. ಅದಕ್ಕೆ ಮೂಲ ಕಾರಣ ಪ್ರದೀಪ್ ಈಶ್ವರ್ ಮಾತನಾಡುವ ಮಾತು, ಅವರ ಭಾಷೆ ಶೈಲಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ಮಾತನಾಡಿದ ಉಡಾಫೆ ಮಾತುಗಳಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲ ಕಚ್ಚಲು ಕಾರಣ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ.ಎಸ್.ರಫೀವುಲ್ಲಾ ಹೇಳಿದರು.

ನಗರದ ತಮ್ಮ ಅಧಿಕೃತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಹಲವು ಯೋಜನೆಗಳು, ನಾನಾ ಗ್ಯಾರಂಟಿಗಳನ್ನು ಜಾರಿ ಮಾಡಿದ್ದರೂ ಪಕ್ಷ ಸೋತಿದೆ. ಅದಕ್ಕೆ ಮೂಲ ಕಾರಣ ಪ್ರದೀಪ್ ಈಶ್ವರ್ ಮಾತನಾಡುವ ಮಾತು, ಅವರ ಭಾಷೆ ಶೈಲಿ ಇವೆಲ್ಲವುಗಳಿಂದ ಬೇಸತ್ತ ಜನತೆ ಬಿಜೆಪಿಯತ್ತ ಒಲವು ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.

ಮಾತಿನ ಮೇಲೆ ಹಿಡಿತ ಇರಬೇಕು

ಲೋಕಸಭೆ ಚುನಾವಣೆ ಮತಯಾಚಿಸುವ ಸಂದರ್ಭದಲ್ಲಿ ಡಾ.ಕೆ.ಸುಧಾಕರ್ ಅವರು ಒಂದು ಮತ ಹೆಚ್ಚಿಗೆ ಪಡೆದರೂ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೋರು ಜೋರು ಭಾಷಣ ಮಾಡಿದ್ದು, ಇಂತಹ ಮಾತುಗಳೇ ಬಿಜೆಪಿ ಹೆಚ್ಚಿನ ಮತ ಪಡೆಯಲು ಕಾರಣವಾಗಿದೆ. ಮಾತಿನ ಮೇಲೆ ಹಿಡಿತವಿಲ್ಲದೆ ಇಂತಹ ಮಾತುಗಳನ್ನು ರಾಜಕಾರಣದಲ್ಲಿ ಇರುವವರು ಅದರಲ್ಲೂ ಆಡಳಿತಾರೂಢ ಪಕ್ಷದ ಶಾಸಕರು ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಇದೇ ಮಾತುಗಳು ನಮ್ಮ ಪಕ್ಷದ ಸೋಲಿಗೆ ಒಂದು ಕಾರಣ ಇದ್ದಿರಬಹುದು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮುತುವರ್ಜಿವಹಿಸಿ ಮತದಾರನ ಮನವೊಲಿಸುವ ಕೆಲಸ ಮಾಡಿದ್ದು, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರ ಉಡಾಫೆ ಮಾತುಗಳು ಇಂದು ನಮ್ಮ ಪಕ್ಷ ನೆಲ ಕಚಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.