ಸಾರಾಂಶ
ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗೆ ಎಂಎ (ಅರ್ಲಿ ಮಾರ್ನಿಂಗ್), ಪಿಎಂ (ಪೋಸ್ಟ್ ಮೆರಿಡಿಯಂ) ಎಂಬುದರ ಅರಿವಿಲ್ಲ. ಅಂಥವರು ಪ್ರಧಾನಿ ಕಾರ್ಯಾಲಯ ನಡೆಸ್ತಾರಾ? ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಂದೊಮ್ಮೆ ಕಿಡಿಕಾರಿದ್ದರಂತೆ.
ನವದೆಹಲಿ: ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗೆ ಎಂಎ (ಅರ್ಲಿ ಮಾರ್ನಿಂಗ್), ಪಿಎಂ (ಪೋಸ್ಟ್ ಮೆರಿಡಿಯಂ) ಎಂಬುದರ ಅರಿವಿಲ್ಲ. ಅಂಥವರು ಪ್ರಧಾನಿ ಕಾರ್ಯಾಲಯ ನಡೆಸ್ತಾರಾ? ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಂದೊಮ್ಮೆ ಕಿಡಿಕಾರಿದ್ದರಂತೆ.
ಪ್ರಣಬ್ ಮುಖರ್ಜಿ ಒಮ್ಮೆ, ಕೋರಿಕೆ ಮೇರೆಗೆ ರಾಹುಲ್‌ಗೆ ಸಂಜೆ ವೇಳೆ ಭೇಟಿಗೆ ಅವಕಾಶ ಕಲ್ಪಿಸಿದ್ದರಂತೆ. ಆದರೆ ರಾಹುಲ್ ಕಚೇರಿ ಪಿಎಂ ಎಂಬುದನ್ನು ಸರಿಯಾಗಿ ಗಮನಿಸಿದೇ ಬೆಳಗ್ಗೆಯೇ ರಾಹುಲ್ ಅವರನ್ನು ಪ್ರಣಬ್ ಭೇಟಿಗೆ ಕಳುಹಿಸಿದ್ದಂತೆ. ವಾಕಿಂಗ್ ವೇಳೆ ಯಾರನ್ನೂ ಭೇಟಿಯಾಗಲು ಬಯಸದೇ ಇದ್ದರೂ ಅನಿವಾರ್ಯವಾಗಿ ರಾಹುಲ್ ಅವರನ್ನು ಬರಮಾಡಿಕೊಂಡು ಮಾತನಾಡಿಸಿ ಪ್ರಣಬ್ ಕಳುಹಿಸಿಕೊಟ್ಟಿದ್ದರಂತೆ. ಘಟನೆ ಬಳಿಕ ರಾಹುಲ್ ಕಚೇರಿ ಸಿಬ್ಬಂದಿ ಬಗ್ಗೆ ಪ್ರಣಬ್ ಸಿಟ್ಟಾಗಿದ್ದರು ಎಂದು ಪ್ರಣಬ್‌ರ ಪುತ್ರಿ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.