ರಾಹುಲ್‌ ಗಾಂಧಿಗೆ ಅನಾರೋಗ್ಯ: ರಾಂಚಿ ರ್‍ಯಾಲಿಗೆ ಗೈರು

| Published : Apr 22 2024, 02:04 AM IST / Updated: Apr 22 2024, 04:21 AM IST

rahul gandhi 2.jpg

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಢೀರನೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇಂಡಿಯಾ ಕೂಟದಿಂದ ರಾಂಚಿಯಲ್ಲಿ ಅಯೋಜನೆಗೊಂಡಿದ್ದ ಸಮಾವೇಶಕ್ಕೆಅವರು ಗೈರಾಗಿದ್ದಾರೆ.

ರಾಂಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಢೀರನೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇಂಡಿಯಾ ಕೂಟದಿಂದ ರಾಂಚಿಯಲ್ಲಿ ಅಯೋಜನೆಗೊಂಡಿದ್ದ ಸಮಾವೇಶಕ್ಕೆ ಅವರು ಗೈರಾಗಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಮಾಹಿತಿ ನೀಡಿದ್ದು, ‘ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ರಾಹುಲ್‌ ಗಾಂಧಿ ದೆಹಲಿಯಲ್ಲಿಯೇ ಉಳಿದಿದ್ದಾರೆ’ ಎಂದಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮಹಾಮೈತ್ರಿ ಕೂಟದ 14 ಪಕ್ಷಗಳು ಒಗ್ಗೂಡಿ ಇಲ್ಲಿನ ಪ್ರಭಾತ್ ತಾರಾ ಮೈದಾನದಲ್ಲಿ ‘ ಉಲ್ಗುಲನ್ ನ್ಯಾಯ್ ’ ಹೆಸರಿನ ಸಮಾವೇಶದಲ್ಲಿ ಭಾನುವಾರ ರಾಹುಲ್ ಪಾಲ್ಗೊಳ್ಳಬೇಕಿತ್ತು.

 ಆದರೆ ಹುಷಾರಿಲ್ಲದ ಕಾರಣ ಸಾಧ್ಯವಾಗಲಿಲ್ಲ.ರಾಹುಲ್‌ ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳನ್ನು ಸುತ್ತಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದರು.