ಬಂಡಾಯ ಅಭ್ಯರ್ಥಿ ಈಶ್ವರಪ್ಪ 33 ಕೋಟಿಯ ಒಡೆಯ

| Published : Apr 13 2024, 10:01 AM IST

KS Eshwarappa

ಸಾರಾಂಶ

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಒಟ್ಟು ಆಸ್ತಿ 33.50 ಕೋಟಿ ರು. ಈ ಪೈಕಿ 8.5 ಕೋಟಿ ರು.ಚರಾಸ್ತಿ, 25.45 ಕೋಟಿ ರು.ಸ್ಥಿರಾಸ್ಥಿ.

ಶಿವಮೊಗ್ಗ :  ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಒಟ್ಟು ಆಸ್ತಿ 33.50 ಕೋಟಿ ರು. ಈ ಪೈಕಿ 8.5 ಕೋಟಿ ರು.ಚರಾಸ್ತಿ, 25.45 ಕೋಟಿ ರು.ಸ್ಥಿರಾಸ್ಥಿ.

ಅವರ, ಅವರ ಪತ್ನಿ ಜಯಲಕ್ಷೀ ಬಳಿ ಯಾವುದೇ ವಾಹನವಿಲ್ಲ. ಈಶ್ವರಪ್ಪನವರು 6.57 ಕೋಟಿ ರು. ಸಾಲ ಮಾಡಿದ್ದಾರೆ, ಜೊತೆಗೆ, ಹೆಂಡತಿಗೆ 15 ಲಕ್ಷ ರು. ಸಾಲ ನೀಡಿದ್ದಾರೆ. ತಮ್ಮ ಮೇಲಿದ್ದ ಎಲ್ಲಾ 5 ಮೊಕದ್ದಮೆಗಳಿಂದ ಖುಲಾಸೆಗೊಂಡಿದ್ದಾರೆ. 

ಈಶ್ವರಪ್ಪನವರ ಬಳಿ 22.35 ಕೋಟಿ ರು.ಮತ್ತು ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ 3.10 ಕೋಟಿ ರು ಸೇರಿದಂತೆ ಒಟ್ಟು 25.45 ಕೋಟಿ ರು.ಮೌಲ್ಯದ ಕೃಷಿ ಮತ್ತು ವಾಣಿಜ್ಯ ಭೂಮಿ ಇದೆ.