ಸಾರಾಂಶ
ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಕರ್ನಾಟಕದ ಗ್ರಾಮೀಣಾಭಿವೃದ್ಧಿಗೆ 25 ಸಾವಿರ ಕೋಟಿ ರುಪಾಯಿ ಮೊತ್ತದ ರಸ್ತೆ ಯೋಜನೆಗಳು ಮಂಜೂರಾಗಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ನವದೆಹಲಿ : ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಕರ್ನಾಟಕದ ಗ್ರಾಮೀಣಾಭಿವೃದ್ಧಿಗೆ 25 ಸಾವಿರ ಕೋಟಿ ರುಪಾಯಿ ಮೊತ್ತದ ರಸ್ತೆ ಯೋಜನೆಗಳು ಮಂಜೂರಾಗಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಮೋದಿ ಅವರ ವಿಕಸಿತ ಭಾರತದ ಕನಸಿನ ಭಾಗವಾಗಿ ರಾಜ್ಯದಲ್ಲಿ ಗ್ರಾಮೀಣ ಸಂಪರ್ಕವನ್ನು ಬಲಪಡಿಸುವುದು ಮತ್ತು ಆರ್ಥಿಕ ಬೆಳವಣಿಗೆಗೆ ವೇಗನೀಡುವ ಉದ್ದೇಶದ ಭಾಗವಾಗಿ ಪಿಎಂ-ಜನ್‌ಮನ್ ಯೋಜನೆ ಅಡಿ 23.766 ಕಿ.ಮೀ. ಉದ್ದದ 18 ರಸ್ತೆಗಳು, 2 ಸೇತುವೆಗಳು ಮಂಜೂರಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.
ಈ 25 ಸಾವಿರ ಕೋಟಿ ರು. ವೆಚ್ಚದ ರಸ್ತೆ ಯೋಜನೆಗಳು ಗುಡ್ಡಗಾಡು ಜನ ವಾಸಿಸುವ ಪ್ರದೇಶಗಳ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೆರವಾಗುತ್ತದೆ. ಗ್ರಾಮೀಣ ಭಾಗವನ್ನು ನಗರಗಳೊಂದಿಗೆ ಸಂಪರ್ಕಿಸಲು ಅನುಕೂಲ ಮಾಡಿಕೊಂಡುತ್ತದೆ. ಜತೆಗೆ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಜನರಿಗೆ ಅನುವು ಮಾಡಿಕೊಡುತ್ತದೆ ಎಂದು ಸಚಿವಾಲಯ ಹೇಳಿದೆ.