ಬಂದೂಕು ಹಿಡಿದಿದ್ದ ನಕ್ಸಲ್‌ ಸೀತಕ್ಕ ಈಗ ತೆಲಂಗಾಣ ಸಚಿವೆ!

| Published : Dec 08 2023, 01:45 AM IST

ಸಾರಾಂಶ

ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ವಾಯುಪಡೆಗೆ 8 ನಿವೃತ್ತಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಭೇಟಿ ಮಾಡಿದ್ದಾರೆ.

ವಕೀಲೆಯಾಗಿ, ಶಾಸಕಿಯಾಗಿ, ಕಾಂಗ್ರೆಸ್‌ನಿಂದ ಸಚಿವೆಯೂ ಆದ ಸೀತಕ್ಕ

ಹೈದರಾಬಾದ್‌: ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿ ಇದೀಗ ಸಚಿವೆಯೂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಕಾಂಗ್ರೆಸ್‌ ನಾಯಕಿ ಸೀತಕ್ಕ (52) ಹಿಂದೊಮ್ಮೆ ಬಂದೂಕು ಹಿಡಿದು ನಿಂತಿದ್ದ ಮಾವೋವಾದಿ ನಾಯಕಿ. ಇವರ ಜೀವನದ ಹಾದಿಯೇ ವಿಶಿಷ್ಟವಾಗಿದೆ.

ಕೋಯಾ ಬುಡಕಟ್ಟು ಜನಾಂಗಕ್ಕೆ ಸೇರಿದ ಸೀತಕ್ಕ ಚಿಕ್ಕ ವಯಸ್ಸಲ್ಲೇ ಮಾವೋವಾದಿಗಳಿಗೆ ಗುಂಪಿಗೆ ಸೇರಿ ಬಳಿಕ ಸ್ಥಳೀಯ ಮಾವೋವಾದಿ ನಾಯಕಿಯೂ ಆಗಿದ್ದರು. ಪೊಲೀಸರೊಂದಿಗೆ ಹಲವಾರು ಬಾರಿ ಗುಂಡಿನ ಕಾಳಗ ನಡೆಸಿದ್ದ ಸೀತಕ್ಕ ಎನ್‌ಕೌಂಟರ್‌ನಲ್ಲಿ ತನ್ನ ಪತಿ ಮತ್ತು ಸಹೋದರನನ್ನು ಕಳೆದುಕೊಂಡಿದ್ದರು. ಕೊನೆಗೆ ನಕ್ಸಲ್‌ವಾದದಿಂದ ಆಚೆ ಬಂದ ಆಕೆ 1994ರಲ್ಲಿ ಕ್ಷಮಾದಾನ ಕೋರಿ ಪೊಲೀಸರಿಗೆ ಶರಣಾಗಿದ್ದರು. ಇದಾದ ಬಳಿಕ ಶಿಕ್ಷಣ ಪೂರೈಸಿದ ಸೀತಕ್ಕ ಕಾನೂನು ಪದವಿ ಪಡೆದು, ವಕೀಲೆಯಾಗಿ ಸೇವೆ ಸಲ್ಲಿಸಿದರು. ಬಳಿಕ ತೆಲುಗು ದೇಶಂ ಪಕ್ಷ (ಟಿಡಿಪಿ) ಸೇರಿದ ಸೀತಕ್ಕ 2004ರ ಚುನಾವಣೆಯಲ್ಲಿ ಮುಳಗು ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಬಳಿಕ 2018ರಲ್ಲಿ ಬಿಆರ್‌ಎಸ್‌ನಿಂದ ಗೆದ್ದು, ಇದೀಗ ಕಾಂಗ್ರೆಸ್‌ ಸೇರಿ ಸಚಿವೆಯಾಗಿದ್ದಾರೆ. ಸದ್ಯ ರಾಜ್ಯಾದ್ಯಂತ ಸೀತಕ್ಕೆ ಭಾರೀ ಜನಪ್ರಿಯತೆ ಹೊಂದಿದ್ದಾರೆ.