ನೆಂಟಸ್ತನ ಮಾತಾಡಲು ಬಂದಿಲ್ಲ: ಸ್ಪೀಕರ್‌ ವಿರುದ್ಧ ಕಂದಕೂರು ಕಿಡಿ

| N/A | Published : Aug 22 2025, 10:49 AM IST

 UT Khader

ಸಾರಾಂಶ

ಜೆಡಿಎಸ್‌ ಸದಸ್ಯ ಶರಣಗೌಡ ಕಂದಕೂರು ಅವರು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ವಿರುದ್ಧ ರೇಗಾಡಿ, ‘ಏನ್ರೀ...ನನ್ನ ನೆಂಟಸ್ತನ ಮಾತನಾಡಲು ಬಂದಿದ್ದೀನಾ?’ ಎಂದು ಕಾಗದಗಳನ್ನು ಮೇಜಿಗೆ ಕುಟ್ಟಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ನಡೆಯಿತು.

  ವಿಧಾನಸಭೆ :  ಜೆಡಿಎಸ್‌ ಸದಸ್ಯ ಶರಣಗೌಡ ಕಂದಕೂರು ಅವರು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ವಿರುದ್ಧ ರೇಗಾಡಿ, ‘ಏನ್ರೀ...ನನ್ನ ನೆಂಟಸ್ತನ ಮಾತನಾಡಲು ಬಂದಿದ್ದೀನಾ?’ ಎಂದು ಕಾಗದಗಳನ್ನು ಮೇಜಿಗೆ ಕುಟ್ಟಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ನಡೆಯಿತು.

ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಕುರಿತು ಬಿಲ್‌ ವ್ಯಾಪ್ತಿಯಲ್ಲಿ ಮಾತ್ರ ಮಾತನಾಡುವಂತೆ ಖಾದರ್‌ ಸಲಹೆ ನೀಡಿದರು. ಇದಕ್ಕೆ ತಕ್ಷಣ ಗರಂ ಆದ ಶರಣಗೌಡ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ, ನಾನು ಪ್ರತಿ ಬಾರಿಯೂ ಮಾತನಾಡಲು ಎದ್ದು ನಿಂತಾಗ ಹೀಗೆ ಮಾಡುತ್ತೀರಿ. ಬಿಲ್‌ ಬಗ್ಗೆ ಮಾತನಾಡದೆ ‘ನನ್ನ ನೆಂಟಸ್ತನ ಮಾತನಾಡುತ್ತೀನಾ?’ ಎಂದು ರೇಗಾಡಿದರು.

ಈ ವೇಳೆ ಎಚ್.ಕೆ.ಪಾಟೀಲ್ ಮಧ್ಯಪ್ರವೇಶ ಮಾಡಿ, ನೀವು ಮೊದಲ ಸಲ ಆಯ್ಕೆ ಆಗಿ ಬಂದಿದ್ದೀರಿ. ಈ ರೀತಿಯ ವರ್ತನೆ ಬೇಡ. ಪೀಠಕ್ಕೆ ಗೌರವ ಕೊಡುವುದು ಕಲಿಯಿರಿ ಎಂದು ಬುದ್ದಿವಾದ ಹೇಳಿದರು.

 

Read more Articles on