ಲೋಕಸಭೆ ಚುನಾವಣೆ ಗರಿಗೆದರಿದ್ದು, ಬಿಜೆಪಿ ಕಳೆದ ಸಲಕ್ಕಿಂತ ಈ ಬಾರಿ ತುಂಬಾ ಶಕ್ತಿಶಾಲಿಯಾಗಿದೆ. ಅದು ಕಳೆದ ಬಾರಿಯಂತೆ ಈ ಬಾರಿಯೂ ಎರಡನೇ ಸ್ಥಾನಕ್ಕೆ ತೃಪ್ತಿಪಡಲಿದೆ ಎಂದು ತಿರುವನಂತಪುರದ ಕಾಂಗ್ರೆಸ್‌ ಸಂಸದ ಹಾಗೂ ಅಭ್ಯರ್ಥಿ ಶಶಿ ತರೂರ್‌ ಹೇಳಿದ್ದಾರೆ.

ತಿರುವನಂತಪುರ: ಲೋಕಸಭೆ ಚುನಾವಣೆ ಗರಿಗೆದರಿದ್ದು, ಬಿಜೆಪಿ ಕಳೆದ ಸಲಕ್ಕಿಂತ ಈ ಬಾರಿ ತುಂಬಾ ಶಕ್ತಿಶಾಲಿಯಾಗಿದೆ. ಅದು ಕಳೆದ ಬಾರಿಯಂತೆ ಈ ಬಾರಿಯೂ ಎರಡನೇ ಸ್ಥಾನಕ್ಕೆ ತೃಪ್ತಿಪಡಲಿದೆ ಎಂದು ತಿರುವನಂತಪುರದ ಕಾಂಗ್ರೆಸ್‌ ಸಂಸದ ಹಾಗೂ ಅಭ್ಯರ್ಥಿ ಶಶಿ ತರೂರ್‌ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು,‘ಬಿಜೆಪಿ ತನ್ನ ಶಕ್ತಿಶಾಲಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ರನ್ನು ತಿರುವನಂತಪುರದಿಂದ ಇಳಿಸಿದೆ. ಅದಕ್ಕೆ ಕೇರಳದಲ್ಲಿ ಗೆಲುವು ಸಾಧಿಸುವ ಆಶಾವಾದವಿದ್ದರೆ ಇದೇ ಕ್ಷೇತ್ರ. ಆದರೆ ಕಮ್ಯುನಿಸ್ಟ್‌ ಪಕ್ಷದ ಚುನಾವಣೆ ಪ್ರಚಾರ ಬಿರುಸಿಲ್ಲದ ಕಾರಣ ಈ ಬಾರಿಯೂ ಎರಡನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಗಿದೆ’ ಎಂದು ಹೇಳಿದರು.