‘ಮೋದಿ ಮೋದಿ’ ಎನ್ನುವವರ ಕಪಾಳಕ್ಕೆ ಬಾರಿಸಿ: ಶಿವರಾಜ ತಂಗಡಗಿ!

| Published : Mar 26 2024, 01:46 AM IST / Updated: Mar 26 2024, 08:13 AM IST

Shivaraj Tangadagi
‘ಮೋದಿ ಮೋದಿ’ ಎನ್ನುವವರ ಕಪಾಳಕ್ಕೆ ಬಾರಿಸಿ: ಶಿವರಾಜ ತಂಗಡಗಿ!
Share this Article
  • FB
  • TW
  • Linkdin
  • Email

ಸಾರಾಂಶ

''ಮೋದಿ ಮೋದಿ ಎಂದು ಕೂಗುವ ಯುವಕರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು'' ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

''ಮೋದಿ ಮೋದಿ ಎಂದು ಕೂಗುವ ಯುವಕರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು'' ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಂಗಡಗಿ ಈ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರಟಗಿಯಲ್ಲಿ ಭಾನುವಾರ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ವೇಳೆ ತಂಗಡಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುತ್ತೇನೆಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ ಆ ಭರವಸೆಯನ್ನು ಅವರು ಈವರೆಗೂ ಈಡೇರಿಸಿಲ್ಲ.

10 ವರ್ಷ ಅಧಿಕಾರ ನಡೆಸಿದರೂ ಯುವಕರಿಗೆ ಉದ್ಯೋಗ ಕೊಡಲು ಆಗಿಲ್ಲ. ಅವರು ಹೇಳಿದಂತೆ ಆಗಿದ್ದರೆ ಹತ್ತು ವರ್ಷದಲ್ಲಿ ದೇಶದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಉದ್ಯೋಗದ ಬದಲು ಪಕೋಡಾ ಮಾರಲು ಹೋಗಿ ಎಂದರು. 

ಇದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು. ಆದರೂ ''''ಮೋದಿ ಮೋದಿ'''' ಎಂದು ಹೇಳುವ ಯುವಕರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದರು.

ಮೋದಿ ಸರ್ಕಾರ ಅಭಿವೃದ್ಧಿ ವಿಚಾರದಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಅವರಿಗೆ ಮತ ಕೇಳಲು ನಾಚಿಕೆಯಾಗಬೇಕು. 

ಯಾವ ಮುಖ ಇಟ್ಟುಕೊಂಡು ಅವರು ಮತದಾರರ ಮುಂದೆ ಹೋಗುತ್ತಾರೆ. ಅವರಿಗೆ ಯಾವುದೇ ಅಭಿವೃದ್ಧಿ ಮಾಡುವ ಸಾಮರ್ಥ್ಯವೂ ಇಲ್ಲ ಎಂದು ಕಿಡಿಕಾರಿದರು.