ಸಾರಾಂಶ
ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೈಗಾರಿಕಾ ವಲಯ ಸ್ಥಾಪಿಸುವ ತಮ್ಮ ಪ್ರಯತ್ನಕ್ಕೆ ಹಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪಿಸಿದರು.
ಶ್ರೀನಿವಾಸಪುರ : ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೈಗಾರಿಕಾ ವಲಯ ಸ್ಥಾಪಿಸುವ ತಮ್ಮ ಪ್ರಯತ್ನಕ್ಕೆ ಹಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪಿಸಿದರು. ಅವರು ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಜೆ.ತಿಮ್ಮಸಂದ್ರ ಪಂಚಾಯಿತಿ ವತಿಯಿಂದ ವಿವಿಧ ಫಲಾನುಭವಿಗಳಿಗೆ ಸೌಲತ್ತುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಕೈಜೋಡಿಸವ ಅವಶ್ಯಕತೆ ಇದ್ದು, ಇದಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಕೈಗಾರಿಕೆಗೆ 6 ಸಾವಿರ ಎಕರೆ
ತಾವು ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು, ತಾಲೂಕಿನಲ್ಲಿ ಆರು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಲು ಯೋಜನೆಯನ್ನು ಕಾರ್ಯಗತಗೋಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕೆ ಕೈಗಾರಿಕಾ ವಲಯ ಸ್ಥಾಪನೆಗೆ ಅಡ್ಡಿಪಡಿಸುತ್ತಿದ್ದಾರೆ. ಇದು ಅತ್ಯಂತ ಬೇಸರದ ವಿಚಾರ ಎಂದರು.
ಶಾಲೆ, ದೇವಾಲಯ ದುರಸ್ತಿ
ಶಾಸಕರ ಅನುದಾನಕ್ಕೆ ಸಂಬಂದಿಸಿದಂತೆ 3.50 ಕೋಟಿ ಅನುದಾನ ಬಂದಿದೆ ಇದನ್ನು ಮೊದಲ ಆದ್ಯತೆಯಾಗಿ ಕೇವಲ ಧಾರ್ಮಿಕ ಸಂಸ್ಥೆಗಳ ದುರಸ್ತಿ ಹಾಗೂ ಸರ್ಕಾರಿ ಶಾಲೆಗಳ ದುರಸ್ತಿಗಾಗಿ ವಿನಿಯೋಗಿಸಲಾಗುವುದು. ತಮ್ಮ ಸುಧೀರ್ಘ ರಾಜಕೀಯ ಪ್ರಯಾಣದಲ್ಲಿ ಯಾರಿಗೂ ನೋವು ಕೊಟ್ಟು ರಾಜಕೀಯ ಮಾಡಿಲ್ಲ. ಮತದಾರನ ಋಣ ತೀರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಕ್ಷೇತ್ರದ ಜನತೆ ನನ್ನನು 5 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ನನಗೆ ರಾಜಕೀಯ ಶಕ್ತಿ ತುಂಬಿದ್ದಾರೆ ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ನೋವನ್ನುಂಟು ಮಾಡುವ ಕೆಲಸ ಮಾಡಿಲ್ಲ. ಸಮಾಜದ ಎಲ್ಲಾ ಸಮುದಾಯಗಳವರನ್ನು ಅತ್ಯಂತ ಗೌರ್ವಾನಿತವಾಗಿ ನಡೆಸಿಕೊಂಡು ಭೇದ ಭಾವ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿ ಅವರ ಮನಸ್ಸುನ್ನು ಗೆದ್ದಿರುತ್ತೇನೆ.
ಕ್ಷೇತ್ರದ ಜನರೇ ನನ್ನ ಆಸ್ತಿ
ತಾವು ಆಸ್ತಿ ಮಾಡಬೇಕಿದ್ದರೆ ನೂರಾರು ಎಕರೆ ಜಮೀನು ಮಾಡಬಹುದಾಗಿತ್ತು. ಅದರ ಅವಶ್ಯಕತೆ ನನಗಿಲ್ಲ. ನಮ್ಮ ಹಿರಿಯರು ಮಾಡಿರುವ ಸಂಪಾದನೆಯಲ್ಲಿ ನಾನು ಜೀವನ ಮಾಡುತ್ತಿದ್ದೇನೆ. ನನಗೆ ರಾಜಕೀಯ ಶಕ್ತಿ ಕೊಟ್ಟಿರುವ ಜನರೆ ನನಗೆ ಆಸ್ತಿ ಕ್ಷೇತ್ರದ ಜನತೆಗೆ ಕೆಟ್ಟ ಹೆಸರು ತರವ ಕೆಲಸ ಮಾಡುವುದಿಲ್ಲ. ಅಂತಹ ಮನೋಸ್ಥಿತಿ ನನ್ನದಲ್ಲ ಎಂದರು.
ಇದೇ ಕಾರ್ಯಕ್ರಮದಲ್ಲಿ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್.ಶಂಕರರೆಡ್ಡಿ ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಿಂದ ಉಚಿತವಾಗಿ 8 ಶುದ್ದ ಕುಡಿಯುವ ನೀರಿನ ಪಿಲ್ಟರ್ ನೀಡುವುದಾಗಿ ಘೋಷಿಸಿದರು. ಗ್ರಾಮ ಪಂಚಾಯಿತಿಯಿತಿ ಅನುದಾನ ಶೇಕಡ 5ರ ಅಡಿಯಲ್ಲಿ ಐದು ಮಂದಿ ವಿಕಲಚೇತನರಿಗೆ ತಲಾ 50 ಸಾವಿರ ರೂಗಳ ಚೆಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಜೆಡಿಎಸ್ ಮುಖಂಡ ಸಿ ಎಂ ಆರ್ ಶ್ರೀನಾಥ್ ಮಾತನಾಡಿದರು
ಶಾಸಕರ ಜನ್ಮದಿನ ಆಚರಣೆ
ಇದೆ ಸಂದರ್ಭದಲ್ಲಿ ಶಾಸಕ ವೆಂಕಟಶಿವಾರೆಡ್ದಿ ಅವರ 77ನೇ ಜನುಮದಿನದ ಅಂಗವಾಗಿ ಜೆ.ತಿಮ್ಮಸಂದ್ರ ಭಾಗದ ಯುವ ಕಾರ್ಯಕರ್ತರು ಬೃಹದಕಾರದ ಕೆಕ್ ಕತ್ತರಿಸಿ ಶಾಸಕರಿಗೆ ಶುಭಾಶಯ ತಿಳಿಸಿ ಸಂಭ್ರಮಿಸಿದರು.ಕೋಲಾರ ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಜೆ. ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ. ವಿ. ನಾಗೇಶ್‌ರೆಡ್ಡಿ, ಮುಖಂಡರಾದ ಶಿವಪುರ ಗಣೇಶ್, ಸುರೇಶ್‌ಬಾಬು, ರಾಮಕೃಷ್ಣಾರೆಡ್ಡಿ, ಎ.ವೆಂಟರೆಡ್ಡಿ, ಶ್ರೀರಾಮರೆಡ್ಡಿ, ಸಿವಿಎರ್ ಚೌಡರೆಡ್ಡಿ, ಪೂಲ್‌ಶಿವಾರೆಡ್ಡಿ, ಕಾರ್‌ಬಾಬು, ಗೂರವಿಮಾಕಲಹಳ್ಳಿ ಜಿ.ಆರ್.ಶ್ರೀನಿವಾಸ್, ಪಿಡಿಓ ವಿನೋದಮ್ಮ, ಕಾರ್ಯದರ್ಶಿ ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.