ಸಾರಾಂಶ
ಪ್ರಶ್ನೆಗಾಗಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಿಂದ ವಜಾಗೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ಘಟಾನುಘಟಿ ನಾಯಕರು ಬೆಂಬಲ ನೀಡಿದ್ದಾರೆ.
ನವದೆಹಲಿ: ಪ್ರಶ್ನೆಗಾಗಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಿಂದ ವಜಾಗೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ಘಟಾನುಘಟಿ ನಾಯಕರು ಬೆಂಬಲ ನೀಡಿದ್ದಾರೆ.
ವಜಾಗೊಂಡ ಬಳಿಕ ಮಹುವಾ ಸಂಸತ್ತಿನಿಂದ ಹೊರಬಂದು ಸುದ್ದಿಗೋಷ್ಠಿ ನಡೆಸಿದಾಗ ಸೋನಿಯಾ ಸೇರಿ ಹಲವಾರು ಪ್ರಮುಖ ವಿಪಕ್ಷಗಳ ನಾಯಕರು, ಮಹುವಾ ಬೆನ್ನ ಹಿಂದೆಯೇ ನಿಂತು ಬೆಂಬಲ ಪ್ರಕಟಿಸಿದರು.ಬಳಿಕ ವಿಪಕ್ಷ ನಾಯಕರು ಹಾಗೂ ಮಹುವಾ ಗಾಂಧಿ ಪ್ರತಿಮೆ ಬಳಿ ಹೋಗಿ ನಿಂತು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.