ನೈಸ್ ಸಂಗ್ರಹಿಸುತ್ತಿರುವ ಟೋಲ್‌ಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಬರುವುದಿಲ್ಲ. ನಾವು ಏನೂ ಮಾಡಲಾಗುವುದಿಲ್ಲ. ಬಾಧಿತ ವ್ಯಕ್ತಿಗಳು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನೈಸ್ ಸಂಗ್ರಹಿಸುತ್ತಿರುವ ಟೋಲ್‌ಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಬರುವುದಿಲ್ಲ. ನಾವು ಏನೂ ಮಾಡಲಾಗುವುದಿಲ್ಲ. ಬಾಧಿತ ವ್ಯಕ್ತಿಗಳು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೈಸ್ ಸಂಸ್ಥೆಗೆ ಪಿಪಿಪಿ ಮಾದರಿಯಲ್ಲಿ ರಸ್ತೆಯನ್ನು 30 ವರ್ಷಕ್ಕೆ ಕೊಟ್ಟಿದ್ದೇವೆ, ಈಗ 20 ವರ್ಷ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ಹಿಂದೆಯೂ ಹೋಗಲಾಗದೆ, ಮುಂದೆ ಬರಲೂ ಆಗದ ಸ್ಥಿತಿಯಲ್ಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಹಿಂದೆ ಟೋಲ್ ದರ ಹೆಚ್ಚಳ ಮಾಡಬಾರದು ಎಂದು ಸರ್ಕಾರ ನ್ಯಾಯಾಲಯಕ್ಕೆ ಹೋಗಿತ್ತು. ಆದರೂ ನ್ಯಾಯಾಲಯದಿಂದ ಆದೇಶ ಮಾಡಿಸಿಕೊಂಡು ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಟೋಲ್ ವಿಚಾರದಲ್ಲಿ ನಮ್ಮ ನಿಯಂತ್ರಣವಿಲ್ಲ. ಕೋರ್ಟ್, ಕಂಪೆನಿ ಹಾಗೂ ಬಾಧಿತ ಹೋರಾಟಗಾರರಿಗೆ ಬಿಟ್ಟದ್ದು. ನಾವು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ ನಮ್ಮ ಪರವಾಗಿ ಆದೇಶ ಆಗಿಲ್ಲ ಎಂದು ಸಚಿವರು ಹೇಳಿದ್ದಾರೆ.
ಬಾಕ್ಸ್...ಪ್ರಚೋದನೆ ನೀಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಎಫ್‌ಐಆರ್ ಹಾಕಿದರೂ ಟೋಲ್ ಕಟ್ಟಬೇಡಿ ಎಂದು ಜವಾಬ್ದಾರಿಯುತ ಕೇಂದ್ರ ಸಚಿವ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಸಾರ್ವಜನಿಕರಿಗೆ ಪ್ರಚೋದನೆ ನೀಡಿ ಮಾತನಾಡಿದರೆ ಏನು ಮಾಡಲು ಆಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನ್ಯಾಯಾಲಯ ಇದೆ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ನ್ಯಾಯ ಒದಗಿಸುವ ಬದಲು ಜನರಿಗೆ ಕಾನೂನು ಬಾಹಿರವಾಗಿ ಪ್ರಚೋದನೆ ನೀಡುವುದು ಸರಿಯಲ್ಲ. ಕೇಂದ್ರ ಸಚಿವರು ಈ ರೀತಿ ಮಾತನಾಡಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.